*
ಬನಾರಸ್ ಸೀರೆಗಳ ಮೂಲ ವಾರಣಾಶಿ, ಬನಾರಸ್ ಅರ್ಥಾತ್ ಕಾಶಿ . ಅದರಿಂದಲೇ ಮೈ ತುಂಬ ಜರಿಗಳ ಈ ಸೀರೆಗೆ ಬನಾರಸ್ ಸೀರೆ ಅನ್ನುವ ಹೆಸರು ಬಂದಿದೆ. ವುಲ್ಲನ್ ಸಿಲ್ಕ್ನಿಂದ ಮಾಡಿರುವ ಈ ಸೀರೆಗೆ ಚಿನ್ನ ಅಥವಾ ಬೆಳ್ಳಿ ಜರಿಯ ಅಂಚುಗಳು. ಈ ಚೆಂದದ ಸಿಲ್ಕ್ ಮೆಟೀರಿಯಲ್ ಮೇಲೆ ಎಂಬ್ರಾಯಿಡರಿ ವರ್ಕ್‌ನ್ನು ನೋಡೋದೆ ಖುಷಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಬನಾರಸಿ ಸೀರೆಯಲ್ಲಿ ಮೊಘಲ್ ಇನ್‌ಫುÉಯೆನ್ಸ್ ದಟ್ಟವಾಗಿರುವುದನ್ನು ಕಾಣಬಹುದು. ಪರಸ್ಪರ ಕೂಡಿದಂತಿರುವ ಎಲೆಗಳ ವಿನ್ಯಾಸ, ಜರಿ ವರ್ಕ್ ಈ ಸೀರೆಯ ವಿಭಿನ್ನತೆಗೆ ಸಾಕ್ಷಿ.
Advertisement
ಇದರ ಜೊತೆಗೆ ಚಿಕ್ಕಚಿಕ್ಕ ಡೀಟೈಲ್‌ಗಳು, ಮೆಟಾಲಿಕ್ ಎಫೆಕ್ಟ್ಗಳು, ಪಲ್ಲು, ಅದರ ಅಂಚು ಎಲ್ಲದರಲ್ಲೂ ಎದ್ದು ಕಾಣುವ ಗುಣ ಇದೆ. ಈ ಬನಾರಸ್ ಸೀರೆಯ ಇನ್‌ಫುÉಯೆನ್ಸ್ ಬೇರೆ ಬೇರೆ ಮಾದರಿ ಸೀರೆಗಳಲ್ಲಿದೆ. ಅದರಲ್ಲೂ ಆಧುನಿಕ ಸೀರೆಯ ವಿನ್ಯಾಸಗಳು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸಾಂಪ್ರದಾಯಿಕ ಸೀರೆಯ ಅಂಶಗಳನ್ನು ಒಳಗೊಂಡಿರುತ್ತವೆ. ಇಂಥ ಸೀರೆಗಳನ್ನು ನೇಯಲು 15 ದಿನಗಳಿಂದ 6 ತಿಂಗಳ ಅವಧಿ ಬೇಕಾಗುತ್ತೆ.
ಹಾಗೆ ನೋಡಿದ್ರೆ ಈ ಶಿಫಾನ್ ಮೆಟೀರಿಯಲ್‌ಗಳು ನಮ್ಮ ನೆಲದವಲ್ಲ. ಅವು ಫ್ರೆಂಚ್ ಪರಂಪರೆಯಲ್ಲಿ ಕಾಣಸಿಗುವ ವಸ್ತ್ರಗಳು. ಹಿಂದೆಲ್ಲ ಶಿಫಾನ್‌ನಲ್ಲಿ ರೇಶೆ¾ಯೇ ಪ್ರಧಾನವಾಗಿರುತ್ತಿತ್ತು, ಆದರೆ ಈಗ ನೈಲಾನ್ ವರ್ಶನ್‌ನಲ್ಲಿರುವ ಶಿಫಾನ್‌ಗಳೇ ಜನಪ್ರಿಯ. ಶಿಫಾನ್ ಫ್ರಾನ್ಸ್‌ನಲ್ಲಿ ಸಂಜೆ ಉಡುಪಾಗಿ ಫೇಮಸ್. ಅದರಲ್ಲೂ ಗೌನ್ ಮೇಲಿಂದ ಆವರಿಸುವ ಜಾಳು ಜಾಳಾದ ಓವರ್‌ಕೋಟ್ ಮಾದರಿಯ ಶಿಫಾನ್ ಮೆಟೀರಿಯಲ್ ಇಂದಿಗೂ ಅಲ್ಲಿನ ಮಂದಿಯ ಅಚ್ಚುಮೆಚ್ಚು.
