Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಹಳಷ್ಟು ರೈತರು ಅಂಗಾಂಶ ಬಾಳೆಯನ್ನು ¸ಬೆಳೆಯಲು ತೋಟಗಾರಿಕೆ ಅಧಿಕಾರಿಗಳ ಸಹಕಾರದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯಉದ್ಯೋಗ ಖಾತರಿ ಯೋಜನೆಯಡಿ ಗುಂಡಿ ತೆಗೆಯಲು, ಗಿಡ ನೆಡೆಸಲು, ಗೊಬ್ಬರ ಸೇರಿದಂತೆ ವಿವಿಧÖ ಂತ¨ ¸ ೆÙ ೆಯ ಪೋಷO ೆಗ ೆ ಹಣವನ್ನು ಬಳಕೆಮಾಡಿಕೊಂv ರೈñ ರು, ಅತಿ ಕಡಿಮೆ ಬಂಡವಾಳದಲ್ಲಿ ಅಂಗಾಂಶ ಬೆಳೆ ಬೆಳೆದು ಮಾದರಿಯಾಗುವ ಜತೆ ಲಾಭವನ್ನು ಪಡೆದು ಕೊಂಡಿದ್ದಾರೆ.
Related Articles
Advertisement
ಬಾಳೆ ಬೆಳೆದ ರೈತನ ಬಾಳು ಬಂಗಾರಎಂಬುದು ಬಾಳೆ ಬೆಳೆದು ಲಾಭ ಪಡೆದ ಕೋನಯ್ಯ,ಸಿದ್ದಗಂಗಮ್ಮ ಅವರ ಅಭಿಪ್ರಾಯವಾಗಿದೆ.ಅಂಗಾಂಶ ಕೃಷಿ ಹೇಗೆ?: ನೀರು ಬಸಿದು ಹೋಗುವಗೋಡು ಮಣ್ಣು ಇದ್ದರೆ ಅಂಗಾಂಶ ಬಾಳೆಗೆ ಉತ್ತಮ.ಅಂಗಾಂಶ ಬಾಳೆಗಿಡ ನೆಡುವಾಗ 1.5 ಮೀಟರ್ ಅಂತರದಲ್ಲಿ ಒಂದು ಗಿಡದಿಂದ ಮತ್ತೂಂದುಗಿಡವನ್ನು ನೆಟ್ಟು ಪೋಷಣೆ ಮಾಡಬೇಕು. ಬಾಳೆ ಗಿಡ ನೆಡುವಾಗಗುಂಡಿಗಳಿಗೆ ಬೇವಿನ ಹಿಂಡಿ,ಕೆಂಪು ಮಣ್ಣು ಹಾಗೂಕೊಟ್ಟಿಗೆ ಗೊಬ್ಬರಗಳನ್ನುಸಮ ಪ್ರಮಾಣದಲ್ಲಿಮಿಶ್ರಣ ಮಾಡಿ ಹಾಕಬೇಕು. ಅದರಲ್ಲಿ ಬಾಳೆಸಸಿಗಳನ್ನು ಪಾಲೀಥಿನ್‌ಚೀಲಗಳನ್ನು ಸೀಳಿ ನಾಟಿ ಮಾಡಿ,ಹನಿ ನೀರಾವರಿಯಿಂದ ನೀರು ಹಾಯಿಸಿದರೆ ನೀರಿನ ಮಿತ ವ್ಯಯವಾಗಲಿದೆ. ನಾಟಿ ಮಾಡಿದದಿನದಿಂದ ಪ್ರತಿ 30 ದಿನಗಳು ಹಾಗೂ ಗೊನೆಕಾಣಿಸಿಕೊಂಡಾಗ ಸಾರಜನಕ, ರಂಜಕ ಹಾಗೂಪೋಷಕಾಂಶ ಇರುವ ಗೊಬ್ಬರ ಹಾಕಿದರೆ ಒಳಿತು.ವೆಂಚುರಿ ಉಪಕರಣ ಬಳಸಿ ನೀರಿನ ಮೂಲಕಯೂರಿಯಾ, ಲಘು ಪೋಷಕಾಂಶಗಳು ಗಿಡಗಳಿಗೆಪೂರೈಸಬಹುದು.
ಬಾಳೆಗಳಿಗೆ ಪನಾಮ ಸೊರಗುರೋಗ, ಎಲೆಚುಕ್ಕಿ ರೋಗ, ಚುಟ್ಟದ ತುದಿ ರೋಗಗಳುಬರದಂತೆ ಕಾಲ ಕಾಲಕ್ಕೆ ಔಷಧ ಸಿಂಪಡಿಸಿ, ಬಾಳೆಗೊನೆಸಂಪೂರ್ಣ ಹೊರಬಂದು ಕಾಯಿ ಕಚ್ಚಿದ ಬಳಿಕಹೂವಿನ ಮೂತಿ ಮುರಿದು ತಿಂಗಳಿಗೆ ಎರಡುಬಾರಿಯಂತೆ ಬನಾನಾ ಸ್ಪೆಷಲ್‌ನನ್ನು ಗೊನೆಗಳಿಗೆ ಸಿಂಪಡಿಸಿದರೇ ಕಾಯಿಯಬೆಳವಣಿಗೆಗೆಸಹಾಯವಾಗುತ್ತದೆಎನ್ನುತ್ತಾರೆ ರೈತ ಶಿವಕುಮಾರ್.
