Advertisement

ಲಂಕೆಯ ಹಾದಿಯಲ್ಲಿ ಬಾಂಗ್ಲಾದೇಶ?

11:46 PM Dec 16, 2022 | Team Udayavani |

ದಕ್ಷಿಣ ಏಷ್ಯಾದ ರಾಷ್ಟ್ರಗಳನ್ನು ಗಮನಿಸಿದರೆ ಲಾಗಾಯ್ತಿನಿಂದಲೂ ಎಲ್ಲರೊಂದಿಗೂ ಚೆನ್ನಾಗಿ ಬಾಂಧವ್ಯ ಹೊಂದಿರಬೇಕು ಎಂದು ಬಯಸುವುದು ಭಾರತವೇ. ಆದರೆ ಅದರ ನೆರೆಯ ರಾಷ್ಟ್ರಗಳನ್ನು ಗಮನಿಸಿದಾಗ ಒಂದಲ್ಲ ಒಂದು ಸಮಸ್ಯೆಯಲ್ಲಿ ಮುಳುಗಿವೆ ಎನ್ನುವುದು ಸತ್ಯವೇ. ಶ್ರೀಲಂಕಾ ಮಹಿಂದಾ ರಾಜಪಕ್ಸ ಕುಟುಂಬ ಆಡಳಿತಕ್ಕೆ ಸಿಲುಗಿ ನಲುಗಿ ಹೋಗಿ, ಕುಂಟುತ್ತಾ ಸಾಗುತ್ತಿದೆ. ಇನ್ನು ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತ, ಪಾಕಿಸ್ಥಾನ ಉಗ್ರ ಪ್ರೇರಿತ ಸರಕಾರ, ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಆಡಳಿತ ಹೀಗೆ ಸಮಸ್ಯೆಗಳ ಸರಮಾಲೆಯನ್ನು ಹೊಂದಿದೆ. ಇದೀಗ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಅವಲೋಕಿಸುವಾಗ ಶ್ರೀಲಂಕಾದ ಸ್ಥಿತಿ ಅದಕ್ಕೂ ಬರುತ್ತದೆಯೋ ಎಂಬ ಶಂಕೆ ಶುರುವಾಗಿದೆ. ಹಲವು ಕಾರಣಗಳಿಗಾಗಿ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

Advertisement

13 ವರ್ಷದ ಆಡಳಿತ
ಒಂದಲ್ಲ ಎರಡಲ್ಲ ಬರೋಬ್ಬರಿ ಹದಿಮೂರು ವರ್ಷಗಳಿಂದ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಬಾಂಗ್ಲಾದೇಶ್‌ ಅವಾಮಿ ಲೀಗ್‌ ಪಕ್ಷದ ಸರಕಾರ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದೆ. 1971 ಮಾ.26 ರಂದು ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ಬಳಿಕದ ಇತಿಹಾಸ ಗಮನಿಸುವುದಾದರೆ ಆ ದೇಶದ ಆಡಳಿತದಲ್ಲಿ ಇಷ್ಟು ದೀರ್ಘಾವಧಿಗೆ ಆಡಳಿತ ನಡೆಸಿದ ಪಕ್ಷವೂ ಇಲ್ಲ ಮತ್ತು ಪ್ರಧಾನಿಯೂ ಇಲ್ಲ.

ಒಂದು ತಿಂಗಳಿನಿಂದ ನವೆಂಬರ್‌ನಿಂದ ಈಚೆಗೆ ಬಾಂಗ್ಲಾದೇಶದ ಎಂಟು ಆಡಳಿತಾತ್ಮಕ ವಿಭಾಗಗಳಾಗಿರುವ ರಾಜಶಾಹಿ, ಚಿತ್ತಗಾಂಗ್‌, ಮಯ್‌ಮೇನ್‌ಸಿಂಗ್‌, ಕುಲಾಲಾ, ರಂಗಪುರ, ಬರಿಸಾನ್‌, ಫ‌ರೀದ್‌ಪುರ, ಶೈಲೆಟ್‌, ಕೊಮಿಲಾಗಳಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜಧಾನಿ ಢಾಕಾ ಸಹಿತ ಪ್ರಮುಖ ನಗರಗಳಲ್ಲಿ ಪ್ರತಿಭಟನ ರ್ಯಾಲಿಗಳು ನಡೆಯುತ್ತಿವೆ.

ಸದ್ಯದ ಸಮಸ್ಯೆ ಏನು?
2008, 2014 ಮತ್ತು 2018ರಲ್ಲಿ ನಡೆದ ಸಂಸತ್‌ ಚುನಾವಣೆಯಲ್ಲಿ ಬಾಂಗ್ಲಾದೇಶ್‌ ಅವಾಮಿ ಲೀಗ್‌ ಪಕ್ಷವೇ ಅಧಿಕಾರವನ್ನು ಉಳಿಸಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಭುಗಿಲೆದ್ದಿದೆ.

