Advertisement

ಬೆಂಗಳೂರು: ಸ್ಪೇಸ್‌ ಸ್ಟಾರ್ಟ್‌ಅಪ್‌ ಗಳ ತವರು

11:43 PM Dec 05, 2022 | Team Udayavani |

ಭಾರತದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್‌-ಎಸ್‌ ಯಶಸ್ವಿಯಾಗಿ ನ.18ರಂದು ನಭಕ್ಕೆ ಉಡಾವಣೆಯಾಗುವ ಮೂಲಕ ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಮಹಾದ್ವಾರ ತೆರೆದಂತಾಗಿದೆ. ಹೈದರಾಬಾದ್‌ ಮೂಲದ ಸ್ಕೈರೂಟ್‌ ಏರೋಸ್ಪೇಸ್‌ ಕಂಪೆನಿ ಈ ರಾಕೆಟ್‌ ತಯಾರಿಸಿತ್ತು. ಇಸ್ರೋ ಸಹಾಯದೊಂದಿಗೆ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತು. ಇದು ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಜತೆಗೆ ಹೆಚ್ಚಿನ ಖಾಸಗಿ ಕಂಪೆನಿಗಳು ಈ ಸಾಹಸಕ್ಕೆ ಕೈಹಾಕುವಂತೆ ಪ್ರೇರೇಪಿಸಿದೆ. ಭಾರತದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ನಮ್ಮ ಬೆಂಗಳೂರು ಸ್ಪೇಸ್‌ ಸ್ಟಾರ್ಟ್‌ಅಪ್‌ಗಳು ತವರು ನೆಲೆಯಂತಾಗಿದೆ. ಈ ರೀತಿ ಬೆಂಗಳೂರನ್ನು ಕೇಂದ್ರ ಮಾಡಿಕೊಂಡಿರುವ ಕೆಲವು ಸ್ಪೇಸ್‌ ಸ್ಟಾರ್ಟ್‌ಅಪ್‌ಗಳು ಮಾಹಿತಿ ಇಲ್ಲಿದೆ.

Advertisement

ದೇವಾಸ್‌
ಸ್ಥಾಪನೆ ವರ್ಷ: 2004; ಹೂಡಿಕೆ: 132 ದಶಲಕ್ಷ ಡಾಲರ್‌
ಹೂಡಿಕೆದಾರರು: ಕೊಲಂಬಿಯಾ ಕ್ಯಾಪಿಟಲ್‌, ಡಾಯ್‌c ಟೆಲಿಕಾಮ್‌, ಗ್ಯಾರಿ ಎಂ ಪಾರ್ಸನ್ಸ್‌ ಮತ್ತು ಮೂವರು ಇತರ ಹೂಡಿಕೆದಾರರು.
ಸ್ಪೇಸ್‌ ಸ್ಟಾರ್ಟ್‌ಅಪ್‌ ಆಗಿರುವ ದೇವಾಸ್‌, ಉಪಗ್ರಹ ಸಂವಹನ ಸೇವೆಗಳನ್ನು ಒದಗಿಸುತ್ತದೆ. ಇದು ಐಪಿ-ಆಧಾರಿತ ಪ್ಲಾಟ್‌ಫಾರ್ಮ್ ಮೂಲಕ ಹ್ಯಾಂಡ್‌-ಹೆಲ್ಡ್‌ ಮೊಬೈಲ್‌ ಟರ್ಮಿನಲ್‌ಗ‌ಳಿಗೆ ಇಂಟರ್ನೆಟ್‌ ಆಧಾರಿತ ಮಲ್ಟಿಮೀಡಿಯಾ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತದೆ. ಸ್ಟ್ರೀಮಿಂಗ್‌ ವೀಡಿಯೋ, ಆಡಿಯೋ ಹಾಗೂ ಡೇಟಾ ಮತ್ತು ವೆಬ್‌ ಆ್ಯಕ್ಸಸ್‌, ಮಾಹಿತಿ ಮತ್ತು ಸಾಮಾಜಿಕ ಆ್ಯಪ್ಲಿಕೇಶನ್‌ಗಳ ಸೇವೆಯನ್ನು ಒದಗಿಸಲಿದೆ. ಇದರ ಉಪಗ್ರಹ ವ್ಯವಸ್ಥೆಯು ಎಸ್‌-ಬ್ಯಾಂಡ್‌ ಉಪಗ್ರಹಗಳು ಮತ್ತು ಗ್ಯಾಪ್‌ ಫಿಲ್ಲರ್‌ಗಳನ್ನು ಒಳಗೊಂಡಿದೆ.

