Advertisement

ಹಸಿರಿನಿಂದ ನಳನಳಿಸುತ್ತಿದೆ ಭತ್ತದ ಸಸಿಮಡಿ

09:06 PM Jul 04, 2021 | Team Udayavani |

ಸಿರುಗುಪ್ಪ: ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿರುವ ವಿವಿಧ ಗ್ರಾಮಗಳ ರೈತರು ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲು ಬೇಕಾದ ಭತ್ತದ ಸಸಿಮಡಿಗಳನ್ನು ಬೆಳೆದಿದ್ದು, ಇತ್ತೀಚೆಗೆ ಸುರಿದ ಮಳೆಯು ಭತ್ತದ ಸಸಿಮಡಿಗಳು ಬೆಳೆಯಲು ಸಹಕಾರಿಯಾಗಿದ್ದು, ರೈತರು ಬೆಳೆದ ಸಸಿಮಡಿಗಳು ಹಸಿರಿನಿಂದ ನಳನಳಿಸುತ್ತಿವೆ.

Advertisement

ತಾಲೂಕಿನ ಬಾಗೇವಾಡಿ, ಬೃಂದಾವನ ಕ್ಯಾಂಪ್‌, ಶ್ರೀಧರಗಡ್ಡೆ, ಮಣ್ಣೂರು, ಮಣ್ಣೂರು ಸೂಗೂರು, ನಡಿವಿ, ಉಡೇಗೋಳ, ನಿಟ್ಟೂರು, ಹೆರಕಲ್ಲು, ಕೆಂಚನಗುಡ್ಡ, ಹೊನ್ನಾರಹಳ್ಳಿ, ಚಿಕ್ಕಬಳ್ಳಾರಿ, 25-ಹಳೇಕೋಟೆ, ಹಚ್ಚೊಳ್ಳಿ, ಚಳ್ಳೆಕೂಡೂರು, ಮಾಟೂರು, ರುದ್ರಪಾದ, ದೇಶನೂರು, ಇಬ್ರಾಹಿಂಪುರ ಗ್ರಾಮಗಳ ರೈತರು ತುಂಗಭದ್ರಾ ನದಿಯ ನೀರನ್ನು ಬಳಸಿ ಏತನೀರಾವರಿ ಮೂಲಕ ತಮ್ಮ ಜಮೀನುಗಳಿಗೆ ನೀರು ಹರಿಸಿಕೊಂಡು ಭತ್ತದ ಸಸಿ ಮಡಿಗಳನ್ನು ಒಂದು ತಿಂಗಳ ಹಿಂದೆ ಹಾಕಿದ್ದರು.

ನಿರಂತರವಾಗಿ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಸಸಿಮಡಿ ಬೆಳೆಸಲು ರೈತರಿಗೆ ಅನುಕೂಲವಾಗಿದೆ. ಆಗಾಗ ಮಳೆ ಸುರಿಯುತ್ತಿರುವುದರಿಂದ ಭತ್ತದ ಸಸಿಮಡಿಗಳು ಯಾವುದೇ ರೋಗರುಜಿನಗಳಿಲ್ಲದೆ ಉತ್ತಮವಾಗಿ ಬೆಳೆಯಲು ಅನುಕೂಲವಾಗಿದೆ. ಕೆಲ ರೈತರು ಈಗಾಗಲೆ ಭತ್ತ ನಾಟಿಮಾಡಲು ಮುಂದಾಗಿದ್ದು, ಹೊಲದಲ್ಲಿ ನೀರು ಬಿಟ್ಟು ಟ್ರಾಕ್ಟರ್‌ನಿಂದ ಭೂಮಿಯನ್ನು ಹದ ಮಾಡಿಕೊಳ್ಳುತ್ತಿರುವುದು ನದಿ ತೀರದಲ್ಲಿ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next