ನಮ್ಮಲ್ಲಿ ಈ ಶಿಫಾನ್ ಮೆಟೀರಿಯಲ್‌ಗಳು ಸೀರೆಗಳಾಗಿದೆ. ಹಗುರವಾದ ಮೈಗಂಟಿ ನಿಲ್ಲುವ ಈ ಸೀರೆಗಳು ಎಲ್ಲ ವಯಸ್ಸಿನ ಹೆಣ್ಮಕ್ಕಳಿಗೂ ಅಚ್ಚುಮೆಚ್ಚು. ಈಗ ಶಿಫಾನ್ ಸೀರೆಗಳಲ್ಲಿ ಬನಾರಸ್ ಶೈಲಿಯ ಪ್ರಿಂಟ್‌ಗಳು ಸಖತ್ ಎಲಿಗೆಂಟ್ ಲುಕ್‌ನಲ್ಲಿವೆ.
ಬಾಲಿವುಡ್ ಬೆಡಗಿಯರಲ್ಲಿ ಹಲವರು ಈ ಅಂದಕ್ಕೆ ಮಾರುಹೋಗಿದ್ದಾರೆ. ಗಾರ್ಜಿಯಸ್ ಲುಕ್, ಚೆಂದದ ನಗುವಿನ ಅನ್ವರ್ಥದಂತಿರುವ ದಿಯಾಮಿರ್ಜಾ ಇತ್ತೀಚೆಗೆ ಪಾರ್ಟಿಯೊಂದಕ್ಕೆ ಮೈತುಂಬ ಬನಾರಸ್ ವಿನ್ಯಾಸದ ಶಿಫಾನ್ ಸೀರೆಯುಟ್ಟು ಬಂದಿದ್ದರು. ಅಂಚುಗಳಲ್ಲಿ ಬನಾರಸ್ ಪಾರಂಪರಿಕ ವಿನ್ಯಾಸ,ಮೈ ತುಂಬ ಬಳ್ಳಿ ಎಲೆ ಹೂ ಮಿಂಚು. ಆ ಕಡುಗೆಂಪು ಬಣ್ಣದಲ್ಲಿ ಮುದ್ದಿನ ಸಿಂಗಾರಿಯಂತೆ ಕಾಣುವ ದಿಯಾ. ಆಕೆ ಗೋಲ್ಡನ್ ಕಲರ್ ವಲ್ವೆಟ್ ಬ್ಲೌಸ್ ತೊಟ್ಟಿದ್ದು ಇನ್ನೊಂದು ವಿಶೇಷ.
Related Articles
Advertisement
ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ ಮೊದಲಾದವರೂ ಬನಾರಸಿ ಪ್ರಿಂಟ್ ಇರುವ ಶಿಫಾನ್ ಸೀರೆಯುಟ್ಟು ಮೆರೆದವರೇ. ಶಿಫಾನ್ ಮೆಟೀರಿಯಲ್‌ನಲ್ಲಿ ಬನಾರಸ್ ಪ್ರಿಂಟ್ ಇರುವ ಚೆಂದದ ಸೀರೆಗಳು ನಿಮಗೆ ಆನ್‌ಲೈನ್‌ನಲ್ಲೂ ಸಿಗಬಹುದು. ನಿಮ್ಮ ಮೈಬಣ್ಣ, ನಿಲುವೆಗೆ ತಕ್ಕಂಥ ಸೀರೆ ಆರಿಸೋದು ಮರೀಬೇಡಿ.