ಬಾಂಗ್ಲಾದೇಶದ ನಾಗರಿಕರಲ್ಲಿ ಸರಕಾರ ಪ್ರತಿಭಟನೆಗಳ ವಿರುದ್ಧ ದಮನಕಾರಿಯಾಗಿ ವರ್ತಿಸಿ, ಅದನ್ನು ಹತ್ತಿಕ್ಕಲು ಮುಂದಾಗಿದೆ.

Advertisement

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಸದ್ಯ ಇರುವ ಆಡಳಿತ ಪಕ್ಷಕ್ಕೆ ಬೆಂಬಲ ನೀಡಿರುವ ಪಕ್ಷಗಳೇ ಸರಕಾರದಲ್ಲಿ ಇರುವುದೋ ಬಿಡುವುದೋ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಅವರ ಪ್ರಕಾರ ದೇಶದಲ್ಲಿ ಚುನಾವಣೆ ನಡೆಸಲೂ ಕೂಡ ಬೊಕ್ಕಸ ಬರಿದಾಗಿದೆ.

ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣ ಏನು ಎಂಬ ವಿಚಾ ರಕ್ಕೆ ಖುದ್ದು ಪ್ರಧಾನಿ ಶೇಖ್‌ ಹಸೀನಾ ಮತ್ತು ಬಾಂಗ್ಲಾ ದೇಶ್‌ ಅವಾಮಿ ಲೀಗ್‌ ಪಕ್ಷದಲ್ಲಿ ಉತ್ತರವೇ ಇಲ್ಲ.

ರ್‍ಯಾಲಿಗಳ ಮೇಲೆ ರ್‍ಯಾಲಿ
ನಮ್ಮ ದೇಶದಂತೆಯೇ ಅಲ್ಲಿ ಐದು ವರ್ಷಕ್ಕೆ ಒಂದು ಬಾರಿ ಸಂಸತ್‌ ಚುನಾವಣೆ ನಡೆಯುತ್ತದೆ. ಹೀಗಾಗಿ ಮುಂದಿನ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ಅಲ್ಲಿ ಹಾಲಿ ಸರಕಾರವನ್ನು ಸೋಲಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳೂ ನಡೆದಿವೆ. ಅದಕ್ಕೆ ಪೂರಕವಾಗಿ ಅಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ ಎನ್ನೋಣ. ವಿಪಕ್ಷವಾ ಗಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಕ್ಷ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದಲ್ಲಿ ರಂಗಕ್ಕೆ ಇಳಿದಿದೆ. ಹಸೀನಾ ಸರಕಾರ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ರ್‍ಯಾಲಿ ಗಳಿಗೆ ಆಗಮಿಸುತ್ತಿದ್ದಾರೆ. ಸಾಂಪ್ರದಾಯಿಕ ವಾಗಿ ಆಡಳಿತ ಪಕ್ಷ ಶಕ್ತಿಯುತವಾಗಿ ಇರುವ ಖುಲಾನಾ ಮತ್ತು ಫ‌ರೀದ್‌ಪುರಗಳಲ್ಲಿಯೂ ವಿಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ.

ಆರ್ಥಿಕ ಬಿಕ್ಕಟ್ಟಿಗೆ ಕಾರಣಗಳೇನು?
1.ದಕ್ಷಿಣ ಏಷ್ಯಾದಲ್ಲಿ ಶ್ರೀಲಂಕಾ, ಪಾಕಿಸ್ಥಾನ ಬಳಿಕ ಬಾಂಗ್ಲಾ ದೇಶ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. 2009 ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಶೇಖ್‌ ಹಸೀನಾ ಸರಕಾರ ದೊಡ್ಡ ಮೊತ್ತ ಮೂಲ ಸೌಕರ್ಯ ಯೋಜನೆ ಗಳನ್ನು ಕಾರ್ಯಗತಗೊಳಿಸುವುದಕ್ಕೆ ಮುಂದಾ ಯಿತು. ಕೆಲ ವೊಂದು ಉದಾಹರಣೆಗಳನ್ನು ಗಮನಿಸೋಣ 360 ಕೋಟಿ ರೂ. ವೆಚ್ಚದ ಪದ್ಮ ಬ್ರಿಡ್ಜ್ (3.6 ಬಿಲಿಯನ್‌ ಡಾಲರ್‌), 1,265 ಕೋಟಿ ರೂ. (12.65 ಬಿಲಿಯನ್‌ ಡಾಲರ್‌) ವೆಚ್ಚದ ಪರಮಾಣು ಸ್ಥಾವರ, 330 ಕೋಟಿ ರೂ. ವೆಚ್ಚದ ಮೆಟ್ರೋ ರೈಲು (3.3 ಬಿಲಿಯನ್‌ ಡಾಲರ್‌) ಯೋಜನೆ ಗಳು ನಿರೀಕ್ಷೆಗೂ ಮೀರಿ ಬೆಳೆದು ಬಿಟ್ಟವು. ನಿಗದಿತ ಅವಧಿಗೆ ಯೋಜನೆ ಪೂರ್ತಿಯಾಗದೆ ವೆಚ್ಚ ಹೆಚ್ಚಾಗಿ ಸರಕಾರಕ್ಕೆ ಸಂಕಷ್ಟ ತಂದೊಡ್ಡಿದವು. 2017ರಲ್ಲಿ ವಿಶ್ವಬ್ಯಾಂಕ್‌ ಅಧ್ಯಯನ ನಡೆಸಿದ ಪ್ರಕಾರ ಜಗತ್ತಿನಲ್ಲಿ ರಸ್ತೆ ನಿರ್ಮಾಣದ ವೆಚ್ಚ ಬಾಂಗ್ಲಾದೇಶದಲ್ಲಿಯೇ ಹೆಚ್ಚಾಗಿದೆ.

