Advertisement

ಮಹಾಲಿಂಗಪುರ ಪುರಸಭೆಯ ಚುನಾವಣೆ ದೌರ್ಜನ್ಯಕ್ಕೆ ಕಾಂಗ್ರೆಸ್ ಕಾರಣ: ಸಿದ್ದು ಸವದಿ

08:12 PM Aug 28, 2021 | Team Udayavani |

ಬನಹಟ್ಟಿ:  ಮಾಜಿ ಸಚಿವೆ ಉಮಾಶ್ರೀ ಬಿಜೆಪಿ ಆಡಳಿತದಲ್ಲಿ ರಾಜ್ಯದ ಮತ್ತು ತೇರದಾಳ ಮತಕ್ಷೇತ್ರದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಮತ್ತು ರಕ್ಷಣೆ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದರು. ಈ ಮಾತುಗಳನ್ನು ಹೇಳುವ ಮೊದಲು ಮಾಜಿ ಸಚಿವೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ತಮ್ಮ ಅಧಿಕಾರ ಅವಧಿಯಲ್ಲಿ ನಡೆದ ಘಟನೆಯ ಬಗ್ಗೆ ಯಾವುದೇ ರೀತಿಯಲ್ಲಿ ಮಾತನಾಡದ ಸಚಿವೆ ಈಗ ಮಾತಾಡುತ್ತಿರುವುದು ಖಂಡನೀಯವಾಗಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಶನಿವಾರ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಹಾಲಿಂಗಪುರ ಪುರಸಭೆಯ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ್ದು ಕಾಂಗ್ರೆಸ್ನವರು. ರಾತ್ರಿ ಬಿಜೆಪಿ ಸದಸ್ಯರನ್ನು ಅಪಹರಣ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು. ಅಂದಿನ ದಿನಗಳಲ್ಲಿ ನಮ್ಮ ಸದಸ್ಯರ ರಕ್ಷಣೆಯನ್ನು ಮಾಡುವ ಸಂದರ್ಭದಲ್ಲಿ ತಳ್ಳಾಟ ನಡೆದಿದೆ. ಆದರೆ ಈ ಎಲ್ಲಾ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಇದನ್ನೂ ಓದಿ:ಕ್ಯಾಸಿನೊ ಬಂದ್ ಇರುವುದರಿಂದ ಗೋವಾಕ್ಕೆ ದೊಡ್ಡ ಪೆಟ್ಟು ಬಿದ್ದಿದೆ: ಶ್ರೀನಿವಾಸ್ ನಾಯಕ್

ಮೈಸೂರು ಘಟನೆಯನ್ನು ಕೂಡಾ ನಾವು ಕೂಡಾ ಖಂಡಿಸುತ್ತೇನೆ ಮತ್ತು ಘಟನೆಯಲ್ಲಿ ಪಾಲ್ಗೊಂಡವರಿಗೆ ಉಗ್ರ ಶಿಕ್ಷೆಯನ್ನು ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸವದಿ ತಿಳಿಸಿದರು.

ಗಣೇಶೋತ್ಸವಕ್ಕೆ ಅನುಮತಿಯನ್ನು ನೀಡಿ

Advertisement

ಇದೇ ಸಂದರ್ಭದಲ್ಲಿ ಸವದಿ ಮಾತನಾಡಿ, ಸಾರ್ವಜನಿಕ ಗಣೇಶೊತ್ಸವಕ್ಕೆ ಸರ್ಕಾರ ಅನುಮತಿಯನ್ನು ನೀಡಬೇಕು. ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಸರ್ಕಾರ ಕೋವಿಡ್ ನಿಯಮಾಳಿಗಳನ್ನು ರೂಪಿಸಬೇಕು. ಅದರಂತೆ ಆಚರಣೆ ಮಾಡಲು ತಿಳಿಸಬೇಕು.

ಸಾರ್ವಜನಿಕ ಗಣೇಶೋತ್ಸವ ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ಇದು ನಾವು ಜಾತಿ, ಮತ, ಧರ್ಮವನ್ನು ಮರೆತು ಒಂದಾಗಿ ಆಚರಿಸುವ ಹಬ್ಬವಾಗಿದೆ. ಆದ್ದರಿಂದ ಸರ್ಕಾರ ಹಬ್ಬಕ್ಕೆ ಯಾವುದೇ ಅಡೆತಡೆ ಮಾಡಬಾರದು.

ಸರ್ಕಾರ ಯಾವುದೇ ವಿವಾದಕ್ಕೆ ಒಳಗಾಗಬಾರದು ಎಂದರೆ ಸಾರ್ವಜನಿಕ ಗಣೇಶೋತ್ಸಕ್ಕೆ ಅವಕಾಶ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next