Advertisement
ರಾಜಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಎಸ್.ಸುರೇಶ್‌ಕುಮಾರ್ ಹಾಗೂ ಇತರ ಬಿಜೆಪಿ ಮುಖಂಡರು, ಶಾಸಕರು ಮತ್ತು ಕಾರ್ಯಕರ್ತರ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಹಿಂದೆ ಸಂಘಟನೆ ಅವಧಿಯಲ್ಲಿ ಬೆಂಗಳೂರು ಮತ್ತು ಸುರೇಶ್ ಕುಮಾರ್ ಜತೆಗಿದ್ದ ಒಡನಾಟವನ್ನು ಸ್ಮರಿಸಿದರು.
Related Articles
Advertisement
ಅಪರಾಧಗಳು ಹೆಚ್ಚಿವೆ. ಸಂಚಾರ ದಟ್ಟಣೆ ತೀವ್ರವಾಗಿದೆ. ಕಳೆದ ವರ್ಷ ಮಳೆ ಸುರಿದಾಗ ಪ್ರವಾಹ ಉಂಟಾಗಿತ್ತು. ನೀವು ಗುಜರಾತ್‌ನಲ್ಲಿ ಅನುಕರಣೀಯ ಮಾದರಿಯನ್ನು ರೂಪಿಸಿ ತೋರಿಸಿದ್ದೀರಿ. ನಗರದಲ್ಲಿ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಯಾವ ರೀತಿಯ ಪರಿಹಾರ ಸೂಚಿಸುತ್ತೀರಿ,’ ಎಂದು ಕೇಳಿದರು.
ಸಣ್ಣ ಮಳೆಗೂ ನೆರೆ ದುರದೃಷ್ಟ:“ಇದು ಬೆಂಗಳೂರಿನ ಜನರಷ್ಟೇ ಅಲ್ಲ, ಕರ್ನಾಟಕ ಹಾಗೂ ಇಡೀ ದೇಶದ ಜನ ಆತಂಕ ಪಡುವ ವಿಚಾರ. ದೇಶದಲ್ಲಿ ಇಂದು ನಗರೀಕರಣ ತೀವ್ರವಾಗಿದೆ. ಗ್ರಾಮೀಣ ಜನ ಉದ್ಯೋಗ ಅರಸಿ ನಗರಗಳಿಗೆ ಬರುತ್ತಿದ್ದಾರೆ. ಅವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಇತರೆ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ಬೇಕಿದೆ.
ಮುಂದಿನ 20, 30 ವರ್ಷಗಳಲ್ಲಿನ ಬೆಳವಣಿಗೆ ಹಾಗೂ ಅದಕ್ಕೆ ಪೂರಕ ಸೌಕರ್ಯ ಕಲ್ಪಿಸಲು ಈಗಲೇ ಯೋಜನೆ ರೂಪಿಸಬೇಕು. ಸಣ್ಣ ಮಳೆಗೂ ನಗರ ಜಲಾವೃತವಾಗುವುದು ದುರದೃಷ್ಟಕರ. ಹಾಗಾಗಿ ಸ್ಮಾರ್ಟ್‌ಸಿಟಿ ಯೋಜನೆಗೆ ಆದ್ಯತೆ ನೀಡಲಾಗಿದೆ,’ ಎಂದು ಹೇಳಿದರು.
“ಬೆಂಗಳೂರು ದೇಶದ ಅಭಿವೃದ್ಧಿಗೆ ನೆರವಾಗುವ ನಗರ. ಇಲ್ಲಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಸಂಚಾರ ದಟ್ಟಣೆ ನಿವಾರಣೆಗೆ ಹೊಸ ರೈಲುಗಳ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವುದು. ರಸ್ತೆ ಅಭಿವೃದ್ಧಿ, ಮೇಲುಸೇತುವೆ, ಮೆಟ್ರೋ ಸೇರಿದಂತೆ ವೈಜ್ಞಾನಿಕ ವಿಧಾನದಡಿ ಅಗತ್ಯ ಸೌಲಭ್ಯ ಕಲ್ಪಿಸಲು ಬಿಜೆಪಿ ಬದ್ಧ.
ಬೆಂಗಳೂರನ್ನು ಸ್ಮಾರ್ಟ್‌ಸಿಟಿಯಾಗಿಸುವ ಜತೆಗೆ ಸ್ವತ್ಛತೆ ಕಾಪಾಡಲು ಒತ್ತು ನೀಡಲಾಗುವುದು,’ ಎಂದು ಭರವಸೆ ನೀಡಿದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ರಾಜ್ಯದ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.
