Advertisement

ಬಾಂಗ್ಲಾದಲ್ಲೀಗ 63 ಸಾವಿರ ಕೋವಿಡ್‌

05:01 PM Jun 07, 2020 | sudhir |

ಢಾಕಾ: ಕೋವಿಡ್ ಭಾರತದಲ್ಲಿ ತೀವ್ರಗೊಳ್ಳುತ್ತಿರುವಂತೆಯೇ, ಅತ್ತ ನೆರೆಯ ಬಾಂಗ್ಲಾದೇಶದಲ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಒಟ್ಟು ಪ್ರಕರಣಗಳ ಸಂಖ್ಯೆ 63 ಸಾವಿರ ದಾಟಿದೆ.

Advertisement

ಶನಿವಾರ ಒಂದೇ ದಿನದಲ್ಲಿ 2635 ಪ್ರಕರಣಗಳು ಏರಿದ್ದು, 35 ಮಂದಿ ಮೃತಪಟ್ಟಿದ್ದಾರೆ. 521 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಚೇತರಿಸಿಕೊಂಡವರ ಸಂಖ್ಯೆ 13325ಕ್ಕೇರಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ನಸೀಮಾ ಸುಲ್ತಾನಾ ಅವರು ಹೇಳಿದ್ದಾರೆ.

ಶನಿವಾರಕ್ಕೆ ಮುಕ್ತಾಯಗೊಂಡಂತೆ ಅದಕ್ಕೂ ಹಿಂದಿನ 24 ತಾಸುಗಳಲ್ಲಿ 12486 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ದೇಶದ 50 ಲ್ಯಾಬ್‌ಗಳಲ್ಲಿ ಈ ಪರೀಕ್ಷೆಗಳು ನಡೆದಿವೆ. ಇವುಗಳಲ್ಲಿ ಶೇ.21.1ರಷ್ಟು ಪಾಸಿಟಿವ್‌ ಬಂದಿವೆ ಎಂದು ಅವರು ಹೇಳಿದ್ದಾರೆ.

ಕೋವಿಡ್‌ಗೆ ಇತ್ತೀಚೆಗೆ ಬಲಿಯಾದವರಲ್ಲಿ 28 ಮಂದಿ ಪುರುಷರು ಮತ್ತು 7 ಮಂದಿ ಮಹಿಳೆಯರಾಗಿದ್ದಾರೆ. ಮೃಪಟ್ಟವರಲ್ಲಿ ಇಬ್ಬರು 11ರಿಂದ 20 ವರ್ಷ ವಯಸ್ಸಿನವರು, ಮೂವರು 21ರಿಂದ 30 ವರ್ಷ ವಯಸ್ಸಿನವರು ಮತ್ತು ಇಬ್ಬರು 31ರಿಂದ 40 ವರ್ಷ ವಯಸ್ಸಿನವರು ಮತ್ತು 10 ಮಂದಿ 51ರಿಂದ 60 ವರ್ಷ ವಯಸ್ಸಿನವರು. ಐವರು 61ರಿಂದ 70 ಮತ್ತು 9 ಮಂದಿ 71ರಿಂದ 80 ವಯಸ್ಸಿನವರಾಗಿದ್ದಾರೆ ಒಬ್ಬರು ಮಾತ್ರ 81 ವಯಸ್ಸಿನವರಾಗಿದ್ದಾರೆ.

ಸದ್ಯ ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣ ಶೇ.21.14ರಷ್ಟಿದೆ. ಸಾವಿನ ಪ್ರಮಾಣ ಶೇ.1.34ರಷ್ಟಿದೆ ಎಂದು ಸರಕಾರದ ಅಂಕಿ ಅಂಶಗಳು ಹೇಳುತ್ತಿವೆ.

Advertisement

ಪ್ರದೇಶವಾರು ಲಾಕ್‌ಡೌನ್‌
ಏತನ್ಮಧ್ಯೆ ಬಾಂಗ್ಲಾದಲ್ಲಿ ಪ್ರದೇಶವಾರು ಲಾಕ್‌ಡೌನ್‌ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಬಾಂಗ್ಲಾದೇಶ ಸರಕಾರ ತೀರ್ಮಾನಿಸಿದೆ. ಹಾಟ್‌ಸ್ಪಾಟ್‌ಗಳು ಮತ್ತು ನಿರ್ದಿಷ್ಟ ಕ್ಲಸ್ಟರ್‌ಗಳಲ್ಲಿ ಮಾತ್ರ ಇದು ಜಾರಿಯಾಗಲಿದೆ. ಢಾಕಾದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತಿದೆ. ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವಂತೆ ಅಲ್ಲೂ ನಿರ್ಬಂಧಗಳು ಘೋಷಣೆಯಾಗಿದ್ದವು. ಮಾ.31ರಂದು ಸರಕಾರ ಸಾರ್ವಜನಿಕ ಸಾರಿಗೆ ಮತ್ತು ಕಚೇರಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಆದರೆ ಬಾಂಗ್ಲಾದಲ್ಲಿ ಲಾಕ್‌ಡೌನ್‌ ಅಷ್ಟೊಂದು ಕಠಿನವಾಗಿರಲಿಲ್ಲ. ಸಾಮಾನ್ಯ ರಜೆಗಳ ರೀತಿಯಲ್ಲಿ ಇದರ ಪರಿಣಾಮ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next