Advertisement

‘ಬಂದಿಷ್‌ ಬ್ಯಾಂಡಿಟ್ಸ್’ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

09:33 PM Apr 23, 2021 | Team Udayavani |

ಮುಂಬೈ: ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ಜನಪ್ರಿಯ ನಟ ಅಮಿತ್‌ ಮಿಸ್ತ್ರಿ (47) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಅಂಧೇರಿಯ ನಿವಾಸದಲ್ಲಿ ತಾಯಿಯ ಜತೆಗೆ ಇದ್ದ ವೇಳೆ ಹೃದಯಾಘಾತವಾಗಿದೆ. ಅವರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಎಂದಿನಂತೆಯೇ ಎದ್ದು ಬೆಳಗ್ಗಿನ ಉಪಾಹಾರ ಸೇವಿಸಿದ್ದರು ಎಂದು ಅವರ ಮ್ಯಾನೇಜರ್‌ ಮಹರ್ಷಿ ದೇಸಾಯಿ ತಿಳಿಸಿದ್ದಾರೆ.

Advertisement

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ “ಬಂದಿಷ್‌ ಬ್ಯಾಂಡಿಟ್ಸ್‌’ ವೆಬ್‌ ಸೀರಿಸ್‌ನಲ್ಲಿ ಅವರ ನಟನೆಗೆ ಮೆಚ್ಚುಗೆ ವ್ಯಕವಾಗಿತ್ತು. ಇದರ ಜತೆಗೆ “ಶೋರ್‌ ಇನ್‌ ದ ಸಿಟಿ’, “ಬೇ ಯಾರ್‌’ ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರರಂಗದ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಡೀಮ್ಡ್ ಫಾರೆಸ್ಟ್‌; ಸ್ಥಳ ಪರಿಶೀಲಿಸಿ ವರದಿ ನೀಡಲು ಸಚಿವ ಲಿಂಬಾವಳಿ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next