ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಹುಕ್ಕಾ ಬಾರ್‌ಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ಒಂದು ವೇಳೆ ಹುಕ್ಕಾ ಬಾರ್ ಕಂಡುಬಂದಲ್ಲಿ 1 ವರ್ಷದಿಂದ 3 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ರಾಜ್ಯ ಸರಕಾರ ಮುಂದಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಿದರೆ, 21 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಬೀಡಿ, ಸಿಗರೇಟು ಮಾರಾಟ ಮಾಡಿದರೆ ಇಷ್ಟು ದಿನ ಇದ್ದ 200 ರೂ. ದಂಡವನ್ನು1 ಸಾವಿರ ರೂ.ಗೆ ಏರಿಕೆ ಮಾಡ
ಲಾಗಿದೆ. ಇದಕ್ಕಾಗಿ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತ ರಣೆಯ ವಿನಿಯಮ) (ಕರ್ನಾ ಟಕ ತಿದ್ದುಪಡಿ) ಮಸೂದೆ- 2024ಕ್ಕೆ ವಿಧಾನಸಭೆಯಲ್ಲಿ ಬುಧ ವಾರ ಅಂಗೀಕಾರ ದೊರೆತಿದೆ.
ಮಸೂದೆ ಮಂಡಿಸಿ ವಿವರಣೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪಬ್, ಬಾರ್, ರೆಸ್ಟೋರೆಂಟ್ ಸಹಿತ ಯಾವುದೇ ಪ್ರದೇಶದಲ್ಲೂ ಹುಕ್ಕಾ ಬಾರ್ ನಡೆಸುವಂತಿಲ್ಲ. ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸಿದ್ದು, ಅದನ್ನು ನಡೆಸುವವರ ವಿರುದ್ಧ ಕ್ರಮ ಜರಗಿಸಲಾಗುತ್ತದೆ.
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವವರಿಗೆ 1 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದರ ಮೇಲಿನ ನಿರ್ಬಂಧವನ್ನು ಮುಂದುವರಿಸಿರುವ ಸರಕಾರವು ಬಿಡಿಯಾಗಿ, ಬಿಡಿಯಾಗಿ ಯಾರಿಗೂ ಬೀಡಿ, ಸಿಗ ರೇಟು ಮಾರುವಂತಿಲ್ಲ. 30 ಕೊಠಡಿ ಹೊಂದಿರುವ ಹೊಟೇಲ್, 30ಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಆಸನ ಸಾಮರ್ಥ್ಯ ಇರುವ ರೆಸ್ಟೋರೆಂಟ್, ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಧೂಮಪಾನ ಪ್ರದೇಶ ನಿರ್ಮಿಸಬೇಕೆನ್ನುವ ಕೇಂದ್ರ ಸರಕಾರದ ನಿಯಮವನ್ನು ಅಳವಡಿಸಿದೆ.
100 ಗಜ ಅಂತರ
ಶಿಕ್ಷಣ ಸಂಸ್ಥೆಗಳಿಂದ 100 ಗಜ ಅಂತರದೊಳಗೆ ತಂಬಾಕು ಉತ್ಪನ್ನ ಮಾರುವಂತಿಲ್ಲ ಎಂದು ಹಿಂದೆ ಇದ್ದ ನಿಯಮವನ್ನು ಬದಲಿಸಿ, 100 ಮೀಟರ್ ಅಂತರ ಎಂದು ತಿದ್ದುಪಡಿ ಮಾಡಲಾಗಿದೆ. ಅಲ್ಲದೆ ಈ ಹಿಂದೆ 18 ವರ್ಷ ವಯಸ್ಸಿನೊಳಗಿನವರಿಗೆ ತಂಬಾಕು ಉತ್ಪನ್ನ ಮಾರುವಂತಿಲ್ಲ ಎಂಬ ನಿಯಮವಿತ್ತು. ಇದನ್ನು
ಬದಲಿಸಿ 21 ವರ್ಷ ವಯಸ್ಸಿಗಿಂತ ಕೆಳಗಿನವರಿಗೆ ಎಂದು ಬದ ಲಾಯಿಸಲಾಗಿದೆ.