Advertisement
ಬಸವನಪುರ ಮುಖ್ಯರಸ್ತೆಯ ನಿಸರ್ಗ ಲೇಔಟ್ ನಿವಾಸಿ ದಿನೇಶ್ (40) ಬಂಧಿತ.
Related Articles
Advertisement
ಆರೋಪಿ ದಿನೇಶ್ ಈ ಹಿಂದೆ ನೌಕಾಪಡೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಮೋಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ಸಂದರ್ಭದಲ್ಲಿ ಕೆಲಸ ತೊರೆದು ಬೆಂಗಳೂರಿಗೆ ಬಂದಿದ್ದು ನಿಸರ್ಗ ಲೇಔಟ್‌ನಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜತೆಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಯಾಗಿ ಬಸವನಪುರ ಬೂತ್‌ನ ಬಿಜೆಪಿ ಘಟಕದ ಸಕ್ರಿಯ ಕಾರ್ಯಕರ್ತ ಆಗಿದ್ದ. ಹೀಗಾಗಿ ಸುಶೀಲಮ್ಮ ಮತ್ತು ದಿನೇಶ್ ನಡುವೆ ಪರಿಚಯವಿತ್ತು.
ಅಲ್ಲದೆ ಸರ್ಕಾರದ ಕೆಲ ಯೋಜನೆಗಳನ್ನು ವೃದ್ಧೆಗೆ ಮಾಡಿಸಿಕೊಟ್ಟಿದ್ದರಿಂದ ಪದೇಪದೆ ದಿನೇಶ್ ಮನೆಗೆ ಸುಶೀಲಮ್ಮ ಹೋಗುತ್ತಿದ್ದು ತನ್ನ ಕುಟುಂಬ ಮತ್ತು ಆಸ್ತಿ ಮಾರಾಟ ವಿಚಾರ ಪ್ರಸ್ತಾಪಿಸಿದ್ದರು. ಇದೇ ಹಣದಲ್ಲಿ ಮನೆ ಭೋಗ್ಯಕ್ಕೆ ಹಾಕಿಸಿಕೊಂಡಿದ್ದೇನೆ. ಒಂದಷ್ಟು ಚಿನ್ನಾಭರಣ ಮಾಡಿಸಿಕೊಳ್ಳಬೇಕಿದೆ ಎಂದು ಆರೋಪಿ ಬಳಿ ಹೇಳಿಕೊಂಡಿದ್ದರು. ಈ ನಡುವೆ ದಿನೇಶ್ 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ವೃದ್ಧೆಯನ್ನು ಕೊಲೆಗೈದು ಆಕೆಯ ಚಿನ್ನಾಭರಣ ದೋಚಿ ಮಾರಿದರೆ ಸಾಲ ತೀರಿಸಬಹುದು ಎಂದು ಪ್ಲ್ರಾನ್ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಹೋಗಲು ಕರೆಸಿಕೊಂಡು ಹತ್ಯೆ:
ಫೆ.24ರಂದು ಪತ್ನಿ ಮತ್ತು ಮಕ್ಕಳನ್ನು ಸಂಬಂಧಿಕರ ಮನೆಯ ಪೂಜೆ ಕಾರ್ಯಕ್ಕೆ ಊರಿಗೆ ಕಳುಹಿಸಿದ್ದ ದಿನೇಶ್, ಅದೇ ದಿನ ಮಧ್ಯಾಹ್ನ ಸುಶೀಲಮ್ಮಗೆ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ ಎಂದು ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ವೃದ್ಧೆ, ಮೈ ತುಂಬ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಧರಿಸಿದ್ದರು. ಅದನ್ನು ಕಂಡ ಆರೋಪಿ ಎರಡು ಗಂಟೆಗಳ ಕಾಲ ಯೋಚಿಸಿ, ಬಳಿಕ ಸ್ಟೋರ್ ರೂಮ್‌ನಲ್ಲಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದನು.
ಪೊಲೀಸರ ಜತೆ ಇದ್ದು ಡೌ ಮಾಡಿದ್ದ!