ಸಾಕಷ್ಟು ರೈತರು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಮುಂದೆ ಬಿಜೆಪಿಯು ರೈತರ ಆದಾಯ ದ್ವಿಗುಣ ಸೇರಿದಂತೆ ಸ್ಥಿತಿಗತಿ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕೋರಿದರು. “ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಇದು ಮಹತ್ವಪೂರ್ಣ ವಿಚಾರ. ರೈತರ ಕೃಷಿ ಖರ್ಚು ಕಡಿಮೆ ಮಾಡಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು.
ಹಿಂದೆ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೂ ರೈತರಿಂದ ಹೆಚ್ಚಿನ ಪ್ರಮಾಣದ ಫಸಲು ಖರೀದಿಸುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರಗಳು ಉತ್ತಮ ಕನಿಷ್ಠ ಬೆಂಬಲ ಬೆಲೆ ನೀಡುತ್ತಿರುವ ಜತೆಗೆ, ರೈತರಿಂದ ಹೆಚ್ಚಿನ ಪ್ರಮಾಣದ ಬೆಳೆ ಖರೀದಿಸುತ್ತಿವೆ. ರಾಜ್ಯದಲ್ಲೂ ಇದು ಮುಂದುವರಿಯಲಿದೆ,’ ಎಂದರು.
ಆಸ್ಟ್ರೇಲಿಯಾದಲ್ಲಿ ಚಂದನ ವನ: “ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದರೆ ಇ-ಮಂಡಿ (ಎಲೆಕ್ಟ್ರಾನಿಕ್ ಮಂಡಿ) ವ್ಯವಸ್ಥೆ ಜಾರಿಗೊಳಿಸಲಾಗುವುದು. ಪಶುಪಾಲನೆಗೂ ಒತ್ತು ನೀಡಲಾಗುವುದು. ಚಂದನದ ನಾಡು ಕರ್ನಾಟಕ. ಇಲ್ಲಿನ ಶ್ರೀಗಂಧದ ತಳಿಯನ್ನು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗಿ ದೊಡ್ಡ ವನ ನಿರ್ಮಿಸಿದ್ದಾರೆ.
ಹಾಗಾಗಿ ಕರ್ನಾಟಕದ ಚಂದನ ಬೆಳೆಸಲು ಹಾಗೂ ಶ್ರೀಗಂಧದ ಉತ್ಪನ್ನಗಳಿಗೆ ಒತ್ತು ನೀಡಿ ಉದ್ಯೋಗದ ಜತೆಗೆ ವಹಿವಾಟು ವೃದ್ಧಿಗೂ ಉತ್ತೇಜನ ನೀಡಲಾಗುವುದು. ಮಣ್ಣಿನ ಆರೋಗ್ಯ ಕಾರ್ಡ್ ನೀಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಉತ್ತೇಜಿಸಲಾಗುವುದು.
ಸೋಲಾರ್ ಪಂಪ್‌ಸೆಟ್ ವ್ಯವಸ್ಥೆ ಕಲ್ಪಿಸಿ ಹನಿ ನೀರಾವರಿ, ತುಂತುರು ನೀರಾವರಿ ಸೌಲಭ್ಯಕ್ಕೂ ಒತ್ತು ನೀಡಲಾಗುವುದು. ಜೇನು ಕೃಷಿ ಸೇರಿದಂತೆ ಇತರೆ ಉಪಕಸುಬುಗಳಿಗೂ ಉತ್ತೇಜನ ನೀಡಲಾಗುವುದು,’ ಎಂದು ಪ್ರಧಾನಿ ಭರವಸೆ ನೀಡಿದರು.
ನೀಲಿ ಕ್ರಾಂತಿ: “ನೀಲಿ ಕ್ರಾಂತಿ ಸೃಷ್ಟಿಸಲು ಬಿಜೆಪಿ ಚಿಂತಿಸಿದೆ. ಕರ್ನಾಟಕವು ವಿಶಾಲವಾದ ಸಮುದ್ರ ತೀರ ಹೊಂದಿದ್ದು, ಅದನ್ನು ಅವಲಂಬಿಸಿರುವ ಮೀನುಗಾರರ ಬದುಕು ಹಸನಾಗಬೇಕಿದೆ. ಸಮುದ್ರದ ನೀರು ಸಂಸ್ಕರಿಸಿ ರಸಗೊಬ್ಬರ ಸೇರಿದಂತೆ ಔಷಧೋದ್ಯಮಕ್ಕೆ ಪೂರಕವಾಗಿ ಬಳಸಲು ಅವಕಾಶ ಕಲ್ಪಿಸಬೇಕಿದೆ. ಒಟ್ಟಾರೆ ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು,’ ಎಂದು ಪ್ರಧಾನಿ ವಿವರಿಸಿದರು.
