Advertisement

ಕರಗಕ್ಕೆ ಅನುಮತಿ ಸಿಗುವ ನಿರೀಕ್ಷೆ

03:05 PM Jul 13, 2021 | Team Udayavani |

ರಾಮನಗರ: ಕೋವಿಡ್‌ ಸೋಂಕು ಕಾರಣ ಎರಡನೇ ವರ್ಷವೂ ರಾಮನಗರದಲ್ಲಿಕರಗ ಮಹೋತ್ಸವ ದೇವಾಲಯ ಗಳ ಆವರಣಗಳಿಗೆ ಸೀಮಿತವಾಗುವ ಲಕ್ಷಣಗಳಿವೆ. ಆದರೆ, ಜಿಲ್ಲಾಡಳಿತ ಈ ಬಗ್ಗೆ ಇನ್ನು ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ. ಜು.20ರಂದು ನಗರದ ಮಂಡಿಪೇಟೆಯಲ್ಲಿರುವ ಬನ್ನಿ ಮಹಾಕಾಳಿ ಅಮ್ಮನವರ ಕರಗ ಮಹೋತ್ಸವ ಮತ್ತು ಜುಲೈ 27ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರಕರಗ ಸೇರಿದಂತೆ 7 ಶಕ್ತಿದೇವತೆಗ ಕರಗ ಮಹೋತ್ಸವಗಳು ನಡೆಯಬೇಕಿದೆ.

Advertisement

ಸರ್ಕಾರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವ ಕಾಶ ನೀಡಿದೆ. ಧಾರ್ಮಿಕ ಅಚರಣೆಗಳಿಗೆ ಅವಕಾಶ ಕೊಟ್ಟಿಲ್ಲ. ಕಳೆದ ವರ್ಷ ಕೋವಿಡ್‌ ಸೋಂಕು ಮೊದಲನೇ ಅಲೆಯಲ್ಲಿ ದೇವಾಲಯದ ಆವರಣಕ್ಕೆ ಸೀಮಿತಗೊಳಿಸಿ ಕರಗ ಮಹೋತ್ಸ ವಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಆದರೆ, ಈ ಬಾರಿ ಜಿಲ್ಲಾ ಡಳಿತ ಇದುವರೆಗೂ ಏನೊಂದು ನಿರ್ಧಾರವನ್ನು ಪ್ರಕಟಿಸಿಲ್ಲ. ತಾಲೂಕು ಆಡಳಿತ ಅನುಮತಿ ನೀಡಲು ನಿರಾಕರಿಸಿರುವ ಕಾರಣ ಜಿಲ್ಲಾಧಿಕಾರಿಗಳ ನಿರ್ಧಾರ ಮುಖ್ಯವಾಗಲಿದೆ.

ಮಂಡಿಪೇಟೆಯಲ್ಲಿರುವ ಬನ್ನಿಮಹಾಕಾಳಿ ಅಮ್ಮನವರ ಕರಗ ಮಹೋತ್ಸವ ಜು. 20ರಂದು ನಡೆಯಬೇಕಿದೆ. ಈ ಹಿನ್ನೆ ಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜು.13ರ ಮಂಗಳ ವಾರದಿಂದಲೇ ಆರಂಭವಾಗಬೇಕಿದ್ದು, ಹಸಿ ಕರಗ ನಡೆಯಬೇ ಕಿದೆ. ದೇವಾಲಯದ ಆವರಣದ ಮಟ್ಟಿಗೆ ಹಸಿ ಕರಗ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆ ಅಮ್ಮನವರಿಗೆ ನಿತ್ಯದ ಅನುಷ್ಠಾನಗಳ ಜೊತೆಗೆ ರುದ್ರಾಭೀಷಕ, ಹೂವಿನಿಂದ ವಿಶೇಷ ಅಲಂಕಾರ ನಡೆ ಯಲಿದೆ. ಮಹಾಮಂಗಳಾರತಿ ಸಹ ನಡೆಯಲಿದೆ. ಸಂಜೆ 6ಗಂಟೆಗೆ ದೇವಾಲಯದ ಆವರಣದಲ್ಲಿಯೇ ಹಸೀ ಕರಗ ಮಹೋತ್ಸವ ನಡೆಸಲು ಉದ್ದೇಶಿಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next