Advertisement

Bangladesh-New Zealand ಎರಡನೇ ಟೆಸ್ಟ್‌: ದ್ವಿತೀಯ ದಿನದಾಟ ಮಳೆಯಿಂದ ರದ್ದು

10:46 PM Dec 07, 2023 | Team Udayavani |

ಮಿರ್ಪುರ್‌: ಭಾರೀ ಮಳೆಯಿಂದ ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ದಿನದ ಆಟ ರದ್ದುಗೊಂಡಿತು. ಅಂಪಾಯರ್ ಮಧ್ಯಾಹ್ನ 2 ಗಂಟೆಯವರೆಗೆ ಕಾದು ದಿನದ ಆಟವನ್ನು ರದ್ದುಗೊಳಿಸಲು ನಿರ್ಧರಿಸಿದರು.

Advertisement

ಬುಧವಾರ ಆರಂಭಗೊಂಡ ಈ ಟೆಸ್ಟ್‌ ಪಂದ್ಯದ ಮೊದಲ ದಿನ ಬೌಲರ್‌ಗಳು ಮಿಂಚಿದ್ದರು. ಇದರಿಂದ 15 ವಿಕೆಟ್‌ಗಳು ಉರುಳಿದ್ದವು. ಮೊದಲು ಬ್ಯಾಟಿಂಗ್‌ ಮಾಡಿದ್ದ ಬಾಂಗ್ಲಾದೇಶವು 172 ರನ್‌ ಗಳಿಸಿ ಆಲೌಟಾಗಿತ್ತು. ಇದ ಕ್ಕುತ್ತರ ವಾಗಿ ಬ್ಯಾಟಿಂಗ್‌ ಕುಸಿತ ಕಂಡ ಪ್ರವಾಸಿ ನ್ಯೂಜಿಲ್ಯಾಂಡ್‌ ತಂಡವು 55 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತ್ತು. ಡ್ಯಾರಿಲ್‌ ಮಿಚೆಲ್‌ (12) ಮತ್ತು ಗ್ಲೆನ್‌ ಫಿಲಿಪ್ಸ್‌ (5) ತಂಡವನ್ನು ಶೋಚನೀಯ ಸ್ಥಿತಿ ಯಿಂದ ಸ್ಥಿತಿಯಿಂದ ಪಾರು ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶುಕ್ರವಾರ ಆಟ ಆರಂಭಗೊಂಡರೆ ಅವರಿಬ್ಬರು ಹೇಗೆ ಬಾಂಗ್ಲಾ ದಾಳಿ ಯನ್ನು ನಿಭಾಯಿಸುತ್ತಾರೆ ಎಂಬು ದನ್ನು ನೋಡಬೇಕಾಗಿದೆ.

ಗಾಯಗೊಂಡ ಶಕಿಬ್‌ ಅಲ್‌ ಹಸನ್‌ ಅವರ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವ ವಹಿಸಿದ್ದ ನಜ್ಮುಲ್‌ ಹೊಸೈನ್‌ ಶಾಂಟೂ ಅವರು ಸಿಲೆØಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ತಂಡಕ್ಕೆ 150 ರನ್ನುಗಳ ಗೆಲುವು ದೊರಕಿಸಿಕೊಡಲು ನೆರವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next