ಬೆಂಗಳೂರು: ನಗರ ಜಿಲ್ಲಾಡಳಿತ ವ್ಯಾಪ್ತಿಯಮುಜರಾಯಿ ದೇವಾಲಯಗಳ ಆಸ್ತಿ ಸಂರಕ್ಷಿಸಲು ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಇಲಾಖೆಯ ಪ್ರಗತಿ ಪರಿಶೀಲನಾಸಭೆ ಬಳಿಕ ಮಾತನಾಡಿದ ಅವರು,ಬೆಂಗಳೂರು ನಗರ ಜಿಲ್ಲಾವ್ಯಾಪ್ತಿಯ ಎಲ್ಲಾ ಮುಜರಾಯಿದೇವಾಲಯಗಳ ಆಸ್ತಿಗಳನ್ನು ಯಾವುದೇಲೋಪಗಳಿಗೆ ಎಡೆಮಾಡಿ ಕೊಡದಂತೆ ಸಂರಕ್ಷಿಸುವುದು ಕಾರ್ಯನಿರ್ವಾಹಣ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಆಸ್ತಿ ಸಂರಕ್ಷಣೆ ಸೇರಿದಂತೆಹಲವು ವಿಚಾರಗಳ ಕುರಿತು ಚರ್ಚೆನಡೆಯಿತು.
ದೇವಾಲಯಗಳಸರ್ವೆ ಕಾರ್ಯ ಕೈಗೊಂಡು, ಗಡಿ ಗುರುತಿಸಿ,ಬೇಲಿ ಹಾಕಿ ರಕ್ಷಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಜತೆಗೆ ಒತ್ತುವರಿ ಆಗಿರುವಹಲವು ದೇವಾಲಯಗಳ ಜಾಗವನ್ನು ತೆರವುಗೊಳಿಸಲು ಅಧಿಕಾರಿಗ ಳಿಗೆ ಸೂಚನೆ ನೀಡಲಾಗಿದೆ. ಸ್ಥಳೀಯವಾಗಿಯಾವುದೇ ಅಡೆತಡೆಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಆ ಸಮಸ್ಯೆಗಳನ್ನುಬಗೆಹರಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದುಸ್ಪಷ್ಟಪಡಿಸಿದರು.ವಿಧಾನ ಪರಿಷತ್ ಸದಸ್ಯರಾದ ಪಿ.ಆರ್.ರಮೇಶ್, ರಮೇಶ್ ಗೌಡ, ರವಿಕುಮಾರ್‌ಹಾಗೂ ಅ. ದೇವೇಗೌಡ , ಜಿಲ್ಲಾಧಿಕಾರಿ ಜೆ.ಮಂಜುನಾಥ್, ಇಲಾಖೆಯ ಆಯುಕ್ತೆರೋಹಿಣಿ ಸಿಂಧೂರಿ ಇತರರು ಇದ್ದರು.