Advertisement
ಮೀಸಲಾತಿ ನೀತಿ ಘೋಷಿಸುವಾಗ ದೇಶಪ್ರೇಮಿ ಗಳ ಮೊಮ್ಮಕ್ಕಳಿಗೆ ಮೀಸಲಾತಿ ನೀಡದೆ, ರಜಾಕಾರರ ಮೊಮ್ಮಕ್ಕಳಿಗೆ ನೀಡಬೇಕೇ ಎಂದು ಬಾಂಗ್ಲಾದೇಶ ಪ್ರಧಾನಮಂತ್ರಿ ಶೇಖ್ ಹಸೀನಾ ಹೇಳಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಪ್ರತಿಭಟನನಿರತ ವಿದ್ಯಾರ್ಥಿಗಳು “ನಾವು ರಜಾಕಾರರು’ ಎಂದು ಘೋಷಣೆ ಗಳನ್ನು ಕೂಗುತ್ತಿದ್ದಾರೆ. “ನೀವು ಯಾರು? ನಾನು ಯಾರು? ರಜಕಾರ್, ರಜಾಕಾರ್’ ಎಂದು ಘೋಷಣೆ ಕೂಗುತ್ತಿದ್ದಾರೆ. ಈ ಘೋಷಣೆಯಿಂದ ಪ್ರಭಾವಿತರಾಗಿ ಹಲವರು ಪ್ರತಿಭಟನೆಯನ್ನು ಸೇರುತ್ತಿದ್ದಾರೆ.
ಢಾಕಾದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಯಲ್ಲಿ ದೇಶಾದ್ಯಂತ ರವಿವಾರ ಮಧ್ಯರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಪ್ರತಿಭಟನೆಯನ್ನು ನಿಯಂತ್ರಣ ಮಾಡುವುದಕ್ಕಾಗಿ ಪ್ರಮುಖ ನಗರಗಳಲ್ಲಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಪ್ರತಿಭಟನಕಾರನ್ನು ನಿಯಂತ್ರಣ ಮಾಡಲು ಹಲವು ಬಾರಿ ಗುಂಡು, ಅಶ್ರುವಾಯು ಸಿಡಿಸಲಾಗಿದೆ. ರಬ್ಬರ್ ಬುಲೆಟ್‌ಗಳನ್ನು ಬಳಕೆ ಮಾಡಲಾಗಿದೆ. ದೇಶಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಹೀಗಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
Related Articles
ಪಾಕಿಸ್ಥಾನದಿಂದ ಬಾಂಗ್ಲಾದೇಶ ಸ್ವತಂತ್ರವಾಗುವು ದ ಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾದವರ ಕುಟುಂಬದವರಿಗೆ ಸರಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲಾತಿ ನೀಡಲು ಸರಕಾರ ನಿರ್ಧ ರಿಸಿತ್ತು. ಇದನ್ನು ವಿರೋಧಿಸಿ ಅರ್ಹತೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಇದೀಗ ಈ ಪ್ರತಿಭಟನೆ ದಂಗೆಯ ರೂಪ ಪಡೆದುಕೊಂಡಿದ್ದು, ಈವರೆಗೆ ಸುಮಾರು 115 ಮಂದಿ ಅಸುನೀಗಿದ್ದಾರೆ. ಇದರಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದಾರೆ. ದಿನ ಕಳೆದಂತೆ ಪ್ರತಿಭಟನೆಯ ಕಾವು ಹೆಚ್ಚಳವಾಗುತ್ತಿದ್ದು, ಪ್ರತಿ ಭಟನ ನಿರತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.
Advertisement
ಭಾರತದ ವಿದ್ಯಾರ್ಥಿಗಳ ಮೇಲೇನು ಪರಿಣಾಮ?ಗಲಭೆಯ ಕಾರಣದಿಂದಾಗಿ ಭಾರತದ ವಿದ್ಯಾರ್ಥಿ ಗಳು ಸ್ವದೇಶಕ್ಕೆ ಮರಳಲು ಕಷ್ಟ ಪಡುವಂತಾಗಿದೆ. ಹಲವರು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿ ದ್ದರೂ ಸಹ ವಿಮಾನಗಳನ್ನು ರದ್ದುಗೊಳಿಸಿರುವ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಸೀನಾ ಪ್ರವಾಸ ರದ್ದು
ದೇಶದಲ್ಲಿನ ದೊಂಬಿ, ಗಲಾಟೆ ಪರಿಸ್ಥಿತಿ ಹಿನ್ನೆಲೆ ಯಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ರವಿವಾರ ಆರಂಭಿಸಬೇಕಿದ್ದ ಸ್ಪೇನ್ ಮತ್ತು ಬ್ರೆಜಿಲ್ ಪ್ರವಾಸ ರದ್ದುಗೊಳಿಸಿದ್ದಾರೆ. ಈ ಬಗ್ಗೆ ಸರಕಾರದ ವಕ್ತಾರರು ಶನಿವಾರ ಘೋಷಣೆ ಮಾಡಿದ್ದಾರೆ. ಜೈಲಿನಲ್ಲಿದ್ದ ಕೈದಿಗಳ ಬಿಡುಗಡೆ
ಪ್ರತಿಭಟನಕಾರರು ಬಾಂಗ್ಲಾದೇಶದ ನರಸಿಂಗಾಡಿ ಜಿಲ್ಲೆಯಲ್ಲಿರುವ ಜೈಲಿಗೆ ನುಗ್ಗಿ ಕೈದಿಗಳನ್ನು ಬಿಡು ಗಡೆ ಮಾಡಿದ್ದಾರೆ. ಇದಾದ ಬಳಿಕ ಜೈಲಿಗೆ ಬೆಂಕಿ ಹಚ್ಚಿ ದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ. ಬಿಡುಗಡೆಯಾದವರ ಸಂಖ್ಯೆ ಎಷ್ಟೆಂಬುದು ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ. ಸರಕಾರದಿಂದ ಬಿಗಿ ಕ್ರಮ
ಪ್ರತಿಭಟನಕಾರರನ್ನು ನಿಯಂತ್ರಿಸುವುದಕ್ಕಾಗಿ ಬಾಂಗ್ಲಾ ದೇಶ ಸರಕಾರ ರಾಜಧಾನಿ ಢಾಕಾದಲ್ಲಿ ನಿಷೇಧಾಜ್ಞೆ ಯನ್ನು ವಿಧಿಸಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಸೇನೆಯನ್ನು ನಿಯೋಜಿಸಲಾಗಿದ್ದು, ಲಾಠಿಚಾರ್ಜ್ ಮತ್ತು ಗುಂಡು ಹಾರಿಸಲಾಗುತ್ತಿದೆ.