Advertisement
ಕಾರ್ಮಿಕರ ಹಕ್ಕುಗಳ ಒಕ್ಕೂಟ (ಡಬ್ಲ್ಯೂಆರ್‌ಸಿ) ಮತ್ತು ಪೆನ್ ಸ್ಟೇಟ್ ವಿಶ್ವ ವಿದ್ಯಾಲಯ ಜಂಟಿಯಾಗಿ ಸಂಶೋಧನೆ ನಡೆಸಿದ್ದು, ಸುಮಾರು 300 ಉಡುಪು ಪೂರೈಕೆದಾರರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಕೋವಿಡ್- 19 ಸೃಷ್ಟಿಸಿರುವ ಬಿಕ್ಕಟ್ಟಿಗೆ ಬೆದರಿರುವ ಪಾಶ್ಚಿಮಾತ್ಯ ಬ್ರ್ಯಾಂಡ್ ಉಡುಪುಗಳ ಚಿಲ್ಲರೆ ವ್ಯಾಪಾರಿಗಳು ತಮ್ಮ ಖರೀದಿ ಆದೇಶವನ್ನು ವಾಪಸು ಪಡೆಯುತ್ತಿದ್ದಾರೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದೆಗೆಟ್ಟಿದೆ ಎಂದರೆ ಬೇಡಿಕೆ ಆಧರಿಸಿ ಉತ್ಪನ್ನಕಾರರು ಖರೀದಿಸಿದ ಕಚ್ಚಾವಸ್ತುಗಳ ವೆಚ್ಚವನ್ನು ಭರಿಸಲೂ ಖರೀದಿದಾರರು ಮುಂದಾಗುತ್ತಿಲ್ಲ.
ಒಂದು ಅಂದಾಜಿನ ಪ್ರಕಾರ ವಿವಿಧ ಬ್ರ್ಯಾಂಡೆಡ್ ಕಂಪೆನಿಗಳು 2.4 ಶತಕೋಟಿ ಮೊತ್ತದ ಬಟ್ಟೆಗಳ ಆರ್ಡರ್ ಅನ್ನು ರದ್ದು ಮಾಡಿವೆ. ನಮ್ಮ ಚಿಲ್ಲರೆ ವ್ಯಾಪಾರಿಗಳಾದ ಪ್ರಿಮಾರ್ಕ್ ಮತ್ತು ಎಡಿನºರ್ಗ್ 1.4 ಶತಕೋಟಿ ಮೊತ್ತದ ಸರಕನ್ನು ರದ್ದು ಮಾಡಿದ್ದು, ಅವರ ನಷ್ಟ ವನ್ನು ಸರಿದೂಗಿಸಿಕೊಳ್ಳಲು ಹೆಚ್ಚುವರಿ ಅಂದರೆ ಸುಮಾರು 1 ಶತಕೋಟಿ ಮೊತ್ತದ ಸರಕನ್ನು ಸದ್ಯ ಬೇಡ ಎಂದಿವೆ. ಆದರೆ ಈಗಾಗಲೇ ನಾವು 1.3 ಶತ ಕೋಟಿಯಷ್ಟು ಉಡುಪುಗಳನ್ನು ತಯಾರಿಸಿದ್ದು, ಅರ್ಧದಷ್ಟು ಉತ್ಪಾದನೆ ಪೂರ್ಣಗೊಂಡಿದೆ ಎಂದು ಬಾಂಗ್ಲಾದೇಶ ಮತ್ತು ಗಾರ್ಮೆಂಟ್ ರಫ್ತುದಾರರ ಒಕ್ಕೂಟ (ಬಿಜಿಎಂಇಎ)ಹೇಳಿದೆ. ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮನೆಗೆ
ಬಹುತೇಕ ರಫ್ತುದಾರರು ತಮ್ಮ ಆರ್ಡರ್‌ಗಳನ್ನು ರದ್ದುಗೊಳಿಸಿದ ಕಾರಣ ಕಾರ್ಖಾನೆಗಳು ಕಾರ್ಯಾಚರಣೆ ನಿಲ್ಲಿಸಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 40 ಲಕ್ಷ ತಲುಪಬಹುದು. ಉತ್ಪನ್ನವೂ ಕಾರ್ಖಾನೆಯಲ್ಲೇ ಉಳಿದಿರುವುದರಿಂದ ವೇತನವಿಲ್ಲದೆ ತಮ್ಮ ಕೆಲಸಗಾರರನ್ನು ಮನೆಗೆ ಕಳುಹಿಸಿವೆ ಎಂಬ ಮಾಹಿತಿಯನ್ನು ಬಿಜಿಎಂಇಎ ಹಂಚಿಕೊಂಡಿದೆ.
