– ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಫೆ.10 ರಂದು ತೆರೆಕಾಣುತ್ತಿದೆ. ಜಾಕೀರ್ ಹುಸೇನ್ ಕರೀಂಸಾಬ್ ಈ ಸಿನಿಮಾದ ನಿರ್ಮಾಪಕರು.
ನಿರ್ದೇಶಕ ಕ್ರಾಂತಿ ಚೈತನ್ಯ ಅವರಿಗೆ ಇದು ಮೊದಲ ಚಿತ್ರ. ಮಾತಿಗಿಳಿದ ಅವರು ಹೇಳಿದ್ದಿಷ್ಟು. “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ. ಜಗತ್ತಲ್ಲಿ ಪ್ರೀತಿ, ನಂಬಿಕೆ, ವ್ಯಾಮೋಹ, ಮೋಸ, ದ್ವೇಷ, ಅಸೂಯೆ, ಅಪರಾಧ ಹೀಗೆ ಎಲ್ಲವೂ ನಡೆಯುತ್ತಿದೆ. ಇದೂ ಕೂಡ ಒಂದು ಕಿಡ್ನಾéಪ್ ಕಥೆ. ಯಾಕೆ ಕಿಡ್ನಾéಪ್ ಆಗುತ್ತೆ, ಕಿಡ್ನಾéಪ್ ಮಾಡೋರು ಯಾರು, ಆಗೋರು ಯಾರು ಎಂಬುದೇ ಸಸ್ಪೆನ್ಸ್. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ದುಬೈನಲ್ಲಿ ಹಾಡೊಂದರ ಚಿತ್ರೀಕರಣ ಮಾಡಿದರೆ ಚಿತ್ರ ಮುಗಿಯಲಿದೆ’ ಎಂದು ವಿವರ ಕೊಟ್ಟರು ನಿರ್ದೇಶಕ ಕ್ರಾಂತಿ ಚೈತನ್ಯ. “ಬೆಂಗಳೂರು 69′ ಮೂಲಕ ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೇನೆ. ಇದೊಂದು ಇಂಟರ್‌ನ್ಯಾಷನಲ್ ಕಾನ್ಸೆಪ್ಟ್ ಹೊಂದಿದೆ. ಕನ್ನಡಿಗರಿಗೆ ಈ ಚಿತ್ರ ಖಂಡಿತ ರುಚಿಸಲಿದೆ’ ಎಂಬುದು ತಂಡದ ಮಾತು.
ನಾಯಕ ಪವನ್ ಶೆಟ್ಟಿ ಅವರು ಬಾಡಿ ಬಿಲ್ಡ್ ಮೂಲಕ ಈಗಾಗಲೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಹೇಳಿಕೊಂಡ ಪವನ್ ಶೆಟ್ಟಿ, “ಇಲ್ಲೊಂದು ವಿಶೇಷ ಕಥೆ ಇದೆ. ಪಾತ್ರಕ್ಕೂ ಅಷ್ಟೇ ಆದ್ಯತೆ ನೀಡಲಾಗಿದೆ. ಸಿನಿಮಾ ನೋಡುವ ಜನರಿಗೆ ಖಂಡಿತ ಖುಷಿಯಾಗುತ್ತೆ. ನಾನಿಲ್ಲಿ ಒಂದು ರೀತಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ಟೀಮ್ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ’ ಎಂದರು ಪವನ್.
ಚಿತ್ರದಲ್ಲಿ ತೆಲುಗು ನಟ ಷಫಿ, ಅನಿತಾ ಭಟ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ವಿಕ್ರಂ ಚಂದನಾ ದಂಪತಿ ಸಂಗೀತ ನೀಡಿದ್ದು, ಚಿತ್ರದಲ್ಲಿ ಎರಡು ಹಾಡುಗಳಿವೆ.