Advertisement
ಬೆಂಗಳೂರು ಗ್ರಾಮಾಂತರದಲ್ಲಿ ಆನೇಕಲ್, ರಾಮನಗರದ ಬಿಡದಿಗಳಲ್ಲಿ ಕೈಗಾರಿಕಾ ಪ್ರದೇಶ ಹೆಚ್ಚಿರುವುದರಿಂದ ಮಾಲಿನ್ಯದ ಸಮಸ್ಯೆ ಕಾಡುತ್ತಿದೆ ಮತ್ತು ನಗರದ ಡಂಪಿಂಗ್ ಯಾರ್ಡ್‌ನಂತೆ ಆಗಿದೆ. ನಗರದ ಹೊರವಲಯದ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವುದು, ಕಟ್ಟಡಗಳು, ವೈದ್ಯಕೀಯ, ಕೈಗಾರಿಕಾ ತ್ಯಾಜ್ಯಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿಯುತ್ತಿರುವುದು ಈ ಕ್ಷೇತ್ರದ ಜನತೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸಂಸದರು ಪ್ರಮುಖವಾಗಿ ಎಲ್ಲ ಗ್ರಾಮಗಳು ಮತ್ತು ನಗರ ಪ್ರದೇಶದ ವಾರ್ಡ್
ಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಆರಂಭಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ಆನೇಕಲ್ ಸಹಿತ ನಗರ ಪ್ರದೇಶಕ್ಕೆ ಕಾವೇರಿ ನೀರು ತರುವ ಪ್ರಯತ್ನ ಇನ್ನೂ ಈಡೇರಿಲ್ಲ. ಕಳೆದ 5 ವರ್ಷಗಳಲ್ಲಿ ಸಂಸತ್ತಿ ನಲ್ಲಿ ಸಂಸದರ ಹಾಜರಾತಿ ಶೇ.85ರಷ್ಟಿದೆ. ಕನಕಪುರದಲ್ಲಿ ಟ್ರಾಮಾ ಸೆಂಟರ್, ಹಾರೋಹಳ್ಳಿಯಲ್ಲಿ ಏಮ್ಸ್ ಸ್ಥಾಪನೆ ಮಾಡು ವಂತೆ ಆಗ್ರಹಿಸಿದ್ದಾರೆ. ಇವೇ ಕಾಂಗ್ರೆಸ್‌ನ ಪ್ರಚಾರ ಸರಕುಗಳಾಗಿವೆ.
Related Articles
ಬಿಎಂಆರ್‌ಡಿ ಮೂಲಕ ಸರಿಯಾಗಿ ಯೋಜನೆ ರೂಪಿಸಲಿಲ್ಲ. ಬೆಂಗಳೂರು ಸುತ್ತ ಮಾಸ್ಟರ್ ಪ್ಲ್ರಾನ್ ಮಾಡುವ ಯೋಜನೆ ಜಾರಿಗೆ ಬರಲಿಲ್ಲ ಎಂಬ ಆರೋಪ ಸಂಸದರ ವಿರುದ್ಧವಿದೆ. ತಾಲೂಕು ಅಭಿವೃದ್ಧಿ ಪ್ರಾಧಿಕಾರಗಳಿಗೆ ಕೋಟ್ಯಂತರ ರೂ. ಬಂದಿತ್ತು. ಅದನ್ನು ಸರಿಯಾಗಿ ಬಳಕೆ ಮಾಡಲಿಲ್ಲ. ನಗರದ ಹೊರವಲಯಕ್ಕೆ ಕಾವೇರಿ ನೀರು ತರುವ ಕೆಲಸ ಮಾಡಲಿಲ್ಲ. ಪ್ರಧಾನಮಂತ್ರಿ ಆದರ್ಶ ಗ್ರಾಮ ಮಾಡುವಲ್ಲಿ ಯಶಸ್ವಿಯಾಗಿಲ್ಲ. ನಗರದ ತ್ಯಾಜ್ಯವನ್ನು ಹೊರಭಾಗದಲ್ಲಿ ಸುರಿಯುವುದನ್ನು ತಡೆ ಯುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಆಪಾದನೆಯೂ ಇದೆ. ಇವನ್ನೇ ಬಿಜೆಪಿ ತನ್ನ ಚುನಾವಣ ಪ್ರಚಾರದ ಸರಕನ್ನಾಗಿ ಮಾಡಿಕೊಳ್ಳುತ್ತಿದೆ.
Advertisement
ಅನುದಾನ ಬಳಕೆ-2014-19 ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಸಂಸದರಾಗಿದ್ದಾರೆ. ಮಂಜೂರಾದ 25 ಕೋ. ರೂ. ಅನುದಾನದ ಪೈಕಿ 22 ಕೋ. ರೂ. ಖರ್ಚಾಗಿದೆ. 260 ಶುದ್ಧ ಕುಡಿಯುವ ನೀರು ಘಟಕ, 16 ಬಸ್ ಶೆಲ್ಟರ್, 5 ಕೋ. ರೂ. ಆದರ್ಶ ಗ್ರಾಮಕ್ಕೆ, ಎಂಟು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. 2,000 ಚೆಕ್ ಡ್ಯಾಮ್‌ಗಳ ನಿರ್ಮಾಣ ಸಂಸದರ ಸಾಧನೆ ಪಟ್ಟಿಯಲ್ಲಿ ಸೇರಿದೆ. ಕುಣಿಗಲ್ ತಾಲೂಕಿನ ಮಡಿಕೆಹಳ್ಳಿ, ರಾಮನಗರ ತಾಲೂಕಿನ ಯಳಸವಾಡಿ ಗ್ರಾಮಗಳನ್ನು ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡು ಗ್ರಾಮಕ್ಕೂ ತಲಾ 2.5 ಕೋ. ರೂ. ಅನುದಾನದಡಿ ರಸ್ತೆ, ರೈತರಿಗೆ ಟಾನ್ಸ್‌ಫಾರ್ಮರ್, ಶುದ್ಧ ಕುಡಿಯುವ ನೀರಿನ ಘಟಕ, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ರೈತರಿಗೆ ಜಮೀನು ಸರ್ವೆ ಮಾಡಿಸಿ, ಖಾತೆ ಮಾಡಿಕೊಡಲಾಗಿದೆ. ಎರಡೂ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇನೆ. ರೈತರು, ಕೃಷಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಕೆಲಸ ಮಾಡಿದ್ದೇನೆ. ಆದಿವಾಸಿಗಳ ಹಕ್ಕು ಕಾಯುವ ಕೆಲಸ ಮಾಡಿದ್ದೇನೆ. ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಟ್ಟಿರುವ ಸಂತೃಪ್ತಿ ಇದೆ.
– ಡಿ.ಕೆ.ಸುರೇಶ್, ಸಂಸದ.