ಭಾನುವಾರ ಸಂಜೆ ಡ್ರಮ್‌ನಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಈ ವೇಳೆ ಆರೋಪಿ ಕೂಡ ಜತೆಯಲ್ಲಿದ್ದು ಪೊಲೀಸರಿಗೆ ಮೃತದೇಹದ ಬಳಿ ಹೋಗುವಾಗ ಮಾಸ್ಕ್ ಪೂರೈಕೆ ಮಾಡಿದ್ದ. ಅಲ್ಲದೆ ಸುಶೀಲಮ್ಮ ಅವರು ಮಕ್ಕಳು, ಮೊಮ್ಮಕ್ಕಳ ವಿಚಾರಣೆ ವೇಳೆ ಮೊಮ್ಮಗಳು, ಎರಡು ದಿನಗಳ ಹಿಂದೆ ದಿನೇಶ್ ಜತೆ ಅಜ್ಜಿ ಮಾತನಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಳು. ಮತ್ತೂಂದೆಡೆ ಡ್ರಮ್ ಪತ್ತೆಯಾದ ಜಾಗದ ಪಕ್ಕದಲ್ಲಿರುವ ಮನೆ ಮಾಲೀಕ ಅಳವ ಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿ ಡ್ರಮ್ ತಂದು ಇಟ್ಟು ಹೋಗುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿತ್ತು. ಇದರೊಂದಿಗೆ ಸ್ಥಳಕ್ಕೆ ಬಂದಿದ್ದ ಶ್ವಾನ ಕೂಡ ರಕ್ತದ ಕಲೆಯನ್ನು ಆಧರಿಸಿ ಆರೋಪಿ ಮನೆ ಬಳಿ ಹೋಗಿ ನಿಂತಿತ್ತು. ಈ ಎಲ್ಲ ಸಾûಾÂಧಾರಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತ ಕೂಡ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ಹಂತಕನಿಗೆ ರೋಲ್ಡ್ ಗೋಲ್ಡ್ ಶಾಕ್
ಕೊಲೆ ಬಳಿಕ ವೃದ್ಧೆಯ ಮೈ ಮೇಲಿದ್ದ ಚಿನ್ನಾಭರಣವನ್ನು ದೋಚಿ ಅಡಮಾನ ಇಡಲು ಹೋದಾಗ, ಕಿವಿಯೊಲೆ ಹೊರತುಪಡಿಸಿ ಇತರ ಎಲ್ಲ ಆಭರಣಗಳು ರೋಲ್ಡ್ ಗೋಲ್ಡ್ ಎಂಬುದು ಗೊತ್ತಾಗಿದೆ. ಬಳಿಕ ಕಿವಿಯೊಲೆಯನ್ನೇ ಅಡ ಮಾನ ಇಟ್ಟ ದಿನೇಶ್, ಅದೇ ಹಣ ದಿಂದ ಮನೆಗೆ ಬರುವಾಗ ಎರಡು ಸಣ್ಣ ಡ್ರಮ್ ತಂದಿದ್ದನು. ಬಳಿಕ ಫೆ.25 ನಸುಕಿನ 3 ಗಂಟೆ ಸುಮಾರಿಗೆ ವೃದ್ಧೆಯ ದೇಹವನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ಒಂದು ಡ್ರಮ್‌ನಲ್ಲಿ ತುಂಬಿದ್ದಾನೆ. ಬಳಿಕ ಮುಂಜಾನೆ 3.20ರ ಸುಮಾರಿಗೆ ಮನೆ ಸಮೀಪದ ಬೀದಿದೀಪ ಆರಿಸಿ, ಮತ್ತೆ ಮನೆಗೆ ಹೋಗಿ ಡ್ರಮ್ ತಂದು ತನ್ನ ಮನೆ ಸಮೀಪದ ಪಾಳು ಬಿದ್ದ ಮನೆಯ ಪಕ್ಕದ ಓಣಿಯಲ್ಲಿ ಇಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.