Advertisement

Bangalore Traffic: ಟ್ರಾಫಿಕ್‌:ನಂ.2 ಸ್ಥಾನದಿಂದ 6ಕ್ಕಿಳಿದ ಬೆಂಗಳೂರು

10:53 AM Feb 07, 2024 | Team Udayavani |

ಬೆಂಗಳೂರು: ಎರಡು ವರ್ಷಗಳ ಹಿಂದೆ ವಿಶ್ವದಲ್ಲೇ 2ನೇ ಅತೀ ಹೆಚ್ಚು ಸಂಚಾರ ದಟ್ಟಣೆ ನಗರ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಸಿಲಿಕಾನ್‌ ಸಿಟಿ ಬೆಂಗಳೂರು 2023ರಲ್ಲಿ ಸುಧಾರಣೆ ಕಂಡಿದ್ದು, 6ನೇ ಸ್ಥಾನಕ್ಕೆ ಇಳಿದಿದೆ.

Advertisement

ಡಚ್‌ ಲೋಕೇಷನ್‌ ಟೆಕ್ನಾಲಜಿ ಸಂಸ್ಥೆಯಾದ ‌ ಟಾಮ್‌ ಇತ್ತೀಚೆಗೆ 2023ರ ವಿಶ್ವ ಸಂಚಾರ ಸೂಚ್ಯಂಕವನ್ನು ಬಿಡು ಗಡೆ ಮಾಡಿದ್ದು, ಬೆಂಗಳೂರು ನಗರ ಸಂಚಾರ ವ್ಯವಸ್ಥೆ ಸೂಚ್ಯಂಕದಲ್ಲಿ ಗಣನೀಯ ಬದಲಾವಣೆ ಆಗಿದೆ. 2022ನೇ ಸಾಲಿನಲ್ಲಿ ಬೆಂಗಳೂರು ವಿಶ್ವದಲ್ಲೇ 2ನೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿದ್ದು, 2023 ರಲ್ಲಿ 6ನೇ ಸ್ಥಾನಕ್ಕೆ ಇಳಿದಿದೆ. ಅದನ್ನು ಇನ್ನಷ್ಟು ಸುಧಾರಣೆಗೆ ತರಲು ಕೆಲ ಯೋಜನೆಗಳನ್ನು ರೂಪಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಟಾಮ್‌ ಸಂಸ್ಥೆ ಪ್ರಕಾರ, ಮೊದಲ ಸ್ಥಾನದಲ್ಲಿ ಲಂಡನ್‌, ಎರಡು ಹಾಗೂ ಮೂರನೇ ಸ್ಥಾನದಲ್ಲಿ ಅನುಕ್ರಮವಾಗಿ ಐರ್ಲೆಂಡ್‌ ರಾಜಧಾನಿ ಡಬ್ಲೀನ್‌, ಕೆನಡಾದ ಟೊರೊಂಟೊ ನಗರವಿದ್ದರೆ, ಆರನೇ ಸ್ಥಾನದಲ್ಲಿ ಬೆಂಗಳೂರು ಹಾಗೂ ಪುಣೆ ಏಳನೇ ಸ್ಥಾನದಲ್ಲಿದೆ ಎಂದು ಸಂಸ್ಥೆಯ ಅಧ್ಯಯನದ ವರದಿ ತಿಳಿಸಿದೆ. ಇನ್ನು 2022ರಲ್ಲಿ ಪ್ರತಿ ಗಂಟೆಗೆ ಸರಾಸರಿ ವೇಗ 14 ಕಿ.ಮೀಟರ್‌ ಇದ್ದರೆ 2023ರಲ್ಲಿ 18 ಕಿ.ಮೀಟರ್‌ಗೆ ಏರಿಕೆಯಾಗಿದೆ. ಅಲ್ಲದೆ ಪ್ರಯಾಣ ಸಮಯ ಒಂದು ನಿಮಿಷ ತಗ್ಗಿರುವುದು ಕಂಡುಬಂದಿದೆ.