2.ಬಾಂಗ್ಲಾದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೂಡ ಹೆಚ್ಚಿದ ಅವ್ಯವಹಾರಗಳು ಕಾರಣವಾಗಿವೆ. ಜತೆಗೆ ಅನುತ್ಪಾ ದಕ ಆಸ್ತಿ ಪ್ರಮಾಣ ಹೆಚ್ಚಳ (ಎನ್‌ಪಿಎ) ಕೂಡ ಪರಿಸ್ಥಿತಿ ಹದಗೆಡಲು ಕಾರಣವಾಗಿವೆ. ಡಿ.1ರಂದು ಬೆಳಕಿಗೆ ಬಂದ ಹೊಸ ಹಗರಣದಲ್ಲಿ ಇಸ್ಲಾಮಿ ಬ್ಯಾಂಕ್‌ ಬಾಂಗ್ಲಾದೇಶ್‌ ಲಿಮಿಟೆಡ್‌ನಿಂದ ಎಸ್‌.ಅಸ್ಲಾಂ ಸಮೂಹ ಸಂಸ್ಥೆ 2,407 ಕೋಟಿ ರೂ. ಸಾಲ ಪಡೆದು ಮರು ಪಾವತಿ ಮಾಡದೆ ವಂಚಿಸಿದೆ. ಆ ದೇಶದ ಸೆಂಟ್ರಲ್‌ ಬ್ಯಾಂಕ್‌ನ ಮಾಹಿತಿ ಪ್ರಕಾರ 11.11 ಬಿಲಿಯನ್‌ ಡಾಲರ್‌ ಮೊತ್ತ ವಂಚನೆ ನಡೆದಿದೆ. ಆದರೆ ಐಎಂಎಫ್ ಪ್ರಕಾರ ಈ ಒಟ್ಟು ಹಗರಣದ ಮೊತ್ತ ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ. ಇದರ ಜತೆಗೆ ಹಗರಣಗಳಿಂದ ಉಂಟಾಗಿರುವ ಅನುತ್ಪಾದಕ ಆಸ್ತಿ ಪ್ರಮಾಣ ಕೂಡ ಆ ದೇಶದ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಎಂಬ ಸ್ಥಿತಿ ತಂದಿಟ್ಟಿದೆ. ಇದಲ್ಲದೆ ಸಲ್ಲದ ರಾಜಕೀಯ ಮುಖಂಡರು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮೂಗು ತೂರಿಸಿರುವುದರಿಂದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅವ್ಯ ವಹಾರ ಹೆಚ್ಚಾಗಿದೆ ಎಂದು ಟ್ರಾನ್ಸ್‌ಫ‌ರೆನ್ಸಿ ಇಂಟರ್‌ನ್ಯಾಶನಲ್‌ನ ಬಾಂಗ್ಲಾದೇಶ ಹೇಳಿಕೊಂಡಿದೆ. ಸೆಂಟ್ರಲ್‌ ಬ್ಯಾಂಕ್‌ ಆಫ್ ಬಾಂಗ್ಲಾದೇಶ ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳದೇ ಇದ್ದುದರಿಂದ ಪರಿಸ್ಥಿತಿ ಕೈಮೀರಿ ಹೋಗಿದೆ ಎಂಬ ಆರೋಪಗಳಿವೆ.

