Advertisement

ಸ್ವಾಧೀನ ಭೂಮಿ ಚತುಷ್ಪಥಕ್ಕೆ ಕಾಯ್ದಿರಿಸಿ

02:47 PM Jun 17, 2021 | Team Udayavani |

ಬೆಂಗಳೂರು: ಭೂಸ್ವಾಧೀನಗೊಂಡಕೋನದಾಸಪುರ ಗ್ರಾಮದ ಜಮೀನುಗಳಭೂಮಿಯನ್ನು ಎಚ್‌ಕೆಇ ರಸ್ತೆಯಿಂದಬೂದಿಗೆರೆ ಕ್ರಾಸ್‌ವರೆಗೆ ಚತುಷ್ಪಥದ ರಸ್ತೆನಿರ್ಮಿಸಲು ಕಾಯ್ದಿರಿಸುವಂತೆ ಅರಣ್ಯಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವಅರವಿಂದ ಲಿಂಬಾವಳಿ ಸೂಚಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ನಡೆದಉನ್ನತ ಅಧಿಕಾರಿಗಳ ಸಭೆಯಲ್ಲಿ ಸಚಿವ ಅರವಿಂದಲಿಂಬಾವಳಿ ಈ ಸೂಚನೆ ನೀಡಿದರು.”ಕೋನದಾಸಪುರದಲ್ಲಿ ಭೂಸ್ವಾಧೀನ ಪಡಿಸಿಕೊಂಡ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆಸ್ಯಾಟಲೈಟ್‌ ಬಸ್‌ ನಿಲ್ದಾಣ, ಮೆಟ್ರೋನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕಉದ್ದೇಶಕ್ಕಾಗಿ ಮೀಸಲಿರಿಸುವಂತೆ’ನಿರ್ದೇಶನ ನೀಡಿದರು.

ಇದೇ ವೇಳೆ ಬೆಳ್ಳಂದೂರು ಹಾಗೂವರ್ತೂರು ಕೆರೆ ಅಭಿವೃದ್ಧಿ ಕಾಮ ಗಾರಿಗಳಪ್ರಗತಿ ಪರಿಶೀಲನೆ ನಡೆಸಿದ ಸಚಿವಅರವಿಂದ ಲಿಂಬಾವಳಿ, ಶೀಘ್ರ ಅಲ್ಲಿನಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದೊಡ್ಡಬನಹಳ್ಳಿ ಹಾಗೂ ಗುಂಜೂರು ವಸತಿಯೋಜನೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಚಿಕ್ಕಬನಹಳ್ಳಿಕೆರೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆವಸತಿ ಸೌಕರ್ಯ ಕಲ್ಪಿಸುವ ಬಗ್ಗೆ ಚರ್ಚಿಸಿ ಕೂಡಲೇ ಈಬಗ್ಗೆ ಅಗತ್ಯ ಕ್ರಮ ಕೈಗೊಂಡು ಯೋಜನೆ ಅನುಷ್ಠಾನಕ್ಕೆಮುಂದಾಗಬೇಕು ಎಂದು ಸಚಿವರು ಸೂಚಿಸಿದರು.

ಕೋನದಾಸಪುರ, ಗುಂಜೂರು,ದೊಡ್ಡಬನಹಳ್ಳಿಯಲ್ಲಿ ಮಂಗಳವಾರ ಪರಿವೀಕ್ಷಣೆನಡೆಸಿ ವರದಿ ನೀಡಲು ಆದೇಶಿಸಿದರು.ಬಿಡಿಎ ಅಧ್ಯಕ್ಷರು ಮತ್ತು ಶಾಸಕ ಎಸ್‌.ಆರ್‌.ವಿಶ್ವನಾಥ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತರಾಕೇಶ್‌ ಗೌಡ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next