Advertisement
ಪರಿಶುದ್ಧ ಭಕ್ತಿ ಅಗತ್ಯಭಜನೆಗೆ ಗೌರವ, ಮರ್ಯಾದೆ ಇದೆ. ಇಂತಹ ಭಜನೆಯನ್ನು ಭಗವಂತನಿಗೆ ಸಮರ್ಪಿಸುವ ಕೆಲಸ ಆಗಬೇಕು. ಪರಿಶುದ್ಧ ಭಕ್ತಿಯಿಂದ ಸಮರ್ಪಣೆ ಮಾಡಿದಾಗ, ಭಗವಂತನಿಗೆ ಸೇವನೆ ಆಗಬೇಕು ಎಂದರು.
ಭಜರಂಗದಳ ಪ್ರಾಂತ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಭಾರತ ಮತ್ತೆ ವಿಶ್ವಗುರು ಆಗುವ ಹಂತಕ್ಕೆ ತಲುಪುತ್ತಿದೆ. ಮೂಢನಂಬಿಕೆ ಬಿಟ್ಟು ಹಿರಿಯರ ಮೂಲ ನಂಬಿಕೆಗಳನ್ನು ನೆನಪಿಟ್ಟುಕೊಂಡು ಬಾಳುವುದು ಮುಖ್ಯ ಎಂದರು. ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷ ವಸಂತ ಮಾತನಾಡಿ, ಹಿಂದುತ್ವಕ್ಕೆ ಶ್ರೇಷ್ಠತೆ ಇದೆ. ಆದರೆ ಇಂದು ನಾವು ಅದನ್ನು ಮರೆಯುತ್ತಿದ್ದೇವೆ ಎಂದ ಅವರು, ಮದುವೆ ಮಂಟಪದಲ್ಲಿ ಚಪ್ಪಲಿ ಹಾಕಿ ಅರತಕ್ಷತೆ ಹಾಕುವುದು ಸರಿಯಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಶ್ರೀ ರಾಮ ಭಜನ ಮಂದಿರ ಈ ಊರಿಗೆ ಒಂದು ಆರಾಧನಾ ಕೇಂದ್ರವಾಗಿ ಬೆಳೆಯಬೇಕಿದೆ. ವಾರಕ್ಕೆ ಒಂದು ಬಾರಿಯಾದರೂ ಭಜನ ಮಂದಿರಕ್ಕೆ ಹೋಗಿ ಭಜನೆ ಮಾಡುವ ಸಂಪ್ರದಾಯವನ್ನು ಈ ಭಾಗದ ಜನ ಬೆಳೆಸಿಕೊಳ್ಳಬೇಕು ಎಂದರು.
Related Articles
Advertisement
ಲಿಖಿತಾ ಮತ್ತು ಕವಿತಾ ಪ್ರಾರ್ಥಿಸಿದರು. ಶ್ರೀ ರಾಮ ಭಜನಾ ಮಂದಿರ ಸಮಿತಿಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಸ್ವಾಗತಿಸಿದರು. ಕೋಶಾಧಿಕಾರಿ ಸಂತೋಷ್ ಗೌಡ ವಂದಿಸಿದರು. ವೆಂಕಟಕೃಷ್ಣ ಪಾಲೆಚ್ಚಾರು ಕಾರ್ಯಕ್ರಮ ನಿರೂಪಿಸಿದರು.
ಸಮ್ಮಾನ ಬಂಗಾರಡ್ಕ ಶ್ರೀರಾಮ ಭಜನ ಮಂದಿರ ಸಮಿತಿ ಅಧ್ಯಕ್ಷರಾಗಿ ಜೀರ್ಣೋದ್ಧಾರ ಕೆಲಸ ಮತ್ತು ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರದೀಪ್‌ಕೃಷ್ಣ ಬಂಗಾರಡ್ಕ ಅವರನ್ನು ಸಮ್ಮಾನಿಸಲಾಯಿತು. ಭಜನ ಮಂದಿರದ ಅಭಿವೃದ್ಧಿಗೆ ಸಹಕರಿಸಿದ ಮುತ್ತಪ್ಪ ಪೂಜಾರಿ ದಂಪತಿ, ಕೇಶವ ಗೌಡ ದಂಪತಿ ಮತ್ತು ಐತ್ತಪ್ಪ ನಾಯ್ಕ ದಂಪತಿಯನ್ನು ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಕಾರ್ಯದಲ್ಲಿ ಅತಿ ಹೆಚ್ಚು ದಿನ ಕೆಲಸ ಮಾಡಿದ ಕಾರ್ಯಕರ್ತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.