ನಾನೂ ಕನ್ನಡಿಗನೆಂದು ಭಾವಿಸಿ: “ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಅತಂತ್ರ ಸರ್ಕಾರ ಬರಲಿದೆ ಎಂದು ಅಪಪ್ರಚಾರ ನಡೆಸುತ್ತಿದೆ. ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ರೀತಿಯ ಸುಳ್ಳು ಹೇಳಿಕೆಗಳಿಂದ ಕಾಂಗ್ರೆಸ್ ಜಯ ಸಾಧ್ಯವಿಲ್ಲ,’ ಎಂದ ಪ್ರಧಾನಿ ನರೇಂದ್ರ ಮೋದಿ, “ಕರ್ನಾಟಕದ ಜನತೆಗೆ ಬಹುಮತದ ಸರ್ಕಾರದ ಅಗತ್ಯವಿದೆ. ಜಗತ್ತಿನಲ್ಲಿ ಇಂದು ಭಾರತದ ಖ್ಯಾತಿ ಹೆಚ್ಚಲು ಸುಸ್ಥಿರ ಬಹುಮತದ ಸರ್ಕಾರ ಕಾರಣ.
ಕರ್ನಾಟಕದ ಭಾಗ್ಯ ಬದಲಾಗಲು ಪೂರ್ಣ ಬಹುಮತದ ಸರ್ಕಾರ ರಚನೆಯಾಗಬೇಕಿದೆ. ಉದ್ದೇಶಪೂರ್ವಕವಾಗಿ ಅತಂತ್ರ ವಿಧಾನಸಭೆ ಬರಲಿದೆ ಎಂಬ ಅಪಪ್ರಚಾರ ನಡೆದಿದ್ದರೂ ಕರ್ನಾಟಕದ ಜನ ಅಭಿವೃದ್ಧಿ ಪರವಾಗಿದ್ದಾರೆ. ಕಾರ್ಯಕರ್ತರೆ, ಕರ್ನಾಟಕದ ಜನತೆಯ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸೋಣ. ನಾನೂ ಕನ್ನಡಿಗನೆಂದು ಭಾವಿಸಿ ನನ್ನೊಂದಿಗೆ ಕೈಜೋಡಿಸಿ,’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕನ್ನಡದಲ್ಲೇ ಮಾತು ಆರಂಭ: ಸಂವಾದದ ವೇಳೆ ಪ್ರಧಾನಿ ಮೋದಿ ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷವಾಗಿತ್ತು. “ಕರ್ನಾಟಕದ ಎಲ್ಲ ಭಾಗಗಳಲ್ಲಿ ಕಾರ್ಯನಿರತರಾಗಿರುವ ಕಾರ್ಯಕರ್ತ ಬಂಧುಗಳಿಗೆ ನಮಸ್ಕಾರ. ತಾಂತ್ರಿಕ ಮಾಧ್ಯಮದ ಮೂಲಕ ತಮ್ಮೊಡನೆ ಚರ್ಚೆ ನಡೆಸುವ ಅವಕಾಶ ನನಗೆ ದೊರೆತಿದೆ.
ಈ ಚರ್ಚೆಗೆ ತಮ್ಮೆಲ್ಲರಿಗೂ ಸ್ವಾಗತ’ ಎಂದು ಕನ್ನಡ ನುಡಿದ ಮೋದಿ, ಬಳಿಕ ಹಿಂದಿಯಲ್ಲಿ ಮಾತು ಮುಂದುವರಿಸಿ, “ಕರ್ನಾಟಕದ ಎಲ್ಲ ಬಂಧುಗಳೇ ನನಗೆ ಇಚ್ಛೆಯಿದ್ದರೂ ಕನ್ನಡ ಕಲಿಯಲು ಸಾಧ್ಯವಾಗದ್ದಕ್ಕೆ ಕ್ಷಮೆ ಇರಲಿ. ಅದಕ್ಕಾಗಿ ಮುಂದಿನ ಸಂವಾದವನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಮುಂದುವರಿಸುತ್ತೇನೆ,’ ಎಂದರು.
“ಕಮಲ’ ಧರಿಸಿ: ವಿಡಿಯೋ ಸಂವಾದದ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಅವರು ಕಮಲ ಸಂಕೇತ ಧರಿಸಿದ್ದನ್ನು ಕಂಡು ಸಂತಸಗೊಂಡ ಪ್ರಧಾನಿ ಮೋದಿ, “ನನ್ನಂತೆ ನೀವು ಕಮಲ ಸಂಕೇತ ಧರಿಸಿದ್ದೀರಿ. ಕಾರ್ಯಕರ್ತರೆಲ್ಲಾ ಮೇ 12ರವರೆಗೆ ಕಮಲದ ಸಂಕೇತ ಧರಿಸಬೇಕು ಎಂದು ಕರೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ ಜೊಲ್ಲೆ, ಇನ್ನುಮುಂದೆ ನಾವು ಸದಾ ಧರಿಸುತ್ತೇವೆ,’ ಎಂದರು.