Advertisement

ಆಟೋ ಚಾಲಕರಿಗೆ ಆಹಾರ ಕಿಟ್‌ ವಿತರಣೆ

10:15 PM Jun 18, 2021 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಕೋವೀಡ್‌ ಲಸಿಕೆಗೆ ಕೊರತೆಯಿಲ್ಲ, ಈಗಾಗಲೇ 73ಸಾವಿರಕ್ಕೂ ಹೆಚ್ಚು ಜನ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ನೇಮರಾಜ ನಾಯ್ಕ ತಿಳಿಸಿದರು. ತಂಬ್ರಹಳ್ಳಿ ವ್ಯಾಪ್ತಿಯ ಆಟೋ ಚಾಲಕರಿಗೆ ಆಹಾರದ ಕಿಟ್‌ ವಿತರಿಸಿ ಅವರು ಮಾತನಾಡಿದರು. ಕೊರೊನಾ ಲಸಿಕೆಯನ್ನು ಸರಕಾರ ಸಮರ್ಪಕವಾಗಿ ವಿತರಿಸುತ್ತಿದೆ.

Advertisement

18 ವರ್ಷ ಮೇಲ್ಪಟ್ಟವರಿಗೆ ತಾಲೂಕಿನಲ್ಲಿ 4ಸಾವಿರಕ್ಕೂ ಹೆಚ್ಚು ಲಸಿಕೆ ಹಾಕಲಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಯುವ ಮೋರ್ಚಾದವರು ಸೇವಾ ಹಿ ಸಂಘಟನ್‌ ಎಂಬ ಕಲ್ಪನೆ ಇಟ್ಟುಕೊಂಡು ಬೂತ್‌ ಮಟ್ಟದಿಂದ ಲಸಿಕೆ ಹಾಕಿಸಿಕೊಳ್ಳುವಂತೆ ಮೊಬೈಲೈಜ್‌ ಮಾಡುತ್ತಿದ್ದಾರೆ. ಆದರೆ ತಹಶೀಲ್ದಾರರು ಇದನ್ನು ಟೀಕಿಸುತ್ತಿರುವುದು ಸಮಂಜಸವಲ್ಲ.

ನಮ್ಮ ಯುವಕರು ಬಿಜೆಪಿ ಬ್ಯಾನರ್‌ ಅಡಿ ಲಸಿಕೆ ಹಾಕಿಸುತ್ತಿಲ್ಲ ಎಂಬುದನ್ನು ತಹಶೀಲ್ದಾರರು ತಿಳಿಯಬೇಕಿದೆ. ಕಾಂಗ್ರೆಸ್‌ ನವರು ಲಸಿಕೆ ಹಾಕಿಸುವಂತೆ ಜಾಗೃತಿ ಮೂಡಿಸಲಿ ತಪ್ಪಲ್ಲ. ತಹಶೀಲ್ದಾರ್‌ ಶರಣಮ್ಮ ಕಾಂಗ್ರೆಸ್‌ ಶಾಸಕರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಪಟ್ಟಣದ ಹಳೆವೂರಿನಲ್ಲಿ ನಮ್ಮ ಕಾರ್ಯಕರ್ತರೇ ಲಸಿಕೆ ಹಾಕಿಸಿಕೊಳ್ಳಿ ಪಟ್ಟಣದ ಕಾಲೋನಿಗಳಲ್ಲಿ ಡಂಗೂರ ಹಾಕಿಸಿ ಜಾಗೃತಿ ಮೂಡಿಸಿದ್ದಾರೆ ಎಂದರು.