ಪಿಕ್ಸೆಲ್‌
ಸ್ಥಾಪನೆ ವರ್ಷ: 2019; ಹೂಡಿಕೆ: 61 ದಶಲಕ್ಷ ಅಮೆರಿಕನ್‌ ಡಾಲರ್‌
ಹೂಡಿಕೆದಾರರು: ರ್ಯಾಡಿಕಲ್‌ ವೆಂಚರ್, ಸೆರಾಫಿಮ್‌, ಲೈಟ್‌ಸ್ಪೀಡ್‌ ವೆಂಚರ್ ಹಾಗೂ 20 ಇತರ ಹೂಡಿಕೆದಾರರು.
ಪಿಕ್ಸೆಲ್‌ ಬಾಹ್ಯಾಕಾಶ ಕಂಪೆನಿಯು ಭೂಮಿಯ ಉಪಗ್ರಹ ಆಧಾರಿತ ಚಿತ್ರಗಳನ್ನು ಒದಗಿಸುತ್ತದೆ. ಕಂಪೆನಿಯು ಕೃಷಿ, ತೈಲ, ಅನಿಲ ಮತ್ತು ಹವಾಮಾನ ಕುರಿತು ಮೇಲ್ವಿಚಾರಣೆ ಹಾಗೂ ನೈಜ-ಸಮಯದ ಒಳನೋಟಗಳನ್ನು ಒದಗಿಸಲು ಭೂಮಿಯ ಚಿತ್ರಣದ ಚಿಕ್ಕ ಉಪಗ್ರಹಗಳ ಸಮೂಹವನ್ನು ಅಭಿವೃದ್ಧಿಪಡಿ ಸುತ್ತಿದೆ. ಅದರ ನ್ಯಾನೊ ಉಪಗ್ರಹಗಳ ಸಮೂಹವು ಪ್ರತೀದಿನ ಭೂಮಿಯ ಚಿತ್ರಗಳನ್ನು ಒದಗಿಸುತ್ತದೆ.

ಬೆಲ್ಲಾಟ್ರಿಕ್ಸ್‌ ಏರೋಸ್ಪೇಸ್‌
ಸ್ಥಾಪನೆ ವರ್ಷ: 2015; ಹೂಡಿಕೆ: 11 ಮಿಲಿಯನ್‌ ಅಮೆರಿಕನ್‌ ಡಾಲರ್‌
ಹೂಡಿಕೆದಾರರು: ಬಿಎಎಸ್‌ಎಫ್ ವೆಂಚರ್‌ ಕ್ಯಾಪಿಟಲ್‌, ಇನೆ#$Éಕ್ಸರ್‌, ಸ್ಟಾರ್ಟ್‌ಅಪ್‌ಎಕ್ಸ್‌ಸೀಡ್‌ ವೆಂಚರ್ ಮತ್ತು 33 ಇತರ ಹೂಡಿಕೆದಾರರು.

ಇನ್‌-ಸ್ಪೇಸ್‌ ಪ್ರೊಪಲನ್‌ ಸಿಸ್ಟಮ್ಸ್‌ ಮತ್ತು ಆರ್ಬಿಟಲ್‌ ಲಾಂಚ್‌ ವೆಹಿಕಲ್‌ ಅಭಿವೃದ್ಧಿಯಲ್ಲಿ ಬೆಲ್ಲಾಟ್ರಿಕ್ಸ್‌ ಏರೋಸ್ಪೇಸ್‌ ನಿರತವಾಗಿದೆ. ಇದು ಇನ್‌-ಸ್ಪೇಸ್‌ ಪ್ರೊಪಲÒನ್‌ ಸಿಸ್ಟಮ್ಸ್‌ ಗಳಿಗೆ ಪೂರ್ಣ ಪರಿಹಾರ ಒದಗಿಸುತ್ತದೆ. ರಾಸಾಯನಿಕ ಮತ್ತು ವಿದ್ಯುತ್‌ ಪ್ರೊಪಲÒನ್‌ ತಂತ್ರಜ್ಞಾನ ಒದಗಿಸುತ್ತದೆ. ಜತೆಗೆ ಹೊಸ ಪೀಳಿಗೆಯ ಪ್ರೊಪೆಲ್ಲಂಟ್ಸ್‌ ಮತ್ತು ಉಡಾವಣ ವಾಹಕಗಳ ಪ್ರಮುಖ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಕಂಪೆನಿಯು ನಿರಂತರವಾಗಿ ತೊಡಗಿದೆ.

