Advertisement

ಈ ಹೈಟೆಕ್ ರಸ್ತೆಯ ಉದ್ಘಾಟನೆಗೆ ನೀವೂ ಬನ್ನಿ… ಬಣಕಲ್ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

02:57 PM Feb 15, 2024 | Team Udayavani |

ಚಿಕ್ಕಮಗಳೂರು: ಬಣಕಲ್ ಗ್ರಾಮ ಪಂಚಾಯಿತಿಯಿಂದ ಅಂಬೇಡ್ಕರ್ ಭವನದ ವರಗಿನ ರಸ್ತೆಯ ಡಾಂಬರ್ ಕಿತ್ತು ಹೋಗಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ನೂತನವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

Advertisement

ಸತತ 20 ವರ್ಷಗಳ ರಾಜಕೀಯ ನಾಯಕರ ಪರಿಶ್ರಮದಿಂದ ಬಣಕಲ್ ಗ್ರಾಮ ಪಂಚಾಯಿತಿಯಿಂದ ಅಂಬೇಡ್ಕರ್ ಭವನದ ವರಗಿನ ರಸ್ತೆ, ಮತ್ತು ಸುಭಾಷ್ ನಗರ ಗಣಪತಿ ಪೆಂಡಲ್ ನಿಂದ ಸೊಸೈಟಿವರೆಗಿನ ರಸ್ತೆಯು ಸುಮಾರು 12,000 ಕೋಟಿ ರೂಗಳಲ್ಲಿ ನವೀಕರಣಗೊಂಡಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 1ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಸ್ತೆಯ ಅಭಿವೃದ್ಧಿಗೆ ಶ್ರಮಿಸಿದ 20 ವರ್ಷದಿಂದ ರಾಜಕೀಯ ಮಾಡಿದ ಮಾಜಿ ಹಾಗೂ ಹಾಲಿ mla, mp, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಮೂಲಕ ಬಣಕಲ್ಲಿನ ಸರ್ವ ಸದಸ್ಯರ ಪರವಾಗಿ ಸನ್ಮಾನ ಮಾಡಲಾಗುತ್ತದೆ.

ಈ ಒಂದು ರಸ್ತೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಪಾನೀಯ ತೋರಣ ಮತ್ತು ಹೂವಿನ ಅಲಂಕಾರದ ಜವಾಬ್ದಾರಿಯನ್ನು ಸನ್ ಶೈನ್ ಫ್ರೆಂಡ್ಸ್ ಬಣಕಲ್ ವಹಿಸಿಕೊಂಡರೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಫ್ರೇಂಡ್ಸ್ ಕ್ಲಬ್ ಬಣಕಲ್, ಡಿಜೆ ಮತ್ತು ದೀಪಾಲಂಕಾರವನ್ನು ವಾಹನ ಚಾಲಕರ ಸಂಘ, ಬಂದಂತಹ ಅತಿಥಿಗಳಿಗೆ ಸತ್ಕಾರವನ್ನು ಮಹಿಳಾ ಸ್ವಸಹಾಯ ಸಂಘ, ಮನೋರಂಜನ ವ್ಯವಸ್ಥೆಯನ್ನು ಬಣಕಲ್ನ ಎಲ್ಲಾ ಶಾಲಾ ವಿದ್ಯಾರ್ಥಿಗಳು ವಹಿಸಿಕೊಂಡಿರುತ್ತಾರೆ

ಈ ಕಾರ್ಯಕ್ರಮವು ಸತತ ಏಳು ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ರಾಜಕೀಯ ನಾಯಕರಿಗೆ ಮಾತ್ರ ಊಟದ ವ್ಯವಸ್ಥೆ ಇರುತ್ತದೆ.

Advertisement

ಈ ರಸ್ತೆಯ ವೈಶಿಷ್ಟಗಳು
1. ಯಾವುದೇ ರೀತಿಯ ಬೆನ್ನು ನೋವು ಕೈಕಾಲು ನೋವು ಇದ್ದವರು ಒಂದು ಬಾರಿ ಈ ರಸ್ತೆಯಲ್ಲಿ ನಡೆದರೆ ಮಾಯವಾಗುತ್ತದೆ.
2. ವಾಹನಗಳ ಬಿಡಿ ಭಾಗಗಳ ಪರಿಚಯವಾಗುತ್ತದೆ ಹಾಗೂ ಗ್ಯಾರೇಜ್ ಮಾಲೀಕರಿಗೆ ಹೆಚ್ಚಿನ ಆದಾಯ ತರುತ್ತದೆ.
3. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಟ್ಟೆಗಳಲ್ಲಿ ವಿಭಿನ್ನ ರೀತಿಯ ಗ್ರಾಫಿಕ್ಸ್ ಗಳು ಕ್ಷಣಾರ್ಧದಲ್ಲಿ ಗೋಚರಿಸುತ್ತವೆ.
3. ಕೆಮ್ಮು ಶೀತ ಅಲರ್ಜಿ ಇಷ್ಟರವರೆಗೆ ಆಗದವರು ಈ ರಸ್ತೆಗೆ ಬಂದರೆ ಒಂದೇ ದಿನದಲ್ಲಿ ಈಡೇರುತ್ತದೆ.
4. ಮದ್ಯಪಾನ ಮಾಡದೇನೇ ತೇಲಾಡಿಕೊಂಡು ಕೂಡ ಹೋಗಬಹುದು.

ಈ ಒಂದು ಅದ್ಭುತವಾದ ರಸ್ತೆಯ ಉದ್ಘಾಟನೆಯಲ್ಲಿ ಬಣಕಲ್ ನ ಸರ್ವ ಸದಸ್ಯರು ಭಾಗವಹಿಸಿ, ಈ ಒಂದು ಕಾರ್ಯಕ್ರಮವನ್ನು ನೀವು ಒಂದು ಬಾರಿ ಕಳೆದುಕೊಂಡರೆ ಮುಂದೆಂದು ವೀಕ್ಷಿಸಲು ಸಾಧ್ಯವಿಲ್ಲ ದಯವಿಟ್ಟು ಬೆಳಿಗ್ಗೆ 9 ಗಂಟೆಗೆ ಎಲ್ಲರೂ ಹಾಜರಾಗಿ.

ಇದನ್ನೂ ಓದಿ: Sagara: ರೈತ ಪರವಾದ ಯಾವುದೇ ಯೋಜನೆಯನ್ನು ಮೋದಿ ಸರಕಾರ ತಂದಿಲ್ಲ… :ತೀನ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next