ಒಮಾನ್: ತನ್ನ ಅಂತಿಮ ಅರ್ಹತಾ ಪಂದ್ಯದಲ್ಲಿ ಪಪುವಾ ನ್ಯೂ ಗಿನಿ (ಪಿಎನ್‌ಜಿ) ವಿರುದ್ಧ 84 ರನ್ನುಗಳ ಭರ್ಜರಿ ಗೆಲುವು ಸಾಧಿಸಿದ ಬಾಂಗ್ಲಾದೇಶ “ಬಿ’ ವಿಭಾಗದಿಂದ ಸೂಪರ್-12 ಹಂತವನ್ನು ಪ್ರವೇಶಿಸಿತು.
ಇದು ಬಾಂಗ್ಲಾದೇಶಕ್ಕೆ ಒಲಿದ ಸತತ ಎರಡನೇ ಜಯ. ಆರಂಭಿಕ ಪಂದ್ಯದಲ್ಲಿ ಅದು ಸ್ಕಾಟ್ಲೆಂಡ್ ಗೆ ಶರಣಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 7 ವಿಕೆಟಿಗೆ 181 ರನ್ ಪೇರಿಸಿತು.
ಜವಾಬಿತ್ತ ಪಿಎನ್‌ಜಿ 19.3 ಓವರ್ ಗಳಲ್ಲಿ 97ಕ್ಕೆ ಆಲೌಟ್ ಆಯಿತು. ಶಕಿಬ್ ಅಲ್ ಹಸನ್ 9 ರನ್ನಿಗೆ 4 ವಿಕೆಟ್ ಉರುಳಿಸಿರು. ಬ್ಯಾಟಿಂಗಿನಲ್ಲೂ ಮಿಂಚಿದ ಅವರು 46 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ನಾಯಕ ಮಹಮದುಲ್ಲ 50 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-7 ವಿಕೆಟಿಗೆ 181 (ಮಹಮದುಲ್ಲ 50, ಶಕಿಬ್ 46, ದಾಸ್ 29, ಅಸದ್ ವಾಲಾ 26ಕ್ಕೆ 2, ಕಬುವ ಮೊರಿಯ 26ಕ್ಕೆ 2). ಪಪುವಾ ನ್ಯೂ ಗಿನಿ-19.3 ಓವರ್‌ಗಳಲ್ಲಿ 97 (ಕಿಪ್ಲಿನ್ ಡೊರಿಗ ಔಟಾಗದೆ 46, ಶಕಿಬ್ 9ಕ್ಕೆ 4, ಟಸ್ಕಿನ್ 12ಕ್ಕೆ 2, ಸೈಫುದ್ದೀನ್ 21ಕ್ಕೆ 2). ಪಂದ್ಯಶ್ರೇಷ್ಠ: ಶಕಿಬ್ ಅಲ್ ಹಸನ್.
ಲಂಕಾ ತೇರ್ಗಡೆ: ಶ್ರೀಲಂಕಾ ಅರ್ಹತಾ ಸುತ್ತಿನ ಎರಡೂ ಪಂದ್ಯಗಳನ್ನು ಗೆದ್ದು ಟಿ20 ವಿಶ್ವಕಪ್ ಕೂಟದ ಸೂಪರ್-12 ಹಂತಕ್ಕೆ ಏರಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. “ಎ’ ವಿಭಾಗದ ತನ್ನ ದ್ವಿತೀಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 70 ರನ್ ಗೆಲುವು ಸಾಧಿಸುವ ಮೂಲಕ ಲಂಕಾ ಮುನ್ನಡೆಯಿತು