Advertisement

ದಾವಣಗೆರೆ ಮಂದಿ ಅಭಿಮಾನಕ್ಕೆ ಬೆಲೆ ಕಟ್ಟಲಾಗದು

01:12 PM Feb 25, 2017 | |

ದಾವಣಗೆರೆ: ಕನ್ನಡದ ಎಲ್ಲ ಚಿತ್ರಗಳಿಗೆ ದಾವಣಗೆರೆಯ ಜನರು ನೀಡುವ ಪ್ರೋತ್ಸಾಹ, ಸಹಕಾರ, ಪೀÅತಿ, ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ, ರಾಕಿಂಗ್‌ ಸ್ಟಾರ್‌ ಖ್ಯಾತಿಯ ಯಶ್‌ ಸ್ಮರಿಸಿದ್ದಾರೆ. 

Advertisement

ವಿಜಯಪುರದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಾರ್ಗಮಧ್ಯೆ ಶುಕ್ರವಾರ ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನಿವಾಸಕ್ಕೆ ಭೇಟಿ ನೀಡಿದ ನಂತರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಸಾರ್ವಜನಿಕರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

ದಾವಣಗೆರೆಯಲ್ಲಿ ಚಿತ್ರ ಗೆದ್ದರೆ ಇಡೀ ರಾಜ್ಯದಲ್ಲೇ ಗೆಲ್ಲುತ್ತವೆ. ಇಲ್ಲಿನ ಜನರು ಕನ್ನಡದ ಎಲ್ಲ ಚಿತ್ರಗಳಿಗೆ ಅಷ್ಟೊಂದು ಪ್ರೋತ್ಸಾಹ ನೀಡುತ್ತಾರೆ ಎಂದರು. ನನ್ನ ಅಭಿನಯದ ಎಲ್ಲ ಚಿತ್ರಗಳಿಗೆ ದಾವಣಗೆರೆಯ ಜನರು ಅತಿ ಹೆಚ್ಚಿನ ಪ್ರೋತ್ಸಾಹ, ಆಶೀರ್ವಾದ ನೀಡಿದ್ದಾರೆ. ಎಲ್ಲ ಚಿತ್ರಗಳು ಗಳಿಕೆಯಲ್ಲಿ ರೆಕಾರ್ಡ್‌ ಮಾಡಿವೆ.

ಮೊದಲ ಸಲ… ಚಿತ್ರ ಬೆಂಗಳೂರಿಗಿಂತಲೂ ಹೆಚ್ಚಿನ ಕಲೆಕ್ಷನ್‌ ಗಳಿಸಿದ್ದು ದಾವಣಗೆರೆಯಲ್ಲಿಯೇ ಎಂಬುದು ಖುಷಿ ಕೊಡುವ  ವಿಚಾರ. ಹಾಗಾಗಿ ದಾವಣಗೆರೆ ಎಂದರೆ ಹೆಚ್ಚು ಇಷ್ಟ ಎಂದು ತಿಳಿಸಿದರು. ನನ್ನ ಎಲ್ಲ ಚಿತ್ರಗಳನ್ನು ಗೆಲ್ಲಿಸಿದಂತಹ ಜನರಿಗೆ ಹೃದಯಪೂರ್ವಕ ಧನ್ಯವಾದ ಹೇಳಬೇಕು ಎಂಬ ಕಾರಣಕ್ಕಾಗಿ ವಿಜಯಪುರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿರುವ ನಾನು ದಾವಣಗೆರೆಗೆ ಬಂದಿದ್ದೇನೆ.

ಮುಂದೆಯೂ ಎಲ್ಲ ಚಿತ್ರಗಳಿಗೆ ಪ್ರೋತ್ಸಾಹ ನೀಡುವ  ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಗೂಗ್ಲಿ, ರಾಜಾಹುಲಿ, ಮಾಸ್ಟರ್‌ಪೀಸ್‌ ಚಿತ್ರಗಳ ಜನಪ್ರಿಯ ಡೈಲಾಗ್‌ ಹೇಳುವ ಮೂಲಕ ಸಾರ್ವಜನಿಕರು,  ಅಭಿಮಾನಿಗಳ ರಂಜಿಸಿದರು. ತಮ್ಮ ನೆಚ್ಚಿನ ಯುವ ನಾಯಕ ನಟನನ್ನು ನೋಡುವುದಕ್ಕಾಗಿ ನೂರಾರು ಜನರು ಉರಿ ಬಿಸಿಲನ್ನೂ ಲೆಕ್ಕಿಸದೆ ಕಾದರು.

Advertisement

ಯಶ್‌ ಬರುತ್ತಾರೆ ಎಂದು  ಹೇಳುತ್ತಿದ್ದಂತೆ ಹರ್ಷೋದ್ಘಾರ ಮಾಡುವುದು ಸಾಮಾನ್ಯವಾಗಿತ್ತು. ಕಾರಿನಿಂದ ಇಳಿದ ಕೂಡಲೇ ಯಶ್‌ ನೇರವಾಗಿ ಅಭಿಮಾನಿಗಳತ್ತ ತೆರಳಿದರು. ಹಸ್ತಲಾಘವ, ಸೆಲ್ಫಿಗೆ  ಜನರು ಅಕ್ಷರಶಃ ಮುಗಿ ಬಿದ್ದರು. ಕಾರು ಹತ್ತಲಿಕ್ಕೂ ಯಶ್‌ ಹರಸಾಹಸ ಪಡುವಂತಾಯಿತು. ಪೊಲೀಸರು ಲಾಠಿ ಪ್ರಯೋಗಿಸಿ, ಜನರನ್ನು ಚದುರಿಸಬೇಕಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next