Advertisement

ಏಕಬಳಕೆಯ ಪ್ಲಾಸ್ಟಿಕ್‌ ಉತ್ಪನ್ನ ನಿಷೇಧ 

12:44 AM Aug 14, 2021 | Team Udayavani |

ಹೊಸದಿಲ್ಲಿ: ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್‌ ವಸ್ತುಗಳನ್ನು ಮುಂದಿನ ವರ್ಷದ ಜುಲೈ 1ರಿಂದ ನಿಷೇಧಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಏಕ ಬಳಕೆಯ ಪ್ಲಾಸ್ಟಿಕ್‌ ಲೋಟ, ತಟ್ಟೆ, ಸ್ಟ್ರಾ ಇತ್ಯಾದಿಗಳಿಗೆ ನಿಷೇಧ ಬೀಳಲಿದೆ.

Advertisement

ಅಲ್ಲದೆ ಪ್ಲಾಸ್ಟಿಕ್‌ ಚೀಲಗಳ ದಪ್ಪವನ್ನು 50 ಮೈಕ್ರಾನ್‌ಗಳಿಂದ 120 ಮೈಕ್ರಾನ್‌ಗಳಿಗೆ ಏರಿಸಲು ಸರಕಾರ ನಿರ್ಧರಿಸಿದೆ. ಇದು 2 ಹಂತಗಳಲ್ಲಿ ಅನುಷ್ಠಾನ ಗೊಳ್ಳಲಿದೆ. ಮೊದಲನೇ ಹಂತದಲ್ಲಿ ಪ್ರಸಕ್ತ ವರ್ಷದ ಸೆ. 30ರ ಬಳಿಕ 75 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಚೀಲಗಳಿಗೆ ನಿಷೇಧ ವಿಧಿಸಲಾಗುತ್ತದೆ. 2022ರ ಡಿ. 31ರ ಬಳಿಕ 120 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಬ್ಯಾಗ್‌ಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗುತ್ತದೆ.

ಯಾವುದೆಲ್ಲ  ನಿಷೇಧ?  :

ಪ್ಲಾಸ್ಟಿಕ್‌ ಹಿಡಿ ಇರುವ ಇಯರ್‌ ಬಡ್‌, ಬಲೂನುಗಳ ಪ್ಲಾಸ್ಟಿಕ್‌ ಹಿಡಿಕೆ, ಪ್ಲಾಸ್ಟಿಕ್‌ ಧ್ವಜ, ಕ್ಯಾಂಡಿ ಸ್ಟಿಕ್‌, ಐಸ್‌ಕ್ರೀಂ ಸ್ಟಿಕ್‌, ಅಲಂಕಾರ ಕ್ಕಾಗಿ ಥರ್ಮೊ ಕೋಲ್‌, ಪ್ಲಾಸ್ಟಿಕ್‌ನ ತಟ್ಟೆ, ಕಪ್‌, ಲೋಟ, ಫೋರ್ಕ್‌, ಚಮಚೆ, ಚೂರಿ ಯಂತಹ ಕಟ್ಲೆರಿ ವಸ್ತುಗಳು, ಸಿಹಿ ತಿಂಡಿ, ಆಮಂತ್ರಣ ಪತ್ರ, ಸಿಗರೇಟು ಪ್ಯಾಕ್‌ ನಂಥವಕ್ಕೆ ಪ್ಲಾಸ್ಟಿಕ್‌ ಹೊದಿಕೆ, 100 ಮೈಕ್ರಾನ್‌ ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌ಗಳು, ಕಲಕುವ ಹಿಡಿಗಳು.

Advertisement

Udayavani is now on Telegram. Click here to join our channel and stay updated with the latest news.

Next