Advertisement

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲು ಮನವಿ

03:38 PM Feb 16, 2022 | Team Udayavani |

ಬಳ್ಳಾರಿ: ಪರಿಶಿಷ್ಟ ಪಂಗಡದ ಮೀಸಲಾತಿಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಬೇಕುಎಂದು ಆಗ್ರಹಿಸಿ ಅಖೀಲ ಕರ್ನಾಟಕ ವಾಲ್ಮೀಕಿನಾಯಕರ ಮಹಾಸಭಾದಿಂದ ಜಿಲ್ಲಾಡಳಿತಕ್ಕೆಮಂಗಳವಾರ ಮನವಿ ಸಲ್ಲಿಸಲಾಯಿತು.

Advertisement

ಪರಿಶಿಷ್ಟ ಪಂಗಡದ ಮೀಸಲಾತಿಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ವಾಲ್ಮೀಕಿ ನಾಯಕ ಸಮುದಾಯವು ಕಳೆದ30 ವರ್ಷಗಳಿಂದ ಹೋರಾಟ ಮಾಡುತ್ತಿದೆ.ಆದರೆ, ಈವರೆಗೆ ಯಾವುದೇ ಸರ್ಕಾರಗಳು ಈನಿಟ್ಟಿನಲ್ಲಿ ಕ್ರಮಕೈಗೊಳ್ಳದೆ ಬರೀ ಭರವಸೆಯಲ್ಲೇದಿನದೂಡಿವೆ.

ರಾಜ್ಯ ಸರ್ಕಾರದ ಈನಿರ್ಲಕ್ಷé ಧೋರಣೆ ಖಂಡಿಸಿರುವ ವಾಲ್ಮೀಕಿಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ,ಕಳೆದ ಫೆ.9 ರಂದು ಮಠದಲ್ಲಿ ಕೈಗೊಂಡನಿರ್ಣಯದಂತೆ ಫೆ.10 ರಿಂದ ಬೆಂಗಳೂರಿನμÅàಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹಕೈಗೊಂಡಿದ್ದಾರೆ. ಆದರೆ, ಈವರೆಗೆಸರ್ಕಾರವಾಗಲಿ, ಸರ್ಕಾರದ ಸಚಿವರಾಗಲಿಸ್ಥಳಕ್ಕೆ ಭೇಟಿ ನೀಡಿ ಸ್ವಾಮೀಜಿಗಳನ್ನುಪರಾಮರ್ಶಿಸಿಲ್ಲ. ಇದು ಸಮುದಾಯವನ್ನುಕೆರಳಿಸಿದೆ.

ಶ್ರೀಗಳ ಆದೇಶಕ್ಕೆ ಕಾಯುತ್ತಿರುವಸಮುದಾಯ, ರಾಜ್ಯ ಸರ್ಕಾರದ ವಿರುದ್ಧಉಗ್ರ ಹೋರಾಟ ರೂಪಿಸಲು ಸಿದ್ಧವಾಗಿದೆ.ಹಾಗಾಗಿ ರಾಜ್ಯ ಸರ್ಕಾರ ಇನ್ನಷ್ಟು ದಿನ ವಿಳಂಬಮಾಡದೆ, ಅತಿ ಶೀಘ್ರದಲ್ಲಿ ರಾಜ್ಯ ಸರ್ಕಾರಗಮನಹರಿಸಿ ಮೀಸಲಾತಿ ಪ್ರಮಾಣ ಹೆಚ್ಚಳಮಾಡಬೇಕು ಎಂದು ಮಹಾಸಭಾ ಜಿಲ್ಲಾಧ್ಯಕ್ಷದೊಡ್ಡ ಎರ್ರಿಸ್ವಾಮಿ, ಪ್ರಧಾನ ಕಾರ್ಯದರ್ಶಿಕೆ.ಕೃಷ್ಣ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಮಹಾಸಭಾ, ಸಮುದಾಯದ ಮಂಜಪ್ಪ,ಎನ್‌.ಸತ್ಯನಾರಾಯಣ, ಟಿ.ಎಚ್‌. ಲಕ್ಷ್ಮಿದೇವಿ,ಹನುಮಂತಪ್ಪ, ಎಂ.ಹೊನ್ನೂರಪ್ಪ, ಕೆ.ಈರಪ್ಪ,ಎನ್‌.ಮಂಜುನಾಥ, ಪುಷ್ಪ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next