ಒಟ್ಟಾವ(ಕೆನಡಾ): ಸಿಖ್ ಪ್ರತ್ಯೇಕತಾವಾದಿಯ ಹ*ತ್ಯೆಯ ಪ್ರಕರಣದಲ್ಲಿ ಕೆಲವು ಭಾರತೀಯ ರಾಯಭಾರಿಗಳು ಶಾಮೀಲಾಗಿರುವುದಾಗಿ ಕೆನಡಾ ಪೊಲೀಸರು ಆರೋಪಿಸಿದ್ದ ಬೆನ್ನಲ್ಲೇ ಉಭಯ ದೇಶಗಳ ನಡುವೆ ತೀವ್ರವಾದ ರಾಜತಾಂತ್ರಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ. ಮತ್ತೊಂದೆಡೆ ರಾಷ್ಟ್ರೀಯ ಸ್ವಯಂ ಸೇವಕ(RSS)ವನ್ನು ನಿಷೇಧಿಸಬೇಕೆಂದು ಅಗ್ರಹಿಸಿರುವ ಸಿಖ್ ಮುಖಂಡ ಜಗ್ಮೀತ್ ಸಿಂಗ್, ಭಾರತೀಯ ರಾಯಭಾರಿಗಳ ವಿರುದ್ಧ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿರುವುದಾಗಿ ವರದಿ ತಿಳಿಸಿದೆ.
ಜಗ್ಮೀತ್ ಸಿಂಗ್ ನ್ಯೂ ಡೆಮೋಕ್ರಟಿಕ್ ಪಕ್ಷ(NDP)ದ ಮುಖಂಡನನಾಗಿದ್ದು, ಈತ ಆಡಳಿತಾರೂಢ ಪ್ರಧಾನಮಂತ್ರಿ ಜಸ್ಟೀನ್ ಟ್ರೂಡೊ ಸರ್ಕಾರಕ್ಕೆ ಬೆಂಬಲ ನೀಡಿತ್ತು.
ಕೆನಡಾ ಸರ್ಕಾರದ ಆರೋಪವನ್ನು ಅಲ್ಲಗಳೆದಿರುವ ಭಾರತ ಸರಕಾರ, ಕೆನಡಾ ಸರ್ಕಾರ ಭಯೋತ್ಪಾದಕರ ಸಂಘಟನೆಯನ್ನು ಪೋಷಿಸುತ್ತಿದ್ದು, ಪ್ರತ್ಯೇಕತವಾದಿಗಳ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದೆ.
ಖಲಿಸ್ತಾನ ಪರ ನಿಲುವು ಹೊಂದಿರುವ ಎನ್ ಡಿಪಿ ಮುಖಂಡ, ಒಟ್ಟಾವದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ, ಒಂದು ವೇಳೆ ಕೆನಡಾ ಪ್ರಜೆಗಳನ್ನು ರಕ್ಷಿಸಲು ಅಗತ್ಯವಿರುವ ಇತರ ಕ್ರಮಗಳ ಬಗ್ಗೆ ಚರ್ಚಿಸಲು ಸರ್ಕಾರ ತುರ್ತು ಸಭೆ ಕೆರೆಯಬೇಕೇಂದು ಒತ್ತಾಯಿಸಿದೆ,
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ರಾಯಭಾರಿಗಳ ಮೇಲೆ ಕಠಿನ ನಿರ್ಬಂಧ ವಿಧಿಸಬೇಕು ಎಂದು ನಾವು ಕೆನಡಾ ಸರ್ಕಾರಕ್ಕೆ ಒತ್ತಾಯಿಸಿರುವುದಾಗಿ ಸಿಂಗ್ ತಿಳಿಸಿದ್ದು, ಭಾರತದ ವಿರುದ್ಧದ ಆರೋಪಗಳ ಕುರಿತು ಕೆನಡಾ ಸರ್ಕಾರಕ್ಕೆ ದೀರ್ಘವಾದ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.