Advertisement

Bangladesh Crisis: ದೂತಾವಾಸ ಕಚೇರಿ ಮೇಲೆ ದಾಳಿ: ಭಾರತ ವಿರುದ್ಧ ಬಾಂಗ್ಲಾ ಪ್ರತಿಭಟನೆ

04:39 AM Dec 04, 2024 | Team Udayavani |

ಢಾಕಾ/ಅಗರ್ತಲಾ: ತ್ರಿಪುರಾದ ಅಗರ್ತಲಾದಲ್ಲಿ ತನ್ನ ದೂತಾವಾಸ ಕಚೇರಿ ಮೇಲೆ ಗುಂಪೊಂದು ದಾಳಿ ನಡೆ ಸಿದ ಘಟನೆಗೆ ಬಾಂಗ್ಲಾದೇಶದ ಮಧ್ಯಾಂತರ ಸರಕಾರ ಕಟುವಾಗಿ ಟೀಕಿಸಿದೆ.

Advertisement

ಢಾಕಾದಲ್ಲಿ ಭಾರತದ ಹೈಕಮಿ ಷನರ್‌ ಆಗಿರುವ ಪ್ರಣಯ್‌ ವರ್ಮಾ ಅವರನ್ನು ಕರೆಸಿಕೊಂಡು ಈ ಬಗ್ಗೆ ಆಕ್ಷೇಪ ಸಲ್ಲಿಸಲಾಗಿದೆ. ಜತೆಗೆ ಅಗರ್ತಲಾದಲ್ಲಿರುವ ಸಹಾಯಕ ದೂತಾವಾಸ ಕಚೇರಿಯಲ್ಲಿ ಎಲ್ಲ ರೀತಿಯ ವೀಸಾ ಸೇವೆಗಳನ್ನು ರದ್ದುಗೊಳಿಸಿರುವುದಾಗಿಯೂ ಬಾಂಗ್ಲಾದೇಶ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಬಳಿಕ ಮಾತನಾಡಿದ ಪ್ರಣಯ್‌ ವರ್ಮಾ ಇದೊಂದು ಘಟನೆಯಿಂದ 2 ದೇಶಗಳ ನಡುವಿನ ಬಾಂಧವ್ಯ ಹದಗೆಡಬಾರದು. ಬಾಂಗ್ಲಾದೇಶದಲ್ಲಿ ಶಾಂತಿ ಸುವ್ಯವ್ಯವಸ್ಥೆ ಇರಬೇಕು ಎನ್ನುವುದು ಭಾರತದ ಆಶಯ ಎಂದರು. 2 ದೇಶಗಳ ನಡುವೆ ಉತ್ತಮ ಬಾಂಧವ್ಯ ಹೊಂದುವುದು ಅಗತ್ಯವಾಗಿದೆ ಎಂದರು. ಇದಕ್ಕೂ ಮೊದಲು ಸಹಾಯಕ ದೂತಾವಾಸ ಕಚೇರಿ ಮೇಲಿನ ದಾಳಿ ಭಾರತ ವೈಫ‌ಲ್ಯ ಎಂದು ಅಲ್ಲಿನ ಸರಕಾರ ಟೀಕಿಸಿತ್ತು.


ವಕೀಲರ ಗೈರು: ಕೃಷ್ಣದಾಸ್‌ ಜಾಮೀನು ಅರ್ಜಿ ಜನವರಿಗೆ

ಢಾಕಾ: ಬಾಂಗ್ಲಾ ದೇಶದಲ್ಲಿ ಬಂಧನಕ್ಕೊಳಗಾದ ಧಾರ್ಮಿಕ ಮುಖಂಡ ಚಿನ್ಮಯ್‌ ಕೃಷ್ಣದಾಸ್‌ ಜಾಮೀನು ಅರ್ಜಿ ಜ.2ರಂದು ನಡೆಯಲಿದೆ. ಅವರ ಪರ ವಕೀಲ ರಾಮನ್‌ ರಾಯ್‌ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆಸಲಾಗಿತ್ತು. ಆ ಘಟನೆ ಬಳಿಕ ಅವರ ಪರವಾದ ಮಂಡಿಸಲು ಬೇರೆ ವಕೀಲರು ಮುಂದೆ ಬಂದಿಲ್ಲ. ಹೀಗಾಗಿ, ಅವರಿಗೆ ಮಂಗಳ ವಾರ ಜಾಮೀನು ಸಿಕ್ಕಿಲ್ಲ. ಹೀಗಾಗಿ ಛತ್ತೋಗ್ರಾಮ್‌ ಮೆಟ್ರೋಪಾಲಿಟನ್‌ ಸೆಷನ್ಸ್‌ ಕೋರ್ಟ್‌ ವಿಚಾರಣೆಯನ್ನು 2025ರ ಜ.2ಕ್ಕೆ ಮುಂದೂಡಿದೆ.

ಭಾರತದ ಚಾನೆಲ್‌ಗ‌ಳ ನಿಷೇಧಕ್ಕೆ ಢಾಕಾ ಹೈಕೋರ್ಟ್‌ನಲ್ಲಿ ಅರ್ಜಿ
ಢಾಕಾ: ಭಾರತದ ಎಲ್ಲ ಚಾನೆಲ್‌ಗ‌ಳ ಪ್ರಸಾರ ನಿಷೇಧಿಸುವಂತೆ ಬಾಂಗ್ಲಾದೇಶದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ವಕೀಲರೊಬ್ಬರು ಈ ಅರ್ಜಿ ಸಲ್ಲಿಸಿದ್ದು, ಭಾರತೀಯ ವಾಹಿನಿಗಳು ಬಾಂಗ್ಲಾದೇಶದ ನಿಯಮ ಪಾಲಿಸದೆ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ದೇಶದ ಸಂಸ್ಕೃತಿ ಹಾಳು ಮಾಡುವಂಥ ವಿಷಯಗಳನ್ನು ಪ್ರಸಾರ ಮಾಡುವ ಮೂಲಕ ರಾಷ್ಟ್ರದ ಯುವಜನತೆಯ ಅಧಃಪತನಕ್ಕೆ ಕಾರಣವಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next