Advertisement
ದೇಶದಲ್ಲೇ ದೆಹಲಿ ಮತ್ತು ಮುಂಬೈ ಹೊರತುಪಡಿಸಿದರೆ 2ನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ರಾಜ್ಯದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ.
Related Articles
Advertisement
ಇದನ್ನೂ ಓದಿ: ಹಿಮಾಚಲದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ; ಪ್ರಧಾನಿ ಮೋದಿ ಮನವೊಲಿಕೆಗೆ ಜಗ್ಗದ ಮಾಜಿ ಸಂಸದ
1.6 ಕೋಟಿ ಪ್ರಯಾಣಿಕರ ದಟ್ಟಣೆಯ ಹೊರೆ ತಗ್ಗಿಸಲು ಟರ್ಮಿನಲ್-2 (ಟಿ-2) ಸಿದ್ದಪಡಿಸಲಾಗಿದೆ. ಪ್ರತಿ ಗಂಟೆಗೆ 90 ವಿಮಾನಗಳ ಸಂಚಾರದೊಂದಿಗೆ ವಾರ್ಷಿಕ 3.6 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತಿದೆ.
ಈ ಟರ್ಮಿನಲ್ ಸುಮಾರು 4.41 ಲಕ್ಷ ಚದರ ಮೀಟರ್‍ನಷ್ಟು ವಿಶಾಲವಾಗಿದೆ. ಟರ್ಮಿನಲ್ ಆಕರ್ಷಕವಾಗಿ, ವಿನೂತನವಾಗಿ ಕಾಣುವಂತೆ ಮಾಡಲು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‍ಮೋರ್, ಓವಿಂಗ್ಸ್ ಮತ್ತು ಮೆರಿಲ್ ಸಂಸ್ಥೆಗಳು ಶ್ರಮಿಸಿವೆ.
ಟರ್ಮಿನಲ್-2 ಕಾಮಗಾರಿಯೊಂದಿಗೆ ಮೆಟ್ರೋ ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದೆ. ಸಿಲ್ಕ್ ಬೋರ್ಡ್- ಕೆಆರ್ ಪುರಂ- ವಿಮಾನ ನಿಲ್ದಾಣದ ಒಟ್ಟು 58.2 ಕಿ.ಮೀ ಮಾರ್ಗದಲ್ಲಿ ಬೆಂಗಳೂರಿನಿಂದ ದೇವನಹಳ್ಳಿ ಸಂಪರ್ಕ ಒದಗಿಸಲಿರುವ ವಿಮಾನ ಪ್ರಯಾಣಿಕರಿಗೆ ನೆರವಾಗಿದೆ.
ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಒದಗಿಸುವಲ್ಲಿ ಬೆಂಗಳೂರಿಗರ ಮುಖ್ಯ ಕೇಂದ್ರವಾಗಲಿರುವ ಹೆಬ್ಬಾಳದಿಂದ ನಿತ್ಯ 39,924 ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಬಿಎಂಆರ್‍ಸಿಎಲ್ ಅಂದಾಜಿಸಿದೆ.
ಜತೆಗೆ ಸಬ್‍ಅರ್ಬನ್ ರೈಲ್ವೆ ಕಾಮಗಾರಿಯೂ ಚಾಲನೆ ಪಡೆಯಲಿದ್ದು, ಮುಂಬರುವ ದಿನಗಳಲ್ಲಿ ಏರ್ಪೋರ್ಟ್ ಮಾರ್ಗ ವಾಣಿಜ್ಯ ಕ್ಷೇತ್ರಗಳಿಂದ ಮತ್ತಷ್ಟು ರಂಗೇರಲಿದೆ.