Advertisement

Metro City: ಬೆಂಗಳೂರಿಗೆ ಮೆಟ್ರೋ ನಗರ ಸ್ಥಾನ‌ವಿಲ್ಲ: ಕೇಂದ್ರ

11:04 PM Aug 07, 2024 | Team Udayavani |

ನವದೆಹಲಿ: ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪವನ್ನೂ ನಾವು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಐಟಿ ಸಿಟಿಯ ಬಹುದಿನಗಳ ಬೇಡಿಕೆಗೆ ಮತ್ತೂಮ್ಮೆ ಹಿನ್ನಡೆಯಾದಂತಾಗಿದೆ.

Advertisement

ಮೆಟ್ರೋ ಸ್ಥಾನಮಾನ ಪಡೆದಿರುವ ನಗರಗಳಿಗೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ತೆರಿಗೆವಿನಾಯತಿ ಸೇರಿ ಹಲವು ಅನುಕೂಲಗಳು ಲಭಿಸುತ್ತವೆ. ಆ ನಗರದ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ.50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯ್ತಿ ಎಂದು ಕ್ಲೇಮ್‌ ಮಾಡಬಹುದು. ಮೆಟ್ರೋ ಮಾನ್ಯತೆ ಇಲ್ಲದ ನಗರಗಳ ನಿವಾಸಿಗಳು ತಮ್ಮ ಮೂಲವೇತನದ ಶೇ.40ರಷ್ಟನ್ನು ಮಾತ್ರ ಎಚ್‌ಆರ್‌ಎ ತೆರಿಗೆ ವಿನಾಯ್ತಿ ಎಂದು ಕ್ಲೇಮ್‌ ಮಾಡಲು ಸಾಧ್ಯವಾಗುತ್ತದೆ.

ಬೆಂಗಳೂರಲ್ಲಿ ಮನೆಗಳ ಬಾಡಿಗೆ ದರಗಳೂ ಹೆಚ್ಚಿರುವುದರಿಂದ ಎಚ್‌ಆರ್‌ಎ ವಿನಾಯ್ತಿ ಪಡೆದುಕೊಳ್ಳಲು ನಗರಿಗೆ ಮೆಟ್ರೋ ಸ್ಥಾನ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ, ಕೇಂದ್ರ ಇದನ್ನು ನಿರಾಕರಿಸಿದೆ. ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು, ವಿನಾಯಿತಿ ಹಾಗೂ ಕಡಿತಗಳಿಂದ ದೂರ ಸರಿವುದು ಸರ್ಕಾರದ ಘೋಷಿತ ನೀತಿ. ಹಾಗಾಗಿ ಹೆಚ್ಚಿನ ನಗರಗಳಿಗೆ ಮೆಟ್ರೋ ಮಾನ್ಯತೆ ನೀಡಲಾಗಲ್ಲ ಎಂದು ಸಂಸತ್ತಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next