Advertisement

ಇಂದು ಬಾಂಗ್ಲಾದೇಶ –ಭಾರತ “ಮೈತ್ರಿ ದಿನ’

01:33 AM Dec 06, 2021 | Team Udayavani |

ಹೊಸದಿಲ್ಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ ಮತ್ತಷ್ಟು ಗಾಢವಾಗುವ ನಿಟ್ಟಿನಲ್ಲಿ ಸೋಮವಾರ (ಡಿ.6)ವನ್ನು “ಮೈತ್ರಿ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ.

Advertisement

ಈ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿದೆ. ಢಾಕಾ ಬಾಂಗ್ಲಾದೇಶದ ರಾಜಧಾನಿ ಎಂದು 1971ರ ಡಿ.6ರಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಸರಕಾರ ಮಾನ್ಯತೆ ನೀಡಿತ್ತು. ಅದರ ಸ್ಮರಣೆಯನ್ನು ಶಾಶ್ವತವಾಗಿ ಇರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿರುವ ಇಂಡಿಯನ್‌ ಕೌನ್ಸಿಲ್‌ ಆಫ್ ವರ್ಲ್ಡ್ ಅಫೇರ್ಸ್‌ ಸೋಮವಾರ ವಿಶೇಷ ಕಾರ್ಯ ಕ್ರಮ ಆಯೋಜಿಸಿದೆ. ಅದರಲ್ಲಿ ಎರಡೂ ರಾಷ್ಟ್ರಗಳ ಪ್ರಮುಖ ಅಧಿಕಾರಿಗಳು ಮತ್ತು ಇತರರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಭಾರತದ್ದೇ ಪಾತ್ರ: 1971ರಲ್ಲಿ ಭಾಂಗ್ಲಾದೇಶಕ್ಕೆ ಸ್ವಾತಂತ್ರ್ಯಸಿಗಲು ಭಾರತ ಕಾರಣವಾಗಿದೆ. ಡಿ.6ಕ್ಕೆ ಸರಿಯಾಗಿ ಆ ಸಂಭ್ರಮಕ್ಕೆ 50 ವರ್ಷ ಭರ್ತಿಯಾಗುತ್ತದೆ. ಈ ಸುವರ್ಣ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಡಿ.14 ರಿಂದ 16ರವರೆಗೆ ದಿಲ್ಲಿಯ ಇಂಡಿಯಾ ಗೇಟ್‌ನಲ್ಲಿ ಭರ್ಜರಿ ಕಾರ್ಯಕ್ರಮಗಳು ನಡೆಯಲಿವೆ. ಅವುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next