Advertisement

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

07:53 PM Oct 21, 2024 | Team Udayavani |

ಢಾಕಾ: ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸೋಮವಾರ ಮೊದಲ್ಗೊಂಡ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನವೇ 16 ವಿಕೆಟ್‌ಗಳು ಉರುಳಿವೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆತಿಥೇಯ ಬಾಂಗ್ಲಾದೇಶ, ಆಫ್ರಿಕನ್ನರ ಬೌಲಿಂಗ್‌ ದಾಳಿಗೆ ತತ್ತರಿಸಿ 106 ರನ್ನಿಗೆ ಆಲೌಟ್‌ ಆಯಿತು. ಬಾಂಗ್ಲಾ ಬೌಲರ್ ಕೂಡ ತಿರುಗಿ ಬಿದ್ದರು. ದಕ್ಷಿಣ ಆಫ್ರಿಕಾ 140 ರನ್ನಿಗೆ 6 ವಿಕೆಟ್‌ ಕಳೆದುಕೊಂಡಿದೆ.

ರಬಾಡ ದಾಖಲೆ
ಬಾಂಗ್ಲಾಕ್ಕೆ ಘಾತಕವಾಗಿ ಪರಿಣಮಿಸಿದವರೆಂದರೆ ಕಾಗಿಸೊ ರಬಾಡ, ವಿಯಾನ್‌ ಮುಲ್ಡರ್‌ ಮತ್ತು ಕೇಶವ್‌ ಮಹಾರಾಜ್‌. ಮೂವರೂ ತಲಾ 3 ವಿಕೆಟ್‌ ಉರುಳಿಸಿದರು. ಈ ಆಕ್ರಮಣದ ವೇಳೆ ರಬಾಡ ಅತೀ ಕಡಿಮೆ 11,817 ಎಸೆತಗಳಲ್ಲಿ 300 ವಿಕೆಟ್‌ ಉರುಳಿಸಿದ ದಾಖಲೆ ಸ್ಥಾಪಿಸಿದರು. ಪಾಕಿಸ್ಥಾನದ ವಕಾರ್‌ ಯೂನಿಸ್‌ ಅವರ ದಾಖಲೆ ಪತನಗೊಂಡಿತು (12,602). 30 ರನ್‌ ಮಾಡಿದ ಆರಂಭಕಾರ ಮಹಮದುಲ್ಲ ಹಸನ್‌ ಜಾಯ್‌ ಅವರದೇ ಬಾಂಗ್ಲಾ ಸರದಿಯ ಹೆಚ್ಚಿನ ಗಳಿಕೆ.

ತೈಜುಲ್‌ಗೆ 5 ವಿಕೆಟ್‌
ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಮ್‌ ಹರಿಣಗಳ ಪಾಲಿಗೆ ಘಾತಕವಾಗಿ ಪರಿಣಮಿಸಿದರು. ಉರುಳಿದ 6 ವಿಕೆಟ್‌ಗಳಲ್ಲಿ ತೈಜುಲ್‌ ಐದನ್ನು ತಮ್ಮದಾಗಿಸಿಕೊಂಡಿದ್ದಾರೆ. ನೀಡಿದ್ದು 49 ರನ್‌.

ದಕ್ಷಿಣ ಆಫ್ರಿಕಾದ 6 ವಿಕೆಟ್‌ 108 ರನ್ನಿಗೆ ಉದುರಿತ್ತು. ಆದರೆ ಕೈಲ್‌ ವೆರೇಯ್ನ (18) ಮತ್ತು ವಿಯಾನ್‌ ಮುಲ್ಡರ್‌ (17) ಆತಿಥೇಯರ ದಾಳಿಯನ್ನು ತಡೆದು ನಿಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ಟೋನಿ ಡಿ ಝೋರ್ಜಿ 30, ರಿಯಾನ್‌ ರಿಕಲ್‌ಸ್ಟನ್‌ 27 ಮತ್ತು ಟ್ರಿಸ್ಟನ್‌ ಸ್ಟಬ್ಸ್ 23 ರನ್‌ ಮಾಡಿದರು.

Advertisement

49ಕ್ಕೆ 5 ವಿಕೆಟ್‌ ಕಿತ್ತ ತೈಜುಲ್‌ ಇಸ್ಲಾಮ್‌.

Advertisement

Udayavani is now on Telegram. Click here to join our channel and stay updated with the latest news.

Next