Advertisement

ಪಠ್ಯದಲ್ಲಿ ಬಹಳಷ್ಟು ಬದಲಾವಣೆ ಅಗತ್ಯ

06:52 PM Jul 19, 2021 | Team Udayavani |

ಬೆಂಗಳೂರು: ನಮ್ಮ ಪಠ್ಯಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಾಗಿದೆಎಂದುವಿಧಾನ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಗೋಖಲೆ ಇಸ್ಟಿಟ್ಯೂಟ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಸ್‌.ಗುರುಮೂರ್ತಿ ಅವರ “ಕದಂಬರುಸಮಗ್ರ ಅವಲೋಕನ’ ಕೃತಿಯನ್ನುಬಿಡುಗಡೆಗೊಳಿಸಿ ಮಾತನಾಡಿದ ಅವರು,ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆತಿಳಿಸುವಕೆಲಸ ಆಗಬೇಕಾಗಿದೆ ಎಂದರು.

“ನಮ್ಮ ಶಿಕ್ಷಣದ ಪಠ್ಯವು ಭಾರತೀಯದೃಷ್ಟಿಕೋನದ ಇತಿಹಾಸವನ್ನು ಒಳಗೊಳ್ಳಬೇಕಿದೆ. ಹಾಗಾಗಿ, ಗುಲಾಮತನದ ಇತಿಹಾಸವನ್ನು ಕೈಬಿಟ್ಟು, ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವಕೆಲಸವಾಗಬೇಕು ಎಂದು ತಿಳಿಸಿದರು. ಈನಿಟ್ಟಿನಲ್ಲಿ ನಾನು ಶಿಕ್ಷಣ ಸಚಿವನಾಗಿದ್ದವೇಳೆ ಪಠ್ಯಪರಿಷ್ಕರಣಾ ಸಮಿತಿ ರಚಿಸಿ,1ರಿಂದ 10ನೇ ತರಗತಿಯ ಪಠ್ಯದಲ್ಲಿಕೆಲವು ಬದಲಾವಣೆ ತರಲು ಮುಂದಾದೆ.ಆಗ ಕೆಲವರು ಕೇಸರೀಕರಣಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಆದರೂ ನನ್ನ ಪ್ರಯತ್ನವನ್ನು ನಾನುಬಿಡಲಿಲ್ಲ ಎಂದರು. ಹಿರಿಯ ಸಾಹಿತಿಹಂ.ಪ. ನಾಗರಾಜಯ್ಯ ಮಾತನಾಡಿ,ಕದಂಬರು ಬಿಟ್ಟು ಹೋಗಿರುವಶಾಸನಗಳು ನಮಗೆ ಸತ್ಯ ದರ್ಶನಮಾಡಿಸುತ್ತವೆ. ಹೀಗಾಗಿ ಅವರು ಬಿಟ್ಟುಹೋಗಿರುವ ಶಾಸನಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದÃು.‌ ಸಾಹಿತಿಪ್ರೊ.ಜಿ.ಅಶ್ವñನಾರಾ ‌§ ಯಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next