Advertisement

ಧ್ರುವ ಸ್ಪೇಸ್‌
ಸ್ಥಾಪನೆ ವರ್ಷ: 2012; ಹೂಡಿಕೆ: 7 ದಶಲಕ್ಷ ಅಮೆರಿಕನ್‌ ಡಾಲರ್‌. ಹೂಡಿಕೆದಾರರು: ಇಂಡಿಯನ್‌ ಏಂಜಲ್‌ ನೆಟ್‌ವರ್ಕ್‌ ಫ‌ಂಡ್‌, ಬ್ಲೂ ಅಶ್ವಾ ಕ್ಯಾಪಿಟಲ್‌, ಮುಂಬಯಿ ಏಂಜಲ್ಸ್‌ ಮತ್ತು 91 ಇತರ ಹೂಡಿಕೆದಾರರು.
ಸಣ್ಣ ಉಪಗ್ರಹಗಳಿಗೆ ಪೂರ್ಣ ಪ್ರಮಾಣದ ಸ್ಪೇಸ್‌ ಎಂಜಿನಿಯರಿಂಗ್‌ ಪರಿಹಾರಗಳು ಮತ್ತು ಆ್ಯಪ್ಲಿಕೇಶನ್‌-ಅಗ್ನಾಸ್ಟಿಕ್‌ ಸ್ಯಾಟ್‌ಲೈಟ್ ಪ್ಲಾಟ್‌ಫಾರ್ಮ್ ಗಳನ್ನು ಧ್ರುವ ಸ್ಪೇಸ್‌ ಒದಗಿಸುತ್ತದೆ. ಗ್ರೌಂಡ್‌ ಸ್ಟೇಶನ್‌ ಪರಿಹಾರಗಳು, ಉಪಗ್ರಹ ಉಡಾವಣೆ ಮತ್ತು ಅಭಿವೃದ್ಧಿ, ಜತೆಗೆ ಸಣ್ಣ ಉಪಗ್ರಹಗಳಿಗೆ ಬಾಹ್ಯಾಕಾಶ ದರ್ಜೆಯ ಸೌರ ಶ್ರೇಣಿಗಳನ್ನು ಕಂಪೆನಿ ಪೂರೈಸಲಿದೆ.

ಟೀಮ್‌ ಇಂಡಸ್‌
ಸ್ಥಾಪನೆ ವರ್ಷ: 2010; ಹೂಡಿಕೆ: 18 ದಶಲಕ್ಷ ಅಮೆರಿಕನ್‌ ಡಾಲರ್‌. ಹೂಡಿಕೆದಾರರು: ನಾರಾಯಣ್‌ ಕೆ. ಶೇಷಾದ್ರಿ, ಉಮೇಶ್‌ ಮಹೇಶ್ವರಿ, ಗೋಪಾಲ್‌ ಶ್ರೀನಿವಾಸನ್‌ ಮತ್ತು 61 ಇತರ ಹೂಡಿಕೆದಾರರು.

ಬಾಹ್ಯಾಕಾಶ ರೋವರ್‌ಗಳ ಅಭಿವೃದ್ಧಿಯಲ್ಲಿ ಟೀಮ್‌ ಇಂಡಸ್‌ ನಿರತವಾಗಿದೆ. ಕಂಪೆನಿಗೆ ಆ್ಯಸೆಲ್‌, ಯಾಹೂ ಇಂಡಿಯಾ, ಮೈಕ್ರೋಸಾಫ್ಟ್, ಏಂಜಲ್‌ ಪ್ರೈಮ್‌ ಸಹಿ ತ ಅನೇಕ ಹೂಡಿಕೆದಾರರು 500 ಸಾವಿರ ಡಾಲರ್‌ ಮೂಲ ಹೂಡಿಕೆ ಮಾಡಿದ್ದಾರೆ. ತಮ್ಮ ಲ್ಯಾಂಡಿಂಗ್‌ ಸಿಸ್ಟಮ್‌ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಲೂನಾರ್‌ ಎಕ್ಸ್‌ ಯೋಜನೆಯಿಂದ ಟೀಮ್‌ ಇಂಡಸ್‌ಗೆ ಒಂದು ಮಿಲಿಯನ್‌ ಡಾಲರ್‌ ಬಹುಮಾನ ನೀಡಲಾಯಿತು. 2016ರ ಡಿಸೆಂಬರ್‌ನಲ್ಲಿ, ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಉದ್ದೇಶಕ್ಕಾಗಿ ಇಸ್ರೋದೊಂದಿಗೆ ಕಂಪೆನಿಯು ವಾಣಿಜ್ಯ ಉಡಾವಣ ಒಪ್ಪಂದ ಮಾಡಿಕೊಂಡಿತು.

