ಮಾಗಡಿ: ಬಾಳೆ ಬೆಳೆಯ ವಿವಿಧ ತಳಿಗಳು, ಮಣ್ಣು ಪರೀಕ್ಷೆ, ಭೂಮಿ ಸಿದ್ಧತೆ, ನಾಟಿ ಅಂತರ ಮತ್ತು ವಿಧಾನಗಳು, ಗಡ್ಡೆಉಪಚಾರ, ಅಧಿಕ ಸಾಂದ್ರತೆಯಲ್ಲಿ ಬೇಸಾಯ, ಪೋಷಕಾಂಶ ನಿರ್ವಹಣೆ, ರಸಾವರಿ ಪದ್ಧತಿ, ಬಾಳೆ ಸ್ಪೆಷಲ್‌ನ ಮಹತ್ವ, ಅಂತರ ಬೆಳೆ, ಅಂತರ ಬೇಸಾಯ ಕ್ರಮಗಳು, ಕಳೆ ನಿರ್ವಹಣೆ ಕುರಿತುಕೆ.ವಿ. ಕೇಂದ್ರದ ತೋಟಗಾರಿಕೆ ವಿಜಾnನಿ ವಿಕಾಸ ಎ.ಎನ್. ಮಾಹಿತಿ ನೀಡಿದರು.
ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ- ಐ.ಸಿ.ಎ.ಆರ್. ವತಿಯಿಂದ ಬಾಳೆ ಬೆಳೆಯಲ್ಲಿ ಸುಧಾರಿತಬೇಸಾಯ ಕ್ರಮಗಳು, ಕೀಟ ಮತ್ತು ರೋಗ ನಿರ್ವಹಣೆ, ಮೌಲ್ಯವರ್ಧನೆ ಕುರಿತು ಆನ್‌ಲೈನ್ ತರಬೇತಿ ನೀಡಿ ಮಾತನಾಡಿದರು.
ಕೆ.ವಿ. ಕೇಂದ್ರದ ಮತ್ತೋರ್ವ ಸಸ್ಯ ಸಂರಕ್ಷಣೆ ವಿಜ್ಞಾನಿ ರಾಜೇಂದ್ರ ಪ್ರಸಾದ್ ಮಾತನಾಡಿ, ಬಾಳೆ ಬೆಳೆಯಲ್ಲಿ ಬಾಧಿಸುವಪ್ರಮುಖ ಕೀಟಗಳಾದ ಕಾಂಡ ಕೊರೆಯುವ ಹುಳು, ಸಸ್ಯಹೇನು, ಎಲೆ ಕತ್ತರಿಸುವ ಹುಳು, ರುಗೋಸ್ ಸುರುಳಿಯಾ ಕಾರದ ಬಿಳಿನೊಣ ಮತ್ತು ರೋಗಗಳಾದ ಪನಾಮ ಸೊರಗುರೋಗ, ಸಿಗಟೋಕಾ ಎಲೆ ಚುಕ್ಕೆ ರೋಗ, ಗಡ್ಡೆ ಕೊಳೆಯುವ ರೋಗ, ಮೊಸೈಕ್ ನಂಜಾಣು ರೋಗ ಹತೋಟಿ ಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಕೆ.ವಿ. ಕೇಂದ್ರದ ಮತ್ತೋರ್ವ ಗೃಹ ವಿಜ್ಞಾನ ವಿಜ್ಞಾನಿ ಲತಾ ಆರ್.ಕುಲಕರ್ಣಿ ಮಾತನಾಡಿ,ಬಾಳೆಯಲ್ಲಿನ ಪೌಷ್ಟಿಕಾಂಶಗಳು, ಅದರ ಉಪಯೋಗಗಳು, ಮೌಲ್ಯವರ್ಧಿತ ಉತ್ಪನ್ನಗಳಾದ ಬಾಳೆ ಹೂವಿನ ತೊಕ್ಕು, ಚಿಪ್ಸ್, ಪೌಡರ್ ಹಾಗೂ ಬಾಳೆ ದಿಂಡಿನ ಪದಾರ್ಥಗಳಕುರಿತು ಮಾಹಿತಿ ಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಸವಿತಾ ಮಾತನಾಡಿದರು. ರಾಮನಗರ ಸುತ್ತಮುತ್ತಲಿನ ಜಿಲ್ಲೆಯ 100ಕ್ಕೂ ಹೆಚ್ಚು ರೈತರು ಆನ್‌ಲೈನ್ ಮುಖಾಂತರ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.