ಅಭಿವೃದ್ಧಿ ಕಡೆಗಣನೆ: ಸರಕಾರ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದೆ. ಇಲ್ಲಿನ ಜನಪ್ರತಿನಿಧಿಗಳು ಬಳಕೆ ಮಾಡಿಕೊಳ್ಳುತ್ತಿಲ್ಲ. ಎಷ್ಟೋ ಕಡೆ ಹಳ್ಳಿಗಳಿಗೆ ಸಮರ್ಪಕ ರಸ್ತೆಯಿಲ್ಲ. ಶಾಸಕರು ಸ್ವಂತ ತೋಟದ ಮನೆಗೆ ಕೋಟಿ ರೂ. ವೆಚ್ಚದ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಶಾಸಕ ಭೀಮಾನಾಯ್ಕ ವಿರುದ್ಧ ಗುಡುಗಿದರು. ತಂಬ್ರಹಳ್ಳಿ ಚಿಲುಗೋಡು ಗ್ರಾಮದ ರೈತರ ಹೊಲಗಳಿಗೆ ನೀರುಣಿಸುವ ಕುದುರೆ ಕಾಲುವೆ ಯೋಜನೆಗೆ ಬಂದ ಅನುದಾನ ಶಾಸಕರ ನಿಷ್ಕಾಳಜಿಯಿಂದಾಗಿ ವಾಪಸ್‌ ಹೋಗಿದೆ.

ಇವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇಂತಹ ಶಾಸಕರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ತಾಲೂಕಿನ 3500ಕಿಟ್‌ಗಳನ್ನು ಅಟೋ ಚಾಲಕರಿಗೆ ವಿತರಿಸಲಾಗುತ್ತಿದೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಸೇರಿ ಕಿಟ್‌ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು. ಮಾಜಿ ಶಾಸಕ ಕೆ.ನೇಮರಾಜನಾಯ್ಕ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ 500ಕ್ಕೂ ಹೆಚ್ಚು ಅಟೋ ಚಾಲಕರಿಗೆ ಆಹಾರ ಕಿಟ್‌ ವಿತರಿಸಿರು.

Advertisement

ವೈರಸ್‌ನಿಂದಾಗಿ ಗ್ರಾಮದ ಮ್ಯಾಗಳಮನಿ ಬಸವರಾಜಪ್ಪನವರ ಮನೆಯೊಂದರಲ್ಲಿ ಮೂವರು ಮೃತಪಟ್ಟಿದ್ದರಿಂದ ಅವರ ಮನೆಗೆ ಭೇಟಿನೀಡಿ ಸಾಂತ್ವನ ಹೇಳಿದರು. ಜಿಪಂ ಸದಸ್ಯೆ ಶಾರದಮ್ಮ ಶೇಖರಪ್ಪ, ಗ್ರಾಪಂ ಸದಸ್ಯರಾದ ಮಡಿವಾಳ ಮಂಜುನಾಥ(ಹನಿ), ಸಂಡೂರು ಮೆಹಬೂಬ್‌ಬಾಷ, ಸಿದ್ದಾರೆಡ್ಡಿ, ಬಿಜೆಪಿ ಮುಖಂಡರಾದ ಭದ್ರವಾಡಿ ಚಂದ್ರಶೇಖರ, ಕೆ.ರೋಹಿತ್‌, ಎಸ್‌.ಎಂ.ಪ್ರಕಾಶ, ಗಂಗಾಧರಗೌಡ, ಸೊಬಟಿ ಹರೀಶ್‌, ಮೋರಿಗೇರಿ ವಿಶ್ವನಾಥ, ಕಡ್ಡಿ ಕೊಟ್ರೇಶ, ಕಿತೂ°ರು ಶಿವಕುಮಾರ, ಮಡಿವಾಳರ ಆನಂದ, ಬಿ.ನಿಂಗರಾಜ, ಪರಮೇಶ್ವರಪ್ಪ, ಬಾಳಿಹಣ್ಣಿ ಚನ್ನಪ್ಪ, ನರೇಗಲ್‌ ಕೊಟ್ರೇಶ, ಗಡಿಹಳ್ಳಿ ಪ್ರವೀಣ, ಹನಸಿ ರಂಗನಾಥ, ರಾಜು ಪಾಟೀಲ್‌, ಬಾಗಳಿ ವೆಂಕಟೇಶ, ಆನೇಕಲ್‌ ಕೊಟ್ರೇಶ, ಸಿದ್ದರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next