Advertisement

ಅಪ್ಪು ಸ್ಮರಣೆಯೊಂದಿಗೆ ‘ಬನಾರಸ್‌’ಪ್ರಚಾರ ಕಾರ್ಯಕ್ಕೆ ಚಾಲನೆ

02:39 PM Nov 19, 2021 | Team Udayavani |

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಬನಾರಸ್‌’ ಚಿತ್ರದ ಫ‌ಸ್ಟ್‌ ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ಅನ್ನು ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ತಮ್ಮ ಕೈಯಿಂದ ಬಿಡುಗಡೆಗೊಳಿಸಬೇಕಿತ್ತು. ಪುನೀತ್‌ ರಾಜಕುಮಾರ್‌ ಅವರಿಂದ ತಮ್ಮ ಸಿನಿಮಾದ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಿಸುವ ಲೆಕ್ಕಾಚಾರದಲ್ಲಿತ್ತು “ಬನಾರಸ್‌’ ಚಿತ್ರತಂಡ. ಆದರೆ ವಿಧಿಯ ಲೆಕ್ಕಾಚಾರ ಬೇರೆಯದ್ದೇ ಆಗಿತ್ತು. “ಬನಾರಸ್‌’ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಬೇಕಿದ್ದ ಪುನೀತ್‌ ರಾಜಕುಮಾರ್‌, ಕಾಲದ ಕರೆಗೆ ತೆರಳುವಂತಾಯಿತು.

Advertisement

ಇದೀಗ ದೈಹಿಕವಾಗಿ ಪುನೀತ್‌ ಇಲ್ಲದಿದ್ದರೂ, ಅವರ ಎದುರು “ಬನಾರಸ್‌’ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಬೇಕು ಎಂಬ ತಮ್ಮ ಕನಸನ್ನು ಕೊನೆಗೂ ಚಿತ್ರತಂಡ ಪುನೀತ್‌ ಸಮಾಧಿಯ ಮುಂದೆ ನೆರವೇರಿಸಿಕೊಂಡಿದೆ.

ಹೌದು, “ಬನಾರಸ್‌’ ಚಿತ್ರತಂಡ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿ, ಅಲ್ಲಿಯೇ ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದೆ.

ಇದನ್ನೂ ಓದಿ:ಅದೃಷ್ಟಕ್ಕಿಂತ ಪರಿಶ್ರಮ ನಂಬಿ: ಪುತ್ರರಿಗೆ ರವಿಚಂದ್ರನ್‌ ಕಿವಿಮಾತು

ಇದೇ ವೇಳೆ ಮಾತನಾಡಿದ ಚಿತ್ರತಂಡ, “ಪುನೀತ್‌ ರಾಜಕುಮಾರ್‌ ತುಂಬ ಪ್ರೀತಿಯಿಂದ ನಮ್ಮ ಸಿನಿಮಾಕ್ಕೆ ಹಾರೈಸಿದ್ದರು. ತಾವೇ ಸಿನಿಮಾದ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡುವುದಾಗಿಯೂ ಹೇಳಿದ್ದರು. ನಾವು ಕೂಡ ಅವರಿಂದಲೇ ಫ‌ಸ್ಟ್‌ ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಿಸುವ ಕನಸನ್ನು ಇಟ್ಟುಕೊಂಡಿದ್ದೆವು. ಆದರೆ ನಮ್ಮ ಪುನೀತ್‌ ಅವರ ಅಕಾಲಿಕ ನಿಧನದಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರ ಅವರ ಸಮಾಧಿಯ ಮುಂದೆ, ಅವರ ಸಮ್ಮುಖದಲ್ಲೇ ಫ‌ಸ್ಟ್‌ಲುಕ್‌ ಮತ್ತು ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದೇವೆ. ಪುನೀತ್‌ ರಾಜಕುಮಾರ್‌ ಅಲ್ಲಿಂದಲೇ ಖುಷಿಯಾಗಿ ನಮಗೆ ಹರಸುತ್ತಾರೆಂಬ ನಂಬಿಕೆ ಇದೆ’ ಎಂದಿದೆ.

Advertisement

ಇನ್ನು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಪುತ್ರ ಝೈದ್‌ ಖಾನ್‌ ಮೊದಲ ಬಾರಿಗೆ “ಬನಾರಸ್‌’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಸೋನಾಲ್‌ ಮಾಂಟೆರೊ ನಾಯಕಿಯಾಗಿದ್ದು, “ನ್ಯಾಷನಲ್‌ ಖಾನ್ಸ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಐದು ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಜಯತೀರ್ಥ ನಿರ್ದೇಶನವಿದೆ.

ಹೆಸರಿಗೆ ತಕ್ಕಂತೆ, ಚಿತ್ರದ 90 ಭಾಗದ ಚಿತ್ರೀಕರಣವನ್ನು “ಬನಾರಸ್‌’ ಮತ್ತು ಅಲ್ಲಿನ 84 ಘಾಟ್‌ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next