Advertisement
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಯೂನುಸ್, ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರುವುದು ಉಭಯ ರಾಷ್ಟ್ರಗಳ ಸ್ನೇಹಪರತೆಗೆ ಪ್ರತಿಕೂಲವಾಗಿ ಪರಿಣಮಿಸಬಹುದು ಹಸೀನಾರಿಗೆ ತಾಕೀತು ಮಾಡಿದ್ದಾರೆ. ಭಾರತದೊಂದಿನ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗೆ ಇಚ್ಛಿಸಿರುವ ಯೂನುಸ್, ಶೇಖ್ ಹಸೀನಾರ ನಾಯಕತ್ವವೊಂದೇ ಬಾಂಗ್ಲಾದ ಸ್ಥಿರತೆಗೆ ಮಾರ್ಗ ಎಂಬ ನಿಲುವನ್ನು ಭಾರತವು ಕೈಬಿಡಬೇಕು ಎಂದಿದ್ದಾರೆ.
ಅಲ್ಲದೇ ಬಾಂಗ್ಲಾದ ಹಿಂದೂಗಳ ಸುರಕ್ಷತೆ ಕುರಿತು ಭಾರತ ಹೊರಹಾಕಿರುವ ಆತಂಕವನ್ನು ಉತ್ಪ್ರೇಕ್ಷೆ ಎಂದಿರುವ ಯೂನುಸ್, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ರಾಜಕೀಯ ಪ್ರೇರಿತ ದಾಳಿಗಳು ನಡೆದಿವೆಯೇ ಹೊರತು ಅವು ಕೋಮು ಆಧಾರಿತ ದಾಳಿಗಳಲ್ಲ. ಹೆಚ್ಚಿನ ಹಿಂದೂಗಳು ಹಸೀನಾ ನೇತೃತ್ವದ ಅವಾಮಿ ಲೀಗ್ ಬೆಂಬಲಿಗರಾದ ಕಾರಣ ಈ ದಾಳಿಗಳು ನಡೆದಿವೆ ಎಂದು ಮೊಹಮ್ಮದ್ ಯೂನುಸ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾತ್ಮಕ ದಾಳಿಗಳ ಬಗ್ಗೆ ಭಾರತ ಕಳವಳ ಪ್ರಶ್ನಿಸಿದ್ದು, ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ವಿಷಯ “ಉತ್ಪ್ರೇಕ್ಷೆಗೊಳಿಸಲಾಗಿದೆ”. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಯು ಕೋಮುವಾದಕ್ಕಿಂತ ಹೆಚ್ಚು ರಾಜಕೀಯವಾಗಿದೆ ಎಂದು ಹೇಳಿದ್ದಾರೆ.