Advertisement

Kolkata Case: ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಿ-ಮಮತಾ ವಿರುದ್ಧ ಭುಗಿಲೆದ್ದ ಜನಾಕ್ರೋಶ

01:04 PM Sep 10, 2024 | Team Udayavani |

ನವದೆಹಲಿ: ಕೋಲ್ಕತಾ ಆರ್‌ ಜಿ ಕರ್‌(Kolkata’s RG Kar) ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯ (31ವರ್ಷ) ಅತ್ಯಾ*ಚಾರ, ಕೊಲೆ ಪ್ರಕರಣದ ಬಗ್ಗೆ ಪ್ರತಿಭಟನೆ ತೀವ್ರಗೊಂಡಿರುವ ನಡುವೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಾರ್ವಜನಿಕರು ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳಿ ಎಂಬ ಮನವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಬ್ಯಾನರ್ಜಿ,ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು, ದುರ್ಗಾ ಪೂಜೆ ಸಂಭ್ರಮದಲ್ಲಿ ತೊಡಗಿಸಿಕೊಳ್ಳುವತ್ತ ಗಮನಹರಿಸಬೇಕು. ನಾನು ಎಲ್ಲರಲ್ಲಿಯೂ ಮನವಿ ಮಾಡುತ್ತೇನೆ, ಹಬ್ಬದ ಸಂಭ್ರಮದಲ್ಲಿ ತೊಡಗಿ, ಸಿಬಿಐ ಆದಷ್ಟು ಶೀಘ್ರ ನ್ಯಾಯ ಒದಗಿಸಿಕೊಡಲಿದೆ ಎಂದು ತಿಳಿಸಿದ್ದರು.

ಸಂತ್ರಸ್ತೆ ಕುಟುಂಬ ಸದಸ್ಯರು, ವಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಸಿಎಂ ಬ್ಯಾನರ್ಜಿಯ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘಟನೆ ಕುರಿತು ಸಾರ್ವಜನಿಕ ವಲಯದ ಆಕ್ರೋಶದ ಬಗ್ಗೆ ಸಿಎಂ ಮಮತಾ ಸೂಕ್ಷ್ಮತೆ ಕಳೆದುಕೊಂಡಿರುವುದಾಗಿ ಆರೋಪಿಸಿದ್ದಾರೆ.

content-img

ಕಳೆದ ಒಂದು ತಿಂಗಳಿನಿಂದ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದು, ನೀವು ಈ ರೀತಿ ರಾತ್ರಿ-ಹಗಲು ಪ್ರತಿಭಟನೆ ನಡೆಸುತ್ತಿದ್ದರೆ, ಇದು ಅಡಚಣೆಗೆ ಕಾರಣವಾಗಲಿದೆ. ಅಲ್ಲದೇ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕಾದ ಅಗತ್ಯವಿದೆ ಎಂದು ಸಿಎಂ ಬ್ಯಾನರ್ಜಿ ತಿಳಿಸಿದ್ದರು.

Advertisement

“ನಾವು ನಮ್ಮ ಮಗಳನ್ನು ಕಳೆದುಕೊಂಡ ಸಂದರ್ಭದಲ್ಲಿ ನಾವು ಯಾವ ಹಬ್ಬ ಆಚರಿಸಬೇಕು? ನಮ್ಮ ಮಗಳನ್ನು ನಮಗೆ ವಾಪಸ್‌ ತಂದುಕೊಡಿ, ಒಂದು ವೇಳೆ ಮಮತಾ ಅವರ ಕುಟುಂಬದಲ್ಲಿ ಹೀಗೆ ಆಗಿದ್ದರೆ ಇಂತಹ ಹೇಳಿಕೆ ಕೊಡುತ್ತಿದ್ದರೇ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.