Advertisement
ರಬಕವಿ-ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದ ದುರ್ಗಾದೇವಿ ಆಶ್ರಯ ಮನೆಗಳನ್ನು ಸ್ಥಳೀಯ ಗ್ರಾಮ ಪಂಚಾಯತ 1998 ರ ಅವಧಿಯಲ್ಲಿಯೇ ನಿರ್ಮಾಣ ಮಾಡಿತ್ತು. 200 ಮನೆಗಳನ್ನು ನಿರ್ಮಿಸಿರುವ ಗ್ರಾಮ ಪಂಚಾಯ್ತಿಯು 50 ಕ್ಕೂ ಅಧಿಕ ಮನೆಗಳನ್ನು ಖಾಸಗಿ ಭೂಮಿಯನ್ನು ಕಬಳಿಸಿ ನಿರ್ಮಿಸಿದ್ದಾರೆಂದು ಹೊಸೂರ(ಹಳೆಮನಿ) ಕುಟುಂಬವು ಆರೋಪ ಮಾಡುತ್ತಲೇ ಬಂದಿತ್ತು. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದಿಢೀರನೆ ರಸ್ತೆ ಮಧ್ಯ ಬೇಲಿ, ಗಿಡಗಂಟಿಗಳನ್ನು ಹಾಕುವ ಮೂಲಕ ಅಲ್ಲಿನ 50 ಕುಟುಂಬಗಳಿಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
Related Articles
Advertisement
ಬೇಜವಾಬ್ದಾರಿಯಾಗಿ ಕಾನೂನು ಮೀರಿ ಮಾಡಿರುವ ಕೆಲಸ. ರಸ್ತೆ ಮೇಲೆ ಗಿಡಗಂಟಿ ಹಚ್ಚಿ ರಸ್ತೆ ಬಂದ್ ಮಾಡಿರುವುದು ಅಮಾನವೀಯ ಕೆಲಸ. ಅವರ ಸಮಸ್ಯೆ ಏನಿದ್ದರೂ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲು ಅದನ್ನು ಬಿಟ್ಟು ಬಡಕುಟುಂಬಗಳಿಗೆ ತೊಂದರೆ ಕೊಡುವುದು ತಪ್ಪು.. ಬಸವರಾಜ ಮುನವಳ್ಳಿ,
ಅಭಿವೃದ್ಧಿ ಅಧಿಕಾರಿ, ಗ್ರಾಪಂ ಜಗದಾಳ ‘ಕಾರಣವಿಲ್ಲದೆ ಒಮ್ಮೆಲೆ ರಸ್ತೆ ಮೇಲೆ ಗಿಡಗಂಟಿ ಹಚ್ಚಿ, ರಸ್ತೆ ಬಂದ್ ಮಾಡಿದ್ದಾರೆ. ಸುಮಾರು 10 ಗಂಟೆಗಳ ಕಾಲ ನಾವು ಬಂಧನದಲ್ಲಿದ್ದಂತಾಗಿತ್ತು.
. ಮಲ್ಲಿಕಾರ್ಜುನ ಮಾಳಿ