Advertisement
ಕಳೆದ ವಾರ ಶಾರ್ಜಾದಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಪಿ ಬರು ತ್ತಿರುವ ಮಾಹಿತಿ ಸಿಕ್ಕಿತ್ತು. ಅಲ್ಲದೆ, ಎಲ್ಲ ಪ್ರಯಾಣಿಕರನ್ನು ಲೋಹ ಶೋಧಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗಿತ್ತು. ಆರೋಪಿ ತಪಾಸಣೆ ವೇಳೆ ಶಬ್ಧ ಬಂದಿದೆ. ಅನುಮಾನದ ಮೇರೆಗೆ ವಿಚಾರಣೆ ಕೊಠಡಿಗೆ ಕರೆ ದೊಯ್ದು ಪರಿಶೀಲಿಸಿದಾಗ ಪ್ರಾಥಮಿಕವಾಗಿ ಹೊಟ್ಟೆ ಯಲ್ಲಿ ಹೆರಾಯಿನ್ ತುಂಬಿದ ಮಾತ್ರೆಗಳು ಇವೆ ಎಂದು ಗೊತ್ತಾಗಿದೆ. ನಂತರ ಆತನಿಗೆ ಸುಮಾರು ಎರಡು ದಿನಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಹೊಟ್ಟೆಯೊಳಗಿದ್ದ ಹೆರಾಯಿನ್ ಮಾತ್ರೆಗಳನ್ನು ಹೊರತೆಗೆಯಲಾಗಿದೆ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.
Related Articles
Advertisement
ಮತ್ತೂಂದು ಪ್ರಕರಣದಲ್ಲಿ ನೋವು ನಿವಾರಕ ಬೆಲ್ಟ್ನಲ್ಲಿ ಚಿನ್ನದ ಪೇಸ್ಟ್‌ಅನ್ನು ಬಟ್ಟಿಟ್ಟುಕೊಂಡು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 7 ಲಕ್ಷ ಮೌಲ್ಯದ 1 ಕೆ.ಜಿ 400 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಆರೋಪಿಯನ್ನು ತಪಾಸಣೆ ನಡೆಸಿದಾಗ ಬೆಲ್ಟ್ ಸಿಕ್ಕಿತ್ತು.
ಆದರೆ, ಸಾಮಾನ್ಯ ಗಾತ್ರಕ್ಕಿಂತ ಬೆಲ್ಟ್ನ ಗಾತ್ರದಲ್ಲಿ ಕೆಲವೊಂದು ವ್ಯತ್ಯಾಸಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನುಮಾನದ ಮೇರೆಗೆ ವಶಕ್ಕೆ ಪಡೆದು ಪರಿಶೀಲಿಸಿದಾಗ ಚಿನ್ನದ ಪೇಸ್ಟ್‌ಅನ್ನು ಆರೋಪಿ ಬೆಲ್ಟ್ ಒಳಭಾಗದಲ್ಲಿ ಇಟ್ಟುಕೊಂಡಿದ್ದ. ಆರೋಪಿ ದುಬೈನ ಕೆಲ ವ್ಯಕ್ತಿಗಳ ಸೂಚನೆ ಮೇರೆಗೆ ಬೆಂಗಳೂರಿನ ಚಿನ್ನದ ವ್ಯಾಪಾರಿಗಳಿಗೆ ಸರಬರಾಜು ಮಾಡಲು ಬಂದಿದ್ದ ಎಂಬುದು ಗೊತ್ತಾಗಿದೆ ಎಂದು ಕಸ್ಟಮ್ಸ್ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.