Advertisement

ಬೆಂಗಳೂರು:ಶೌಚಾಲಯದಲ್ಲಿ ಕೂಡಿ ಹಾಕಿ 6 ರ ಬಾಲಕಿಯ ರೇಪ್‌ 

10:05 AM Sep 13, 2017 | |

ಬೆಂಗಳೂರು: ನರಗದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಮುಂದುವರಿದಿದ್ದು ಅಶೋಕನಗರದ ಸಾರ್ವಜನಿಕ ಶೌಚಾಲಯಲ್ಲಿ 6 ವರ್ಷದ ಬಾಲಕಿಯ ಮೇಲೆ ಶೌಚಾಲಯ ನಿರ್ವಾಹಕ ಹೇಯ ಕೃತ್ಯ ಎಸಗಿದ ಘಟನೆ ಮಂಗಳವಾರ ಸಂಜೆ ನಡೆದಿದೆ. 

Advertisement

ಬಾಲಕಿ ಶೌಚಾಲಯಕ್ಕೆ ತೆರಳಿದ ವೇಳೆ ಉತ್ತರ ಭಾರತ ಮೂಲದ ನಿರ್ವಾಹಕ ಬಿಪಿನ್‌ ರಾಜ್‌ (24)ಎಂಬಾತ ಹೇಯ ಕೃತ್ಯ ಎಸಗಿ ಕೂಡಿ ಹಾಕಿದ್ದಾನೆ. ಬಾಲಕಿಯನ್ನು ಹುಡುಕಿಕೊಂಡು ಬಂದಾಗ ಕೂಡಿ ಹಾಕಿರುವುದು ಕಂಡು ಕಂಗಾಲಾಗಿದ್ದಾರೆ. ಆಕ್ರೋಶಗೊಂಡು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಸ್ಥಳೀಯರು ಜಮಾಯಿಸಿ ಆರೋಪಿ ಬಿಪಿನ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

ಸ್ಥಳಕ್ಕಾಗಮಿಸಿದ ಪೊಲೀಸರು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು  ಆರೋಪಿ ಬಿಪಿನ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಬಾಲಕಿ ನನ್ನ ಕೊಠಡಿಗೆ ಬಂದ ಕಳ್ಳತನ ಮಾಡಲು ಮುಂದಾಗಿದ್ದಳು ಹೀಗಾಗಿ ನಾನು ಕೂಡಿ ಹಾಕಿದ್ದೆ  ಎಂದು ಬಿಪಿನ್‌ ಪೊಲೀಸರ ಬಳಿ ಹೇಳಿಕೊಂಡಿದ್ದು, ಆದರೆ ಹೇಯ ಕೃತ್ಯವನ್ನು ಬಾಲಕಿ ಪೊಲೀಸರ ಬಳಿ ವಿವರಿಸಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next