Advertisement

ಬಂಡೀಪುರ ರಕ್ಷಣೆಗೆ ತಂತ್ರಜ್ಞಾನ : ಅರಣ್ಯಕಾಯಲು ಪಾಲಕರಿಗೆ ಫೈರ್‌ ಅಲರ್ಟ್‌ ಸಾಥ್‌

10:20 AM Mar 17, 2020 | sudhir |

ಬೇಸಗೆಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಳ್ಗಿಚ್ಚಿನ ಆತಂಕಗಳು ಆರಂಭವಾಗುತ್ತವೆ. ಕಳೆದ ವರ್ಷ ಭಾರೀ ಬೆಂಕಿಗೆ ಬಂಡೀಪುರ ಅರಣ್ಯ ಬೆಂದು ಹೋಗಿತ್ತು. ಈ ವಿದ್ಯಮಾನಗಳಿಗೆ ಕೆಲವು ವರ್ಷಗಳಿಂದ ಬಂಡೀ ಪುರ ಸಾಕ್ಷಿಯಾಗುತ್ತಲೇ ಬಂದಿದೆ. ಆದರೆ ಇನ್ನು ಅಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿ ಕೊಳ್ಳಲು ಇಲಾಖೆ ಮುಂದಾಗಿದೆ.

Advertisement

ಈ ಬಾರಿ ಪ್ರಯೋಗ
ಈ ಸಲ ಉಪಗ್ರಹ ಆಧಾರಿತ ಫೈರ್‌ ಅಲರ್ಟ್‌ ಅನ್ನು ಹೊಸದಾಗಿ ಪ್ರಯೋಗಿಸಲಾಗುತ್ತಿದೆ. ಇದು ಅರಣ್ಯದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೂ ಕೂಡಲೇ ಎಚ್ಚರಿಸುವ ವ್ಯವಸ್ಥೆಯಾಗಿದೆ. ಇದರಿಂದ ಸಂಭವನೀಯ ಭೀಕರ ಅನಾಹುತ ತಪ್ಪಲಿದೆ.

30 ನಿಮಿಷಕ್ಕೊಮ್ಮೆ ಅಪ್‌ಡೇಟ್‌
ಪ್ರತಿ ಮೂವತ್ತು ನಿಮಿಷಕ್ಕೆ ಒಂದು ಸಲ ಎಸ್‌ಎಂಎಸ್‌ ಮೂಲಕ ಆಯಾ ಅಧಿಕಾರಿಗಳಿಗೆ ಸಂದೇಶ ರವಾನೆ ಮಾಡುತ್ತದೆ. ಇದರಿಂದ ಅರಣ್ಯದ ಪರಿಸ್ಥಿತಿಯ ಬಗೆಗಿನ ಮಾಹಿತಿ ಅಧಿಕಾರಿಗಳಿಗೆ ತಿಳಿಯುತ್ತಿರುತ್ತದೆ.

ಸಂದೇಶ ರವಾನೆ
ಅರಣ್ಯದ ಯಾವುದೇ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ತತ್‌ಕ್ಷಣ ಆಯಾ ವ್ಯಾಪ್ತಿಯ ಸಿಎಫ್, ಎಸಿಎಫ್, ಆರ್‌ಎಫ್ ಮೊದಲಾದ ಅಧಿಕಾರಿಗಳ ದೂರವಾಣಿಗೆ ಸಂದೇಶ ಬರುತ್ತದೆ. ಕೂಡಲೇ ಸ್ಥಳಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ನೀಡಬೇಕಾಗುತ್ತದೆ. ಅರಣ್ಯ ಇಲಾಖೆಯ ಸಿಬಂದಿಯ ತಂಡ ಜನವರಿಯಿಂದ ಮೇ.31ರ ತನಕ ಕಾವಲು ಇದೆ. ಎತ್ತರದ ಪ್ರದೇಶದಲ್ಲಿ ಫೈರ್‌ ವಾಚರ್‌ಗಳನ್ನು, ಅಲ್ಲಲ್ಲಿ ಫೈರ್‌ ಬೀಟರ್‌ಗಳನ್ನು ನಿಯೋಜಿಸಲಾಗಿದೆ.

ಎಚ್ಚರಿಕೆ ಘಂಟೆ
ಕಳೆದ ವರ್ಷ ಸಾವಿರಾರು ಎಕರೆ ಪ್ರದೇಶದ ಕಾಡು ಹಾಗೂ ಜೀವರಾಶಿಗಳು ಬೆಂದು ಹೋಗಿದ್ದವು. ಆ ಭೀಕರ ಪರಿಸ್ಥಿತಿ ಮತ್ತೆ ಮರುಕಳಿಸಬಾರದು ಎಂಬ ಕಾರಣಕ್ಕೆ ಮತ್ತು ಅರಣ್ಯವನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಲೇಬೇಕೆಂಬ ಉದ್ದೇಶದಿಂದ ಹಲವು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಈಗಾಗಲೇ ಪೊದೆ, ಒಣ ಹುಲ್ಲು, ಗಿಡಗಂಟಿಗಳನ್ನು ತೆರವು ಮಾಡಿ ಫೈರ್‌ಲೈನರ್‌ಗಳನ್ನು ಅಳವಡಿಸಲಾಗಿದೆ.

Advertisement

ಅತೀ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು
– ಬೆಳಗಾವಿ
– ಚಾಮರಾಜನಗರ
– ಮೈಸೂರು
– ಕೊಡಗು
– ದಕ್ಷಿಣ ಕನ್ನಡ
– ಉತ್ತರ ಕನ್ನಡ
– ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next