ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಪೂರೈಕೆಯಲ್ಲೂ ಕೊರತೆ ಕಾಣಿಸಿದ್ದು, 15 ದಿನಗಳಿಂದ ಬೆಲೆ ಏರುತ್ತಲೇ ಇದೆ. ಪೂರೈಕೆಯಾಗುವ ಹಣ್ಣು ಸಾಕಷ್ಟು ಪುಷ್ಟವಾಗಿಲ್ಲ. ಕದಳಿ ಹಣ್ಣು ಬೆರಳ ಗಾತ್ರ ಇದ್ದು ಅದನ್ನು ಮಾರುವುದಾದರೂ ಹೇಗೆ ಎಂಬ ಚಿಂತೆ ವ್ಯಾಪಾರಿಗಳದ್ದು.
ಶಿವಮೊಗ್ಗ, ಅರಸೀ ಕರೆ, ಹಾಸನ ಕಡೆ ಯಿಂದ ಕದಳಿ ಹಣ್ಣು ಹೆಚ್ಚಾಗಿ ಕರಾವಳಿಗೆ ಪೂರೈಕೆ ಯಾಗು ತ್ತಿದೆ. ಈ ವರ್ಷ ಅಲ್ಲಿ ಹೆಚ್ಚಿನ ಮಳೆ ಯಾಗಿ ಬೆಳೆ ಹಾನಿ ಸಂಭವಿಸಿರುವ ಪರಿಣಾಮ ಪೂರೈಕೆ ಕುಸಿದಿದೆ ಎಂದು ಮಂಗಳೂರು ರಥಬೀದಿಯ ಹಣ್ಣಿನ ವ್ಯಾಪಾರಿ ಕೃಷ್ಣಾನಂದ ನಾಯಕ್ ತಿಳಿಸಿದ್ದಾರೆ.
ಬಾಳೆಹಣ್ಣು, ಎಳನೀರು ಪೂರೈಕೆ ಪ್ರಮಾಣ ಕುಸಿತ
ಉಡುಪಿ: ಜಿಲ್ಲೆಯ ಮಾರುಕಟ್ಟೆಗೆ ಬಾಳೆ ಹಣ್ಣು, ಎಳನೀರು ಪೂರೈಕೆ ಪ್ರಮಾಣ ಕುಸಿತವಾಗಿದ್ದು, ದರ ಹೆಚ್ಚಳಕ್ಕೂ ಕಾರಣವಾಗಿದೆ. ಪುಟ್‌ಬಾಳೆ ಹಣ್ಣು ಸಾಕಷ್ಟು ಪ್ರಮಾಣದಲ್ಲಿ ಅರಸೀಕೆರೆ, ಶಿವಮೊಗ್ಗ ಮತ್ತಿತರ ಕಡೆಯಿಂದ ಉಡುಪಿ ಮಾರುಕಟ್ಟೆಗೆ ಬರುತ್ತದೆ. ಬಾಳೆ ಹಣ್ಣು ಕೆಲ ದಿನಗಳ ಹಿಂದೆ ಕೆಜಿಗೆ 60 ರೂ. ಇದ್ದ ದರ ಮೊದಲ ಬಾರಿಗೆ 90 ರೂ. ದಾಟಿದೆ ಎನ್ನುತ್ತಾರೆ ವ್ಯಾಪಾರಿಗಳು.
ರಸಬಾಳೆ, ಪಚ್ಚಬಾಳೆ, ನೇಂದ್ರ ಬಾಳೆ ಹಣ್ಣು ಪೂರೈಕೆಯಲ್ಲೂ ವ್ಯತ್ಯಾಸ ಕಂ ಕಂಡು ಬಂದಿದೆ. ಪುಟ್‌ಬಾಳೆ ಹೊರತುಪಡಿಸಿ ಇತರೆ ಬಾಳೆ ದರ ಹೆಚ್ಚಳವಾಗಿಲ್ಲ. ಸದ್ಯಕ್ಕೆ ಉಡುಪಿ ಮಾರುಕಟ್ಟೆಗೆ ಅರಸೀಕೆರೆ, ಶಿವಮೊಗ್ಗ ಭಾಗದಿಂದ ಎಳನೀರು ಪೂರೈಕೆಯಾಗುತ್ತಿಲ್ಲ. ಸ್ಥಳೀಯ ಮಾರುಕಟ್ಟೆಗೆ ಬಾರಕೂರು, ಕುಂದಾಪುರ ಭಾಗದಿಂದ ಎಳನೀರು ಬರುತ್ತಿದ್ದು, ಪೂರೈಕೆಯಾಗುತ್ತಿದೆ. ಬೇಡಿಕೆಯಷ್ಟು ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. 35 ರಿಂದ 40 ರೂ. ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ.
-ಸುಬ್ರಾಯ ನಾಯಕ್ ಎಕ್ಕಾರು