ಆದ್ಯಾ ಏರೋಸ್ಪೇಸ್‌
ಸ್ಥಾಪನೆ ವರ್ಷ: 2016; ಹೂಡಿಕೆ: 5 ದಶಲಕ್ಷ ಅಮೆರಿಕನ್‌ ಡಾಲರ್‌
ಹೂಡಿಕೆದಾರರು: ಗಣೇಶ್‌ ಸೆಲ್ವರಾಜ್‌, ರಂಜಿತ್‌ ಗೆರಾರ್ಡ್‌, ಮೋಹಿತ್‌ ಕುಮಾರ್‌ ಶಂಕ್ಲಾ ಮತ್ತು 58 ಇತರ ಹೂಡಿಕೆದಾರರು.

ಆದ್ಯಾ ಏರೋಸ್ಪೇಸ್‌ ಬಾಹ್ಯಾಕಾಶ ವಲಯಕ್ಕಾಗಿ ಎಲೆಕ್ಟ್ರಾ ನಿಕ್‌ ಮೆಕ್ಯಾನಿಕಲ್‌ ಆಕುcಯೇಟರ್‌ಗಳನ್ನು ತಯಾರಿಸುತ್ತದೆ ಮತ್ತು ಅಭಿವೃದ್ಧಿಪಡಿಸುತ್ತದೆ. ಜತೆಗೆ ಕ್ಷಿಪಣಿಗಳು ಮತ್ತು ಉಡಾವಣ ವಾಹನಗಳಿಗೆ ಕಂಟ್ರೋಲ್‌ ಆಕುcಯೇಶನ್‌ ಸಿಸ್ಟಮ್‌ ಮತ್ತು ಎಲೆಕ್ಟ್ರಾನಿಕ್‌ ಆಪ್ಟಿಕ್ಸ್‌ ಸಿಸ್ಟಮ್‌ಗಳನ್ನು ಕಂಪೆನಿ ಒದಗಿಸುತ್ತದೆ.

ಆ್ಯಸ್ಟ್ರೋಮ್‌
ಸ್ಥಾಪನೆ ವರ್ಷ: 2015; ಹೂಡಿಕೆ: 5 ದಶಲಕ್ಷ ಅಮೆರಿಕನ್‌ ಡಾಲರ್‌ಹೂಡಿಕೆದಾರರು: ಇಂಡಿಯನ್‌ ಏಂಜಲ್‌ ನೆಟ್‌ವರ್ಕ್‌ ಫ‌ಂಡ್‌, ಯುರೇನಿಯಾ ವೆಂಚರ್, ಇಂಪ್ಯಾಕ್ಟ್ ಕಲೆಕ್ಟಿವ್‌ ಮತ್ತು 55 ಇತರ ಹೂಡಿಕೆದಾರರು.
ಆ್ಯಸ್ಟ್ರೋಮ್‌ ಕಂಪೆನಿಯು ಉಪಗ್ರಹ ಆಧಾರಿತ ಸೇವೆಗಳನ್ನು ಒದಗಿಸುತ್ತದೆ. ಇದು ಭೂಮಿಯ ಕೆಳ ಕಕ್ಷೆಯಲ್ಲಿ ಹೆಚ್ಚಿನ ಥ್ರೋಪುಟ್‌ ಉಪಗ್ರಹಗಳ ಸಮೂಹವನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಇಂಟರ್‌ನೆಟ್‌ ಆಕ್ಸಸ್‌ಗಾಗಿ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ಕಂಪೆನಿ ಅಭಿವೃದ್ಧಿಪಡಿಸುತ್ತದೆ.

