Advertisement
ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿಗೆ ಪ್ರವಾಸಿಗರು ತೆರಳಿದ್ದ ವೇಳೆ, ಸಫಾರಿ ಜೋನ್ ನ ಬಾರ್ಡರ್ ರೋಡ್ ಎಂಬಲ್ಲಿ ತೊರೆಯೊಂದರ ಬಳಿ ತಾಯಿ ಹುಲಿ ಹಾಗೂ ಎರಡು ಮರಿ ಹುಲಿಗಳು ಮಲಗಿ ನಿದ್ರಿಸುತ್ತಿದ್ದರೇ, ಗಂಡು ಹುಲಿ ಎಚ್ಚರವಾಗಿ ಅತ್ತಿತ್ತ ನೋಡುತ್ತಿರುವ ದೃಶ್ಯವನ್ನು ರೋಮಾಂಚನಗೊಂಡ ಪ್ರವಾಸಿಗರು ಸೆರೆ ಹಿಡಿಯುವ ಮೂಲಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಸಾಕಷ್ಟು ವೈರಲ್ ಆಗಿದೆ.
ಬಂಡೀಪುರ ಅಭಯಾರಣ್ಯಕ್ಕೆ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಕಾರಣ ಕಾಡೆಲ್ಲ ಅಚ್ಚ ಹರಿಸಿರಿನಿಂದ ಕಂಗೊಳಿಸುತ್ತಿದೆ. ಈ ಕಾರಣದಿಂದ ಜಿಂಕೆ, ನವಿಲು, ಕಾಡೆಮ್ಮೆ, ಆನೆಗಳು ಸಫಾರಿ ರಸ್ತೆಯಲ್ಲಿಯೇ ಮೇವು ಮೇಯುತ್ತ ನಿಂತಿರುತ್ತವೆ. ಇನ್ನು ಕೆರೆ-ಕಟ್ಟೆಗಳ ಆಸುಪಾಸಿನಲ್ಲಿ ಹುಲಿ ಹಾಗೂ ಚಿರತೆ ನೀರು ಕುಡಿಯಲು ಆಗಮಿಸುತ್ತವೆ. ಬೆಳಗಿನ ಸಫಾರಿಯಲ್ಲಿ ಹೆಚ್ಚಿನ ಕಾಡುಪ್ರಾಣಿಗಳ ದರ್ಶನ ನೀಡುತ್ತಿದ್ದು, ಪ್ರವಾಸಿಗರು ವನ್ಯಪ್ರಾಣಿಗಳನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.