2022ರಲ್ಲಿ ನಗರದಲ್ಲಿ ಪ್ರತಿ 10 ಕಿ.ಮೀ. ಕ್ರಮಿಸಲು 28 ನಿಮಿಷ 11 ಸೆಕೆಂಡ್‌ ತಗುಲುತಿತ್ತು. 2023ರಲ್ಲಿ 27 ನಿಮಿಷ 11 ಸೆಕೆಂಡ್‌ಗೆ ತಗ್ಗಿದೆ. ವಿಶ್ವದ 10 ನಗರಗಳ ಪೈಕಿ ಬೆಂಗಳೂರು ನಗರ ಮಾತ್ರವೇ ಪ್ರಯಾಣ ಸಮಯದಲ್ಲಿ 1 ನಿಮಿಷ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಿದೆ. ಈ ನಡುವೆ 2023ರಲ್ಲಿ 10 ಲಕ್ಷ ವಾಹನಗಳ ನೋಂದಣಿಗಳ ಹೊರತಾಗಿಯೂ ಸುಧಾರಣೆ ಕಂಡಿದೆ ಎಂದು ತಿಳಿಸಿದ್ದಾರೆ.

ಸುಧಾರಣೆಗೆ ಪ್ರಮುಖ ಕಾರಣಗಳೇನು?: ಸಂಚಾರ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹಲವು ಸುಧಾರಣ ಕ್ರಮಕೈಗೊಂಡಿದ್ದಾರೆ. ಹೆಬ್ಟಾಳ ಜಂಕ್ಷನ್‌, ಟಿನ್‌ ಫ್ಯಾಕ್ಟರಿ, ಗೊರಗುಂಟೆಪಾಳ್ಯ ಹಾಗೂ ಸಾರಕ್ಕಿ ಜಂಕ್ಷನ್‌ ಸೇರಿ ಹಲವಾರು ದಟ್ಟಣೆಯ ಜಂಕ್ಷನ್‌ಗಳಲ್ಲಿ ದಟ್ಟಣೆ ನಿವಾರಣೆಗೆ ಕ್ರಮಕೈಗೊಂಡಿದ್ದಾರೆ. ವಾಹನ ದಟ್ಟಣೆಯಾಗುತ್ತಿದ್ದ ರಸ್ತೆ ವಿಭಜಕಗಳನ್ನ ಮುಚ್ಚಿಸಲಾಗಿದೆ. ಅನಗತ್ಯ ಬಸ್‌ ನಿಲ್ದಾಣಗಳ ತೆರವು, ಅವೈಜ್ಞಾನಿಕ ಯುಟರ್ನ್ ಬಂದ್‌, ಫ್ರೀ ಸಿಗ್ನಲ್‌ಗೆ ಒತ್ತು ನೀಡಿದ್ದರಿಂದ ಸುಗಮವಾಗಿ ವಾಹನ ಸಂಚಾರಕ್ಕೆ ಕಾರಣವಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವುದಕ್ಕಿಂತ ವಾಹನಗಳ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಪೀಕ್‌ ಅವರ್‌ ನಿರ್ವಹಣೆಗೆ ಭಾರೀ ಗಾತ್ರದ ವಾಹನಗಳ ನಿಷೇಧ ಮತ್ತು ಮಾರ್ಗ ಬದಲಾವಣೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಟ್ರಾಫಿಕ್‌ ಎಂಜಿನಿಯರಿಂಗ್‌, ಸುಧಾರಿತ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಬಿ.ದಯಾನಂದ್‌ ಮಾಹಿತಿ ನೀಡಿದರು.

Advertisement

ಭವಿಷ್ಯದ ಯೋಜನೆಗಳೇನು?:

ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾಫಿಕ್‌ ಸಿಗ್ನಲ್‌ಗ‌ಳು. ಮೂಲಕ ಅತ್ಯುತ್ತಮ ಸಿಗ್ನಲಿಂಗ್‌ಗೆ ವ್ಯವಸ್ಥೆ ನೀಡುವುದು.  

ಎ1 ಮತ್ತು ಇತರೆ ಅತ್ಯಾಧುನಿಕ ತಂತ್ರಜ್ಞಾನಗಳ ಆಧಾರಿತ ವ್ಯವಸ್ಥೆಗಳ ಬಳಕೆ.

ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಟ್ರಾಫಿಕ್‌ ಅರಿವನ್ನು ಸುಧಾರಿಸಲು ವಿವಿಧ ಏಜೆನ್ಸಿಗಳು, ಪ್ರಮುಖ ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳೊಂದಿಗೆ ಸಹಯೋಗ.

 

Advertisement

Udayavani is now on Telegram. Click here to join our channel and stay updated with the latest news.

Next