Advertisement

ಬೆಂಗಳೂರು ಉತ್ಸವಕ್ಕೆ ಚಾಲನೆ

01:49 PM Aug 07, 2021 | Team Udayavani |

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕರಕುಶಲಕರ್ಮಿಗಳು ಸರಿಯಾದ ಮಾರುಕಟ್ಟೆ ಇಲ್ಲದೆ
ತೊಂದರೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ಬೆಂಗಳೂರು ಉತ್ಸವದ ಮೂಲಕ ಮಾರುಕಟ್ಟೆ
ವೇದಿಕೆ ಸೃಷ್ಟಿಸಿದ್ದು, ನಟಿ ಭೂಮಿ ಶೆಟ್ಟಿ ಚಾಲನೆ ನೀಡಿದರು.

Advertisement

ಕೈಮಗ್ಗದಿಂದ ಸಿದ್ಧಪಡಿಸಿರುವ ಉಡುಪಿ, ಮಣ್ಣಿನ ಮಡಿಕೆ, ಮಗ್‌, ವಿವಿಧ ಮಾದರಿಯ ಪುರಾತನ ಗಡಿಯಾರಗಳು, ದುರ್ಬೀನ್‌, ದೇವರ ವಿಗ್ರಹ, ವಿವಿಧ ಮಾದರಿಯ ಕರಕುಶಲ ವಸ್ತುಗಳ ಜತೆಗೆಮನೆ ತಿಂಡಿಗಳು,ಕಲಾಕೃತಿಗಳು, ಚದುರಂಗದಾಟದ ವಿವಿಧ ಮಾದರಿ ಬೋಡ್‌ ìಗಳು, ಅಲಂಕಾರಿಕ ವಸ್ತುಗಳು ಉತ್ಸವದಲ್ಲಿ ಮಾರಾಟ ಹಾಗೂ ಪ್ರದರ್ಶನಕ್ಕೆ ಲಭ್ಯವಿದೆ.

ಸುಮಾರು 50ಕ್ಕೂ ಅಧಿಕ ಮಳಿಗೆಗಳಿದ್ದು, ಉತ್ಸವಕ್ಕೆ ಆಗಮಿಸುವವರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಬೆಳಗ್ಗೆ 11ರಿಂದ ಸಂಜೆ 7ರವರೆಗೂ ನಡೆಯಲಿದ್ದು, ಆ.15ಕ್ಕೆ ಉತ್ಸವ ಕೊನೆಗೊಳ್ಳಲಿದೆ.

ನಟಿ ಭೂಮಿ ಶೆಟ್ಟಿ ಮಾತನಾಡಿ, ಕೋವಿಡ್‌ ಕಾಲದಲ್ಲಿ ಎಲ್ಲರು ಸಂಕಷ್ಟ ಅನುಭವಿಸಿದ್ದಾರೆ. ಅದರಲ್ಲೂ ಕಲಾವಿದರು, ಕುಲಶಕರ್ಮಿಗಳು
ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಕರಕುಶಲ ಕರ್ಮಿಗಳು ತಾವು ಸಿದ್ಧಪಡಿಸಿದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತೊಂದರೆ
ಅನುಭವಿಸಿದ್ದಾರೆ. ಈ ಉತ್ಸವದ ಮೂಲಕ ಅವರಿಗೆ ಮಾರುಕಟ್ಟೆ ವ್ಯವಸ್ಥೆ ಸಿಕ್ಕಿದೆ. ದೇಶದ ವಿವಿಧ ಭಾಗದಿಂದ ಬಂದಿರುವ ಅವರಿಗೆ ಸೂಕ್ತ
ಸ್ಪಂದನೆ ಸಿಗುವಂತಾಗಲಿ ಎಂದು ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಎಸ್‌
ಅಪ್ಪಾಜಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next