Advertisement

ಬೆಂಗಳೂರು ಇನ್ನು ಮಹಿಳಾ ಸುರಕ್ಷತಾ ನಗರ

02:25 AM Sep 10, 2018 | Team Udayavani |

ಹೊಸದಿಲ್ಲಿ: ಬೆಂಗಳೂರು ಸಹಿತ ದೇಶದ ಮಹಾನಗರಗಳನ್ನು ಮಹಿಳೆಯರ ಮತ್ತು ಮಕ್ಕಳ ಪಾಲಿಗೆ ಸುರಕ್ಷಿತ ತಾಣಗಳನ್ನಾಗಿ ಪರಿವರ್ತಿಸಲು ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ, ಅಂದಾಜು 3000 ಕೋಟಿ ರೂ. ವೆಚ್ಚದಲ್ಲಿ ‘ಮಹಿಳಾ ಸುರಕ್ಷಾ ನಗರ’ ಹೆಸರಿನ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರುವತ್ತ ಹೆಜ್ಜೆಯಿಡಲಾಗಿದೆ. ಬೆಂಗಳೂರಿಗೆ ಹೆಚ್ಚಿನ ಹಣ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ 60:40ರ ಅನುಪಾತದ ಧನಸಹಾಯದಲ್ಲಿ ಬೆಂಗಳೂರು ಮಾತ್ರವಲ್ಲದೆ ಮುಂಬೈ, ಕೋಲ್ಕತಾ, ಚೆನ್ನೈ, ದೆಹಲಿ, ಹೈದರಾಬಾದ್‌, ಅಹಮದಾಬಾದ್‌ ಹಾಗೂ ಲಕ್ನೋಗಳಲ್ಲಿ 2018-19ರಿಂದ 2020-21ರೊಳಗೆ ಯೋಜನೆ ಅನುಷ್ಠಾನಗೊಳಿಸಲು ಸಚಿವಾಲಯ ತೀರ್ಮಾನಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ಯಾನಿಕ್‌ ಬಟನ್‌, ಸರ್ವ ಮಹಿಳಾ ಪೊಲೀಸ್‌ ಗಸ್ತು ಪಡೆ ರಚನೆ, ಸೈಬರ್‌ ಕ್ರೈಂ ಕೇಂದ್ರ ಸ್ಥಾಪನೆ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗುತ್ತದೆ.

Advertisement

ಮಹಿಳಾ ಸುರಕ್ಷಾ ನಗರ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ನೀಡಲಾಗುವ ನಿರ್ಭಯಾ ನಿಧಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 2,991.55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿಗೆ ಸಿಂಹಪಾಲು ಅಂದರೆ 667 ಕೋಟಿ ರೂ. ನೀಡಲಾಗಿದೆ. ಆಯಾ ನಗರಗಳ ಪೊಲೀಸ್‌ ಮತ್ತು ಪಾಲಿಕೆ ಆಯುಕ್ತರು ಈ ಸುರಕ್ಷಾ ನಗರಗಳ ಪ್ರಸ್ತಾಪಗಳನ್ನು ಸಿದ್ಧಪಡಿಸಿದ್ದು, ಹೆಚ್ಚು ಅಪರಾಧಗಳು ನಡೆಯುವ ಪ್ರದೇಶಗಳ ಜಿಐಎಸ್‌ ಆಧರಿತ ಕ್ರೈಂ ಮ್ಯಾಪಿಂಗ್‌, ಅಪರಾಧದ ಸನ್ನಿವೇಶಗಳ ಪರಿಶೀಲನೆಯೂ ಇದರಲ್ಲಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next