Advertisement

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

07:39 PM Dec 08, 2021 | Team Udayavani |

ಢಾಕಾ: ಮತ್ತೊಮ್ಮೆ ಬೌಲಿಂಗ್‌ ಮ್ಯಾಜಿಕ್‌ ಮಾಡಿದ ಪಾಕಿಸ್ಥಾನ ಆತಿಥೇಯ ಬಾಂಗ್ಲಾದೇಶ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 8 ರನ್ನುಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

Advertisement

ಮಳೆಯಿಂದ ತೀವ್ರ ಅಡಚಣೆಗೊಳಗಾದರೂ ಈ ಪಂದ್ಯಕ್ಕೆ ಸ್ಪಷ್ಟ ಫ‌ಲಿತಾಂಶ ಲಭಿಸಿದ್ದೊಂದು ಅಚ್ಚರಿ.

ಪಾಕಿಸ್ಥಾನದ 300 ರನ್ನಿಗೆ ಜವಾಬು ನೀಡಿದ ಬಾಂಗ್ಲಾದೇಶ ಪಂದ್ಯದ ಅಂತಿಮ ದಿನವಾದ ಬುಧವಾರ 87 ರನ್ನಿಗೆ ಕುಸಿದು ಫಾಲೋಆನ್‌ಗೆ ತುತ್ತಾಯಿತು. ದ್ವಿತೀಯ ಸರದಿಯಲ್ಲೂ ಪಾಕಿಸ್ಥಾನ ಘಾತಕ ಬೌಲಿಂಗ್‌ ದಾಳಿ ನಡೆಸಿತು; ಬಾಂಗ್ಲಾ ಸಣ್ಣ ಮಟ್ಟದ ಹೋರಾಟ ನೀಡಿತಾದರೂ ಅಂತಿಮವಾಗಿ 205ಕ್ಕೆ ಆಲೌಟ್‌ ಆಯಿತು. ಸ್ಪಿನ್ನರ್‌ ಸಾಜಿದ್‌ ಖಾನ್‌ ಪಾಕಿಸ್ಥಾನದ ಬೌಲಿಂಗ್‌ ಹೀರೋ ಆಗಿ ಮೆರೆದಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 42ಕ್ಕೆ 8 ವಿಕೆಟ್‌ ಕೆಡವಿದ್ದ ಅವರು, ದ್ವಿತೀಯ ಇನ್ನಿಂಗ್ಸ್‌ನಲ್ಲಿ 86 ರನ್ನಿತ್ತು 4 ವಿಕೆಟ್‌ ಉರುಳಿಸಿದರು.

ಬಾಂಗ್ಲಾದೇಶದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶಕಿಬ್‌ ಅಲ್‌ ಹಸನ್‌ 63 ರನ್‌ ಮಾಡಿದರು. ಮುಶ್ಫಿಕರ್‌ ರಹೀಂ 48, ಲಿಟನ್‌ ದಾಸ್‌ 45 ರನ್‌ ಹೊಡೆದರು.

ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

Advertisement

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-4 ವಿಕೆಟಿಗೆ 300 ಡಿಕ್ಲೇರ್‌. ಬಾಂಗ್ಲಾದೇಶ-87 (ಶಕಿಬ್‌ 33, ನಜ್ಮುಲ್‌ 30, ಸಾಜಿದ್‌ 42ಕ್ಕೆ 8) ಮತ್ತು 205 (ಶಕಿಬ್‌ 63, ರಹೀಂ 48, ದಾಸ್‌ 45, ಸಾಜಿದ್‌ 86ಕ್ಕೆ 4, ಅಫ್ರಿದಿ 31ಕ್ಕೆ 2, ಹಸನ್‌ ಅಲಿ 37ಕ್ಕೆ 2).

ಪಂದ್ಯಶ್ರೇಷ್ಠ: ಸಾಜಿದ್‌ ಖಾನ್‌.
ಸರಣಿಶ್ರೇಷ್ಠ: ಅಬಿದ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next