Advertisement
ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ ಪುತ್ರಿ ವಿನುತಾಳನ್ನು ಕೊಲೆ ಮಾಡಿರುವ ಆರೋಪದಲ್ಲಿ ಮಗುವಿನ ತಾಯಿ ಸುಧಾ(28)ಳನ್ನು ಬಂಧಿಸಲಾಗಿದೆ.
Related Articles
ಮಂಗಳವಾರ ಮಧ್ಯಾಹ್ನವೂ ಟಿವಿ ನೋಡುವ ವಿಷಯದಲ್ಲಿ ದಂಪತಿ ನಡುವೆ ಜಗಳವಾಗಿದ್ದು, ಮಗಳು ತಂದೆಯ ಪರ ಮಾತಾಡಿದ್ದಳು ಎನ್ನಲಾಗಿದೆ. ಇದೇ ಕೋಪದಿಂದ ಸಂಜೆ ಸುಧಾಳು ಮಗಳನ್ನು ಗೋಬಿ ಮಂಚೂರಿ ಕೊಡಿಸುತ್ತೇನೆ ಎಂದು ಹೊರಗಡೆ ಕರೆದೊಯ್ದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತಾನು ಗೋಬಿ ಮಂಚೂರಿಯ ಬಿಲ್ ಕೊಡುತ್ತಿದ್ದಾಗ ಮಗಳು ನಾಪತ್ತೆಯಾಗಿದ್ದಳು ಎಂದು ನಂಬಿಸಿದ್ದಳು. ಬಳಿಕ ದಂಪತಿ ನಾಪತ್ತೆ ದೂರು ದಾಖಲಿಸಿದ್ದರು.
Advertisement
ಸುಳಿವು ಕೊಟ್ಟ ವೇಲ್ಬುಧವಾರ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಸುಧಾಳ ವರ್ತನೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಗೋಬಿ ಮಂಚೂರಿ ಅಂಗಡಿ ಮಾಲಕನನ್ನು ವಿಚಾರಿಸಿದಾಗ ಸುಧಾಳು ಪುತ್ರಿಯನ್ನು ಗೋಬಿ ಮಂಚೂರಿ ಅಂಗಡಿಗೆ ಕರೆದೊಯ್ದಿರಲಿಲ್ಲ ಎಂಬುದು ಗೊತ್ತಾಗಿತ್ತು. ಬಳಿಕ ಮನೆಯಲ್ಲಿ ತಪಾಸಣೆ ನಡೆಸಿದಾಗ ಕೃತ್ಯಕ್ಕೆ ಬಳಸಿದ್ದ ವೇಲ್‌ನಲ್ಲಿ ರಕ್ತ ಅಂಟಿ ಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.