ಅಂಗಾಂಶ ಬಾಳೆ ಕೃಷಿ ಅನುಕೂಲ: ಒಂದೇ ಬಾರಿಗೆಫಸಲು ಸಿಗುವುದರಿಂದ ಗೊನೆಗಳ ಮಾರಾಟ ಪ್ರಕ್ರಿಯೆಸುಲಭ. ಬೇರೆ ತಳಿಗಳಿಗಿಂತ ಬೇಗ ಗೊನೆ ಬಿಡುವಹಾಗೂ ಅಧಿಕ ಇಳುವರಿ ನೀಡುವ ಕೆಲಸವಾಗುವುದರಿಂದ ಬೆಳೆ ನಿರ್ವಹಣೆ ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಕೀಟ ಹಾಗೂ ರೋಗರಹಿತ ಗಿಡಗಳುಲಭ್ಯರುವುದು ದೊಡ್ಡ ಅನುಕೂಲವಾಗಿದೆ. ಅಂಗಾಂಶಕೃಷಿ ತಂತ್ರಜ್ಞಾನದಲ್ಲಿ ಬೆಳೆದ ಮಧುಕರ್, ಏಲಕ್ಕಿ ಬಾಳೆ,ರಸಬಾಳೆ, ಕರಿಬಾಳೆ, ಬೂದುಬಾಳೆ, ಕಂದುಬಾಳೆ,ಕೆಂಪುಬಾಳೆ, ಜವಾರಿ, ಪುಟ್ಟಬಾಳೆ ಮೊದಲಾದತಳಿಗಳಲ್ಲಿಯೂ ಅನುಕೂಲ ಕಾಣಬಹುದು.
ಹೊಲಕ್ಕೆ ಬರುವ ವ್ಯಾಪಾರಿಗಳು: ಅಂಗಾಂಶ ಬಾಳೆಬೆಳೆಯಲು ನರೇಗಾ ಸಹಕಾರಿಯಾಗಿದ್ದು, ರೈತರುಮಾರುಕಟ್ಟೆಗೆ ಹೋಗಿ ಬಾಳೆಕಾಯಿ ಮಾರುವ ಅನಿವಾರ್ಯವಿಲ್ಲ. ಇತ್ತೀಚಿಗೆ ಬಾಳೆ ಹಣ್ಣಿಗೆ ಹೆಚ್ಚು ಬೇಡಿಕೆಸೃಷ್ಟಿಯಾಗಿದೆ. ವ್ಯಾಪಾರಿಗಳೇ ತೋಟಗಳಿಗೆ ಬಂದುಖರೀದಿ ಮಾಡುತ್ತಾರೆ. ಬಾಳೆ ಗೊನೆ ಉತ್ತಮವಾಗಿದ್ದರೆ ಹೆಚ್ಚು ಬೆಲೆ ಇರುವುದನ್ನುಕಾಣಬಹುದು.
ಈಗಾಗಲೇ ಕೆ.ಜಿಗೆ30ರಿಂದ40 ರೂ. ಬಾಳೆ ಹಣ್ಣು ಮಾರಾಟವಾಗುತ್ತಿದ್ದು, ರೈತರಿಗೆ ಕೆ.ಜಿ.ಗೆ 20ರಿಂದ 25ರೂ.ಗಿಂತ ಹೆಚ್ಚು ದರ ಲಭ್ಯವಾಗುತ್ತಿದೆ.ಅಧಿಕಾರಿಗಳ ಮಾರ್ಗದರ್ಶನ: ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂಗಾಂಶ ಬಾಳೆ ಬೆಳೆಯುವ ರೈತರಿಗೆ ಭೂಮಿ ಉಳುಮೆ ಮಾಡಿ, ಗುಂಡಿತೆಗೆದು, ನೆಟ್ಟು, ಔಷಧಿ ಸಿಂಪಡಣೆ, ನಿರ್ವಹಣೆಹಾಗೂ ಕಟಾವು ಮಾಡುವ ಹಂತದವರೆಗೂ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನಮಾಡುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿಲಾಭ ಪಡೆಯಲು ಮಾರ್ಗದರ್ಶನ ಮಾಡಿ, ರೈತರಮಾದರಿ ಕೃಷಿಗೆ ಸಹಕಾರಿಯಾಗಿದ್ದಾರೆ.
ಕೊಟ್ರೇಶ್.ಆರ್