Related Articles
ಪರಿಸ್ಥಿತಿಯ ತೀವ್ರತೆಯನ್ನು ತೆರೆದಿಟ್ಟಿರುವ ಡೆನಿಮ್ ಎಕ್ಸ್‌ಪರ್ಟ್‌ನ ವ್ಯವಸ್ಥಾಪಕ ನಿರ್ದೇ ಶಕ ಮೊಸ್ತಾಫಿಜ್ ಉದ್ದೀನ್, ನಾವು ಮುಂಗಡ ವಾಗಿಯೇ ಪ್ರತಿಯೊಂದು ಕಚ್ಚಾವಸ್ತುಗಳ ಮೊತ್ತವನ್ನು ಪಾವತಿಸಬೇಕು. ಆದರೆ ಸರಕು ಸಾಗಣೆಯಾಗದೇ ಹಣ ಕೈಸೇರುವುದಿಲ್ಲ, ಕನಿಷ್ಠ ಮೊತ್ತವಿರದ ಕಾರಣ ಕೂಡ ಬ್ಯಾಂಕುಗಳು ನನ್ನ ವ್ಯವಹಾರಿಕ ಖಾತೆಗಳ ಮೇಲೆ ನಿರ್ಬಂಧ ಹೇರುತ್ತಿವೆ. ನನ್ನ ಬಳಿ 2ಸಾವಿರ ಕಾರ್ಮಿಕರು ಕೆಲಸಕ್ಕೆ ಇದ್ದಾರೆ. ಅವರನ್ನು ನಂಬಿಕೊಂಡು ಹತ್ತು ಸಾವಿರ ಕುಟುಂಬ ಜನರಿದ್ದಾರೆ. ಅವರಿಗೆ ನಾನು ಏನು ಹೇಳಲಿ, ವೇತನ ಹೇಗೆ ನೀಡಲಿ ಎಂದು ಪ್ರಶ್ನಿಸುತ್ತಾರೆ.
Advertisement
ಅನ್ಯಾಯವನ್ನು ಪ್ರಶ್ನಿಸುವಂತಿಲ್ಲಉಡುಪು ಪೂರೈಕೆ ಸರಪಳಿ ಇದ್ದಾಗ ಪೂರೈಕೆದಾರರು ಪ್ರತಿ ಹಂತದ ಹೊಣೆಗಾರಿಕೆ ಹೊರಬೇಕು. ಆರ್ಡರ್ ಮಾಡಿದ ಉತ್ಪನ್ನವನ್ನು ಅಸ್ತಿತ್ವದಲ್ಲಿರುವ ಆದೇಶಗಳನ್ನು ರದ್ದುಗೊಳಿಸಿ ದ್ದರೂ, ನಾವು ಎದುರು ಮಾತನಾಡುವ ಅಥವಾ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವಂತಿಲ್ಲ. ರದ್ದುಗೊಳಿಸಿದರೂ ಅಥವಾ ರಫ್ತುನ್ನು ಮುಂದೂಡಿದರೂ ಎಲ್ಲವನ್ನು ಸಹಿಸಿಕೊಂಡು ಹೋಗಬೇಕು ಅಂತಹ ಪರಿಸ್ಥಿತಿ ಪೂರೈಕೆದಾರರದ್ದು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿವೆ ಕಾರ್ಖಾನೆಗಳು.