ಆಸ್ಟ್ರೋಗೇಟ್‌ ಲ್ಯಾಬ್ಸ್
ಸ್ಥಾಪನೆ ವರ್ಷ: 2017; ಹೂಡಿಕೆ: 6.28 ಲಕ್ಷ ಅಮೆರಿಕನ್‌ ಡಾಲರ್‌
ಹೂಡಿಕೆದಾರರು: ಸ್ಪೇಶಿಯಲ್‌ ಇನ್‌ವೆಸ್ಟ್‌, ಅನಿಕಟ್‌ ಕ್ಯಾಪಿಟಲ್‌, ಸೂಪರ್‌ವ್ಯಾಲ್ಯು ಮತ್ತು 12 ಇತರ ಹೂಡಿಕೆದಾರರು.

ಆಸ್ಟ್ರೋಗೇಟ್‌ ಲ್ಯಾಬ್ಸ್ ಸ್ಪೇಸ್‌ ಆ್ಯಪ್ಲಿಕೇಶನ್‌ಗಳಿಗೆ ಆಪ್ಟಿಕಲ್‌ ಕಮ್ಯೂನಿಕೇಶನ್‌ ಸಿಸ್ಟಮ್‌ಗಳನ್ನು ತಯಾರಿಸುತ್ತದೆ. ಇದು ಆಪ್ಟಿಕಲ್‌ ಕಮ್ಯೂನಿಕೇಶನ್‌ ಟರ್ಮಿನಲ್‌ಗ‌ಳು, ಗ್ರೌಂಡ್‌ ರಿಸೀವರ್‌ ಸ್ಟೇಷನ್‌ಗಳು, ಸ್ಪೇಸ್‌ ರಿಲೇ ಸಿಸ್ಟಮ್‌ಗಳು ಮತ್ತು ಡೇಟಾ ರಿಟ್ರೀವಲ್‌ಗೆ ಸಂಬಂಧಿಸಿದ ಸಾಫ್ಟ್ವೇರ್‌ ಸಿಸ್ಟಮ್‌ಗಳನ್ನು ಕಂಪೆನಿ ಅಭಿವೃದ್ಧಿಪಡಿಸುತ್ತದೆ.

ಅನಿಯರಾ ಕಮ್ಯುನಿಕೇಷನ್ಸ್‌
ಸ್ಥಾಪನೆ ವರ್ಷ: 2000; ಹೂಡಿಕೆ: 41 ಲಕ್ಷ ರೂ. (ಮೂಲ ಹೂಡಿಕೆ)
ಹೂಡಿಕೆದಾರರು: ಡಿ.ಎಸ್‌.ಗೋವಿಂದರಾಜನ್‌, ಮಧುಸ್ಮಿತ ದಾಸ್‌, ರಘುನಾಥ್‌ ದಾಸ್‌ ಮತ್ತು ಇತರ ಹೂಡಿಕೆದಾರರು.
ಉಪಗ್ರಹ ಸಂವಹನಕ್ಕಾಗಿ ಸೇವೆಗಳು ಮತ್ತು ಸಲಹಾ ಪರಿಹಾರಗಳನ್ನು ಅನಿಯರಾ ಕಮ್ಯುನಿಕೇಶನ್ಸ್‌ ಒದಗಿಸುತ್ತದೆ. ಕಂಪೆನಿಯು ಸ್ಯಾಟಲೈಟ್‌ ಕೆಪಾಸಿಟಿ ಲೀಸಿಂಗ್‌, ಟೆಲಿಪೋರ್ಟ್‌ ಅಪ್‌ಲಿಂಕ್‌, ವಿಸ್ಯಾಟ್‌ ಸಂಪರ್ಕ, ಇಂಟರ್ನೆಟ್‌ ನೆಟ್‌ವರ್ಕ್‌, ರಿಮೋಟ್‌ ಸೆನ್ಸಿಂಗ್‌ ಇತ್ಯಾದಿ ಸೇವೆಗಳನ್ನು ಒದಗಿಸುತ್ತದೆ. ಜತೆಗೆ ನೆಕ್ಸ್‌ಸ್ಟಾರ್‌ ಹೆಸರಿನ ಸಣ್ಣ ಜಿಯೊ ಉಪಗ್ರಹಗಳ ಸಮೂಹವನ್ನು ಕಂಪೆನಿ ಅಭಿವೃದ್ಧಿಪಡಿಸುತ್ತಿದೆ.

-ಸಂತೋಷ್‌ ಪಿ.ಯು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next