3.ಈ ವರ್ಷದ ಮಾರ್ಚ್‌ನಲ್ಲಿ ದೇಶಕ್ಕೇ ವಿದ್ಯುತ್‌ ಪೂರೈಕೆ ಮಾಡಲಾಗಿದೆ ಎಂದು ಶೇಖ್‌ ಹಸೀನಾ ಸರಕಾರ ಹೇಳಿಕೊಂಡಿತ್ತು. 2010ರಿಂದ 2021ರ ನಡುವೆ ಬಾಂಗ್ಲಾದೇಶದಲ್ಲಿ ವಿದ್ಯುತ್‌ ಕ್ಷೇತ್ರಕ್ಕೆ ದೊಡ್ಡ ಪ್ರಮಾಣ ದಲ್ಲಿ ಸಹಾಯಧನ ನೀಡಲಾಗಿತ್ತು. ಆ ದೇಶದ ವಿದ್ಯುತ್‌ ಅಭಿ ವೃದ್ಧಿ ಮಂಡಳಿ (ಪಿಡಿಬಿ) 7.1 ಬಿಲಿಯನ್‌ ಡಾಲರ್‌ ಮೊತ್ತದ ಸಹಾ ಯಧನ ಪಡೆದುಕೊಂಡಿತು. 2010ರಿಂದ 2015ರ ಅವಧಿಯಲ್ಲಿ ಬಾಂಗ್ಲಾದೇಶ ಪೆಟ್ರೋಲಿಯಂ ಕಾರ್ಪೊರೇಶನ್‌ 3 ಬಿಲಿಯನ್‌ ಡಾಲರ್‌ ಮೊತ್ತದ ನೆರವು ಸ್ವೀಕರಿಸಿತ್ತು. ಇದರಿಂದಾಗಿ ಆ ದೇಶದಲ್ಲಿ ತೈಲೋತ್ಪನ್ನ ಮತ್ತು ವಿದ್ಯುತ್‌ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಿ, ಅದನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಯಿತು. ವಿಶೇಷವಾಗಿ ಆ ದೇಶದಲ್ಲಿ ಜಾರಿಗೊಳಿಸಲಾದ ಕ್ವಿಕ್‌ ರೆಂಟಲ್‌ ಪವರ್‌ ಪ್ಲಾಂಟ್‌ ಅಂದರೆ ಡೀಸೆಲ್‌ ಅಥವಾ ಫ‌ರ್ನೇಸ್‌ ಆಯಿಲ್‌ನಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲಾಗಿತ್ತು. ಅದರ ಮೂಲಕ ವಿದ್ಯುತ್‌ ಉತ್ಪಾದನೆ ಮಾಡುವ ನಿಟ್ಟಿಲ್ಲಿ ಕಂಪೆನಿ ಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವುಗಳು ಒಪ್ಪಂದದಂತೆ ನಡೆದುಕೊಳ್ಳದೇ ಇದ್ದದ್ದು ಸರಕಾರಕ್ಕೆ ನಷ್ಟ ತಂದುಕೊಟ್ಟಿತು.

4.ಹತ್ತು ವರ್ಷಗಳ ಅವಧಿಯಲ್ಲಿ ಅಂದರೆ 2009 ರಿಂದ 2018ರ ಅವಧಿಯಲ್ಲಿ ಹಲವು ಸಣ್ಣ ಪ್ರಮಾಣದ ವಿತ್ತೀಯ ಹಗರಣಗಳು ಬೆಳಕಿಗೆ ಬಂದವು. ಗ್ಲೋಬಲ್‌ ಫೈನಾನ್ಶಿಯಲ್‌ ಇಂಟೆಗ್ರಿಟಿ ಎಂಬ ಸಂಸ್ಥೆಯ ಅಧ್ಯಯನದ ಪ್ರಕಾರ ಪ್ರತೀ ವರ್ಷ 8.27 ಬಿಲಿಯನ್‌ ಡಾಲರ್‌ನಷ್ಟು ಹಣ ವಂಚಿಸಲಾಗಿತ್ತು. ಆಮದು ಮತ್ತು ರಫ್ತು ಕ್ಷೇತ್ರದಲ್ಲಿ ಸುಳ್ಳು ಬಿಲ್‌ ತೋರಿಸಿ ಈ ವಂಚನೆ ಎಸಗಲಾಗಿದೆ. ಇನ್ನು ಸ್ವಿಸ್‌ ಬ್ಯಾಂಕ್‌ನಲ್ಲಿ ಕೂಡ ಕಪ್ಪುಹಣ ಶೇಖರಣೆ ವೃದ್ಧಿಯಾಗಿದೆ. 2021ರ ಲೆಕ್ಕಾಚಾರದ ಪ್ರಕಾರ ಶೇ.55.1ರಷ್ಟು ಹೆಚ್ಚಾಗಿದೆ. ನಗದು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 912 ಮಿಲಿಯ ಡಾಲರ್‌ ಮೊತ್ತ ಸಂಗ್ರಹವಾಗಿದೆ.

ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next