Advertisement

Bangladesh; ರಕ್ತ ಕೊಟ್ಟೇವು, ಬಾಂಗ್ಲಾ ಬಿಡೆವು: ಬೀದಿಗಿಳಿದು ಹಿಂದೂಗಳ ಪ್ರತಿಭಟನೆ

12:43 AM Aug 11, 2024 | Team Udayavani |

ಢಾಕಾ: “ಈ ದೇಶ ಯಾರಪ್ಪನ ಸ್ವತ್ತೂ ಅಲ್ಲ, ಈ ನಾಡಿಗಾಗಿ ನಾವು ರಕ್ತ ಹರಿಸಿದ್ದೇವೆ. ಅಗತ್ಯ ಬಿದ್ದರೆ ಮತ್ತೆ ದೇಶಕ್ಕಾಗಿ ರಕ್ತ ಚೆಲ್ಲಲು ಸಿದ್ಧರಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಬಾಂಗ್ಲಾವನ್ನು ತೊರೆಯುವುದಿಲ್ಲ’ ಹೀಗೆಂದು ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂಗಳು ಘೋಷಣೆ ಕೂಗುತ್ತಾ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

Advertisement

ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರಕಾರ ಪತನವಾಗುತ್ತಿದ್ದಂತೆಯೇ ಹಿಂದೂಗಳ ನಿವಾಸ, ಅಂಗಡಿ, ಉದ್ಯಮಗಳು ಹಾಗೂ ದೇವಾಲಯಗಳನ್ನು ಗುರಿಯಾಗಿಸಿ ಮೂಲಭೂತವಾದಿಗಳು ದಾಳಿ ನಡೆಸಿ ದ್ದರು. ದೇಶಾದ್ಯಂತ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾಕರ ವಿರುದ್ಧ 205ಕ್ಕೂ ಅಧಿಕ ದಾಳಿಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಢಾಕಾದ ಶಹಬಾಗ್‌ನಲ್ಲಿ ಹಿಂದೂ ಸಮುದಾಯಗಳ ಜನರು “ನಾವು ಯಾರು? ಬೆಂಗಾಲಿ-ಬೆಂಗಾಲಿ’, “ಹಿಂದೂಗಳನ್ನು ರಕ್ಷಿಸಿ’ ಎನ್ನುವಂಥ ಬರಹಗಳಿರುವ ಫ‌ಲಕಗಳನ್ನು ಹಿಡಿದು, “ಹರೇ ಕೃಷ್ಣ, ಹರೇ ಕೃಷ್ಣ’ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.

ಬೇಡಿಕೆಗಳೇನು:ಅಲ್ಪಸಂಖ್ಯಾಕರ ರಕ್ಷಣೆಗಾಗಿ ಸಮಿತಿ ಹಾಗೂ ಅಲ್ಪಸಂಖ್ಯಾಕರ ಸಚಿವಾಲಯವನ್ನು ರಚಿಸುವಂತೆ ಹಾಗೂ ಅಲ್ಪಸಂಖ್ಯಾಕರ ಮೇಲಾಗುತ್ತಿ ರುವ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿನ ಕಾನೂನು ಕ್ರಮ ರೂಪಿಸುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಜತೆಗೆ ಸಂಸತ್ತಿನಲ್ಲಿ ಅಲ್ಪಸಂಖ್ಯಾಕರಿಗಾಗಿ ಶೇ.10 ಸ್ಥಾನ ಮೀಸಲು ಇಡಬೇಕು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next