Advertisement

Rajasthan: ರಾಜಸ್ಥಾನದಲ್ಲಿ ಹಿಜಾಬ್‌ ನಿಷೇಧಿಸಿ: ಬಿಜೆಪಿ ಶಾಸಕ

12:51 AM Jan 31, 2024 | Team Udayavani |

ಜೈಪುರ: ಕರ್ನಾಟಕದಲ್ಲಿನ ಹಿಜಾಬ್‌ ಗಲಾಟೆ ಸುಪ್ರೀಂ ಕೋರ್ಟ್‌ನಲ್ಲಿ ಇರು ವಂತೆಯೇ ರಾಜಸ್ಥಾನದಲ್ಲಿ ಬಿಜೆಪಿ ಶಾಸಕ ಹಾಗೂ ಸಚಿವರೊಬ್ಬರ ಹಿಜಾಬ್‌ ನಿಷೇಧ ಕುರಿತ ಹೇಳಿಕೆ ಗದ್ದಲಕ್ಕೆ ಕಾರಣವಾಗಿದೆ.

Advertisement

ಗಣರಾಜ್ಯೋತ್ಸವದ ದಿನ ಗಂಗಾಪೋಲ್‌ ಪ್ರದೇಶದ ಸರಕಾರಿ ಶಾಲೆಗೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ಬಾಲ ಮುಕುಂದ್‌ ಆಚಾರ್ಯ ಶಾಲೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮುಸ್ಲಿಂ ಬಾಲಕಿಯರು ಹಿಜಾಬ್‌ ಧರಿಸಿ ಬರುತ್ತಿದ್ದಾರೆ. ಶಾಲೆಗೆ ಹಿಜಾಬ್‌ ಹಾಕಿ ಕೊಂಡು ಬರುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳು “ಭಾರತ್‌ ಮಾತಾ ಕೀ ಜೈ ಹಾಗೂ ಸರಸ್ವತಿ ಮಾತಾ ಕೀ ಜೈ’ ಎಂದು ಘೋಷಣೆ ಕೂಗು ತ್ತಿದ್ದಾರೆ. ಆದರೆ ಕೆಲವು ಬಾಲಕಿಯರು ಏಕೆ ಈ ಘೋಷಣೆ ಕೂಗುತ್ತಿಲ್ಲ ಎಂದು ಶಾಸ ಕರು ಪ್ರಶ್ನಿಸಿದ್ದರು. ಈ ಘಟನೆ ಬಳಿಕ ಶಾಸ ಕರ ವಿರುದ್ಧ ಮುಸ್ಲಿಂ ಬಾಲಕಿಯರ ಗುಂಪು ಪೊಲೀಸರಿಗೆ ದೂರು ನೀಡಿತ್ತು. ಜತೆಗೆ ಹಿಂದೂ ವಿದ್ಯಾರ್ಥಿಗಳ ಗುಂಪೂ ಪ್ರತಿ ದೂರು ಸಲ್ಲಿಸಿದೆ.
ಕೃಷಿ ಸಚಿವ ಕಿರೋಡಿ ಲಾಲ್‌ ಮೀನಾ ಪ್ರತಿಕ್ರಿಯಿಸಿ, “ಮುಸ್ಲಿಮರು ಅಪರಾಧದ ಕಡೆಗೆ ಹೆಚ್ಚು ಯೋಚಿಸುತ್ತಾರೆ. ಬಾಲಕಿ ಯರು ಹಿಜಾಬ್‌ ಧರಿಸಿ ಶಾಲೆಗೆ ಹೋದ ಲ್ಲಿ ಶಾಲೆಯಲ್ಲಿ ಶಿಸ್ತು ಇರುವುದಿಲ್ಲ. ಈ ಬಗ್ಗೆ ಸಿಎಂ ಭಜನ್‌ ಲಾಲ್‌ ಶರ್ಮಾ ಜತೆಗೆ